Tayron R-line: ರಾಜನಂತೆ ಮೆರೆದ ಫಾರ್ಚುನರ್‌ಗೆ ಭಯ ಶುರು! ಭಾರತದಲ್ಲಿ ಹೊಸ 7-ಸೀಟರ್ ಅನಾವರಣ

ಫೋಕ್ಸ್‌ವ್ಯಾಗನ್ ಇಂಡಿಯಾ (Volkswagen India) 2026ರಲ್ಲಿ ಬಿಡುಗಡೆಗೆ ಸಜ್ಜಾಗಿರುವ ತನ್ನ ಮೊದಲ ಕಾರನ್ನು ಇಂದು ಅನಾವರಣಗೊಳಿಸಿದೆ. ಹೌದು, ಫೋಕ್ಸ್‌ವ್ಯಾಗನ್ ಇಂಡಿಯಾ ಅಂತಿಮವಾಗಿ ಹೊಸ ಟೇರಾನ್ ಆರ್-ಲೈನ್ (Tayron R-line) ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಕಾರು ಭಾರತದಲ್ಲಿ ಕಂಪನಿಯ ಲೈನ್‌ಅಪ್‌ನಲ್ಲಿ ಅಗ್ರಸ್ಥಾನದಲ್ಲಿರಲಿದ್ದು, 7 - ಸೀಟರ್ ಆಯ್ಕೆಯಲ್ಲಿ ಪ್ರತ್ಯೇಕವಾಗಿ ನೀಡಲಾಗುವುದು. ಹೊಸ ಎಸ್‌ಯುವಿಯ ಬೆಲೆಗಳನ್ನು ಫೆಬ್ರವರಿ 2026 ರಲ್ಲಿ ಘೋಷಿಸುವ ನಿರೀಕ್ಷೆಯಿದೆ. ಹೊಸ ಎಸ್‌ಯುವಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೊಸ ಎಸ್‌ಯುವಿ ಅನಾವರಣ ವೇದಿಕೆಯಲ್ಲಿ 2026 ರಲ್ಲಿ ಕಂಪನಿಯು ವರ್ಷದ ಪ್ರತಿ ತ್ರೈಮಾಸಿಕದಲ್ಲಿ ಹೊಸ ಮಾಡಲ್‌ನ್ನು ಪರಿಚಯಿಸುವ ಯೋಜನೆಗಳನ್ನು ಸಹ ಘೋಷಿಸಿದೆ. 2026 ರಲ್ಲಿ ಒಟ್ಟು 5 ಕಾರುಗಳನ್ನು ಪರಿಚಯಿಸುವ ಪ್ಲಾನ್ ಇದೆ. ಇದರಲ್ಲಿ SUV, ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್‌ಗಳು ಸೇರಿವೆ. ಪ್ರತಿಯೊಂದು ಮಾಡಲ್ ವಿಭಿನ್ನ ಗ್ರಾಹಕರ ಆದ್ಯತೆಗಳನ್ನು ಪೂರೈಸಲಿದೆ ಎಂದು ಫೋಕ್ಸ್‌ವ್ಯಾಗನ್ ಇಂಡಿಯಾ ತಿಳಿಸಿದೆ.

volkswagen-tayron-r-line-showcased-in-india-price-features-and-design

ಫೋಕ್ಸ್‌ವ್ಯಾಗನ್ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ನಿತಿನ್ ಕೊಹ್ಲಿ ಮಾತನಾಡಿ, "ಇಂದು, ಭಾರತದಲ್ಲಿ ಮೊದಲ ಬಾರಿಗೆ ನಾವು ಟೇರಾನ್ ಆರ್-ಲೈನ್ ಎಸ್‌ಯುವಿಯನ್ನು ಅನಾವರಣಗೊಳಿಸಲು ಸಂತೋಷಪಡುತ್ತೇವೆ. ಈ ವರ್ಷ ನಾವು ಇದರ ಜೊತೆಗೆ ನಾಲ್ಕು ಕಾರುಗಳನ್ನು ತರಲು ಯೋಜಿಸಿದ್ದೇವೆ, ಪ್ರತಿ ತ್ರೈಮಾಸಿಕವು ವಿಭಿನ್ನ ಪ್ರೀಮಿಯಂ ಕಾರಿನ ಮೂಲಕ ಗ್ರಾಹಕರಿಗೆ ಉತ್ಸಾಹವನ್ನು ಹೆಚ್ಚಿಸುವುದು ಮತ್ತು ಆಕಾಂಕ್ಷೆಗಳನ್ನು ಬೆಳೆಸುವ ಮಾಡಲ್‌ಗಳನ್ನು ಪರಿಚಯಿಸುವುದು ನಮ್ಮ ಉದ್ದೇಶವಾಗಿದೆ" ಎಂದರು.

ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್ ವಿಶೇಷತೆಗಳು

ಮುಂಬರಲಿರುವ ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್ ಎಸ್‌ಯುವಿಯ ಬೆಲೆಗಳು ಫೆಬ್ರವರಿಯಲ್ಲಿ ಘೋಷಿಸಲಿದ್ದಾರೆ. ಉದ್ಯಮ ಮೂಲಗಳ ಪ್ರಕಾರ ಈ ಎಸ್‌ಯುವಿ ಬೆಲೆಯು ರೂ. 45 ಲಕ್ಷದಿಂದ ರೂ. 50 ಲಕ್ಷ (ಎಕ್ಸ್-ಶೋರೂಂ) ವರೆಗೆ ಇರಬಹುದು ಎನ್ನಲಾಗಿದೆ. ಇದು ಮಾರುಕಟ್ಟೆಗೆ ಬಂದ ನಂತರ, ಟೊಯೋಟಾ ಫಾರ್ಚೂನರ್, ಎಂಜಿ ಗ್ಲೋಸ್ಟರ್, ಮುಂಬರುವ ಎಂಜಿ ಮೆಜೆಸ್ಟರ್, ಜೀಪ್ ಮೆರಿಡಿಯನ್ ಮತ್ತು ಸ್ಕೋಡಾ ಕೊಡಿಯಾಕ್‌ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದೆ.

volkswagen-tayron-r-line-showcased-in-india-price-features-and-design

ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್ ಇಂಟೀರಿಯರ್ ವಿಷಯಕ್ಕೆ ಬಂದರೆ ದೊಡ್ಡ 15-ಇಂಚಿನ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, 30 ಬಣ್ಣಗಳ ಆಯ್ಕೆಗಳೊಂದಿಗೆ ಕಸ್ಟಮೈಸ್ ಮಾಡಬಹುದಾದ ಆಂಬಿಯೆಂಟ್ ಲೈಟಿಂಗ್, ಮ್ಯಾಟ್ರಿಕ್ಸ್ ಎಲ್ಇಡಿ ಲೈಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಎಸ್‌ಯುವಿ ಮೂರನೇ ಸಾಲನ್ನು ಮಡಚಿ 850 ಲೀಟರ್‌ಗಳವರೆಗೆ ಬೂಟ್ ಜಾಗವನ್ನು ಪಡೆಯಬಹುದು.

ಸುರಕ್ಷತಾ ಫೀಚರ್‌ಗಳಲ್ಲಿ ಲೆವೆಲ್ 2 ADAS, ಒಂಬತ್ತು ಏರ್‌ಬ್ಯಾಗ್‌ಗಳು, ESC, ಹಿಲ್-ಸ್ಟಾರ್ಟ್ ಮತ್ತು ಹಿಲ್-ಡಿಸೆಂಟ್ ಕಂಟ್ರೋಲ್‌ಗಳು, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಇನ್ನೂ ಹೆಚ್ಚಿನವು ಇರಲಿವೆ. ಎಂಜಿನ್ ವಿಷಯಕ್ಕೆ ಬಂದರೆ 2.0 - ಲೀಟರ್, 4 - ಸಿಲಿಂಡರ್, ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 204 hp ಪವರ್ ಮತ್ತು 320 nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 7-ಸ್ಪೀಡ್ DSG AT ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

volkswagen-tayron-r-line-showcased-in-india-price-features-and-design

ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್‌ ದೈತ್ಯ ಎಸ್‌ಯುವಿಯಾಗಿದ್ದು, ಇದು 4792 ಮಿ.ಮೀ ಉದ್ದ, 1866 ಮಿ.ಮೀ ಅಗಲ, 1665 ಮಿ.ಮೀ ಎತ್ತರ ಮತ್ತು 2789 ಮಿ.ಮೀ ವೀಲ್‌ಬೇಸ್ ಹೊಂದಿದೆ. ಹಾಗೆಯೇ 181 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 345 ಲೀಟರ್ ಬೂಟ್‌ ಜಾಗ ಹಾಗೂ 850 ಲೀಟರ್ (3ನೇ ಸಾಲಿನ ಸೀಟನ್ನು ಮಡಿಚಿದಾಗ) ಬೂಟ್ ಜಾಗವನ್ನು ನೀಡಬಲ್ಲದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್, ಜರ್ಮನ್ ಕಾರು ತಯಾರಕರ ಪ್ರೀಮಿಯಂ 7-ಸೀಟರ್ SUV ಆಗಿದೆ. ಟಿಗುವಾನ್ ಆರ್-ಲೈನ್‌ಗಿಂತ ಮೇಲಿರುವ ಟೇರಾನ್ ಆರ್-ಲೈನ್ ಮೂಲಭೂತವಾಗಿ ಅದರ ದೊಡ್ಡ, ಮೂರು - ಸಾಲಿನ ಸಹೋದರ ಎಂದು ಹೇಳಬಹುದು, ನೀವು ಮಾರುಕಟ್ಟೆಯಲ್ಲಿ 7 - ಸೀಟರ್ ಪ್ರೀಮಿಯಂ SUV ಹುಡುಕುತ್ತಿದ್ದರೆ ಟೇರಾನ್ ಆರ್-ಲೈನ್ ಬೆಸ್ಟ್ ಆಯ್ಕೆಯಾಗಿದೆ.

More from DriveSpark

Article Published On: Thursday, January 29, 2026, 17:13 [IST]
English summary
Volkswagen tayron r line showcased in india price features and design
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+