2027ರ ನಂತರ ಈಗಿನ 5-ಸ್ಟಾರ್ ಕಾರುಗಳ ರೇಟಿಂಗ್ ಉಳಿಯುತ್ತಾ? ಕಾರು ಖರೀದಿಸುವ ಮುನ್ನ ಈ ಸತ್ಯ ತಿಳಿಯಿರಿ!

ಅಕ್ಟೋಬರ್ 19 ರಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ವಾಹನಗಳ ಕ್ರಾಶ್ ಟೆಸ್ಟ್ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ಹೊಸ ಕಾರು ಮಾದರಿಗಳಿಗೆ 2027ರ ಅಕ್ಟೋಬರ್ 1 ರಿಂದ ಪರಿಷ್ಕೃತ ಆಫ್‌ಸೆಟ್-ಫ್ರಂಟಲ್ ಮತ್ತು ಸೈಡ್-ಇಂಪ್ಯಾಕ್ಟ್ ನಿಯಮಗಳು ಜಾರಿಯಾಗಲಿವೆ. ಪ್ರಸ್ತುತ ಮಾರಾಟದಲ್ಲಿರುವ ಕಾರು ಮಾದರಿಗಳಿಗೆ 2028ರ ಅಕ್ಟೋಬರ್ 1 ರಿಂದ ಇವು ಕಡ್ಡಾಯವಾಗಲಿವೆ. ಇನ್ನು ಪಾದಚಾರಿಗಳ ಸುರಕ್ಷತಾ ನಿಯಮಗಳು 2028 ರಿಂದ ಜಾರಿಗೆ ಬಂದರೆ, ರಿಯರ್-ಇಂಪ್ಯಾಕ್ಟ್ (ಹಿಂಬದಿ ಡಿಕ್ಕಿ) ಸುರಕ್ಷತೆ ಮತ್ತು ಇವೆಂಟ್ ಡೇಟಾ ರೆಕಾರ್ಡರ್ (EDR) ನಿಯಮಗಳು 2029 ರಿಂದ ಆರಂಭವಾಗಿ 2032ರ ವೇಳೆಗೆ ಹಂತಹಂತವಾಗಿ ಜಾರಿಯಾಗಲಿವೆ. ಈ ಬದಲಾವಣೆಗಳಿಂದಾಗಿ, "ಈಗಿರುವ 5-ಸ್ಟಾರ್ ಕಾರುಗಳು 2027ರ ನಂತರವೂ ತಮ್ಮ 5-ಸ್ಟಾರ್ ರೇಟಿಂಗ್ ಕಾಯ್ದುಕೊಳ್ಳುತ್ತವೆಯೇ?" ಎಂಬ ಪ್ರಶ್ನೆ ಕಾರು ಖರೀದಿದಾರರಲ್ಲಿ ಮೂಡಿದೆ.

ಬನ್ನಿ, ಬಹುತೇಕರು ಗಮನಿಸದ ಪ್ರಮುಖ ವಿಷಯವನ್ನು ಸರಳವಾಗಿ ಅರ್ಥಮಾಡಿಕೊಳ್ಳೋಣ. ಕೇಂದ್ರ ಮೋಟಾರು ವಾಹನ ನಿಯಮಗಳು (CMVR) ದೇಶದ ಎಲ್ಲ ಕಾರುಗಳಿಗೂ ಅನ್ವಯಿಸುವ ಕಾನೂನುಬದ್ಧ ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ನಿಗದಿಪಡಿಸುತ್ತವೆ. ಆದರೆ, ಭಾರತ್ ಎನ್‌ಸಿಎಪಿ (Bharat NCAP - ರೂಲ್ 126E) ಕಡ್ಡಾಯವೇನಲ್ಲ; ಇದು ಗ್ರಾಹಕರ ಮಾಹಿತಿಗಾಗಿ ಇರುವ ಸ್ವಯಂಪ್ರೇರಿತ ರೇಟಿಂಗ್ ವ್ಯವಸ್ಥೆಯಾಗಿದೆ. ಇದರ AIS-197 ಸ್ಟಾರ್ ರೇಟಿಂಗ್ ಪದ್ಧತಿಯು ಕ್ರಾಶ್ ಟೆಸ್ಟ್ ಅಂಕಗಳ ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ನಂತಹ ಆಕ್ಟಿವ್ ಸೇಫ್ಟಿ ತಂತ್ರಜ್ಞಾನಗಳನ್ನು ಪರಿಗಣಿಸುತ್ತದೆ. ಸರ್ಕಾರಿ ನಿಯಮಗಳು ಮತ್ತು ಸ್ಟಾರ್ ರೇಟಿಂಗ್ ಪರಸ್ಪರ ಸಂಬಂಧ ಹೊಂದಿದ್ದರೂ, ಸ್ಟಾರ್ ರೇಟಿಂಗ್ ಎನ್ನುವುದು ಕೇವಲ ಸರ್ಕಾರಿ ಅನುಮೋದನೆಯ ಸರ್ಟಿಫಿಕೇಟ್ ಅಲ್ಲ.

Will Current 5-Star Cars Lose Rating After 2027? New India Vehicle Safety Rules Explained

ಇಂದು 5-ಸ್ಟಾರ್ ರೇಟಿಂಗ್ ಪಡೆದ ಕಾರುಗಳು 2027ರ ನಂತರವೂ 5-ಸ್ಟಾರ್ ಆಗಿ ಉಳಿಯುತ್ತವೆಯೇ?

ಈಗಿರುವ 5-ಸ್ಟಾರ್ ರೇಟಿಂಗ್‌ಗಳು 2027ರ ನಂತರವೂ ಹಾಗೆಯೇ ಉಳಿಯುತ್ತವೆ ಎಂದು ಖಾತರಿ ಇಲ್ಲ. AIS-197 ನಿಯಮಾವಳಿಯ ಪ್ರಕಾರ, ಕಾರಿನ ವಿನ್ಯಾಸದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಬದಲಾವಣೆಗಳಾಗುವವರೆಗೆ ಅಥವಾ AIS-197 ನಿಯಮ ಪರಿಷ್ಕರಣೆಯಾಗುವವರೆಗೆ ಮಾತ್ರ ನೀಡಲಾದ ರೇಟಿಂಗ್ ಚಾಲ್ತಿಯಲ್ಲಿರುತ್ತದೆ. ಸರ್ಕಾರ ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ತಂದಾಗ ಕಾರುಗಳ ವಿನ್ಯಾಸ ಬದಲಾಯಿಸಲೇಬೇಕಾಗುತ್ತದೆ. ಅಷ್ಟೇ ಅಲ್ಲ, ಹೆಚ್ಚಿನ ಸ್ಟಾರ್ ರೇಟಿಂಗ್ ಸಿಗಬೇಕಾದರೆ ಕಾರಿನಲ್ಲಿ ಇಎಸ್‌ಸಿ (ESC) ಮತ್ತು ಸೈಡ್ ಹೆಡ್ ಪ್ರೊಟೆಕ್ಷನ್ (ಕರ್ಟನ್ ಏರ್‌ಬ್ಯಾಗ್) ಕಡ್ಡಾಯವಾಗಿರಬೇಕು. ಆದರೆ ಬಜೆಟ್ ಕಾರುಗಳಲ್ಲಿ ಇವು ಹೆಚ್ಚಾಗಿ ಇರುವುದಿಲ್ಲ. ಹಾಗಾಗಿ, ಮುಂಬರುವ ದಿನಗಳಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕಾರುಗಳಲ್ಲೂ ಇಎಸ್‌ಸಿ, ಹೆಚ್ಚುವರಿ ಏರ್‌ಬ್ಯಾಗ್ ಹಾಗೂ ಗಟ್ಟಿಮುಟ್ಟಾದ ಬಾಡಿ ಸ್ಟ್ರಕ್ಚರ್ ನೀಡುವುದನ್ನು ನಾವು ನಿರೀಕ್ಷಿಸಬಹುದು.

2026–2027ರಲ್ಲಿ ಕಾರು ಖರೀದಿಸುವ ಮುನ್ನ ಪರಿಶೀಲಿಸಬೇಕಾದ ಪ್ರಮುಖ ಚೆಕ್‌ಲಿಸ್ಟ್

ಕಾರು ಬುಕ್ ಮಾಡುವ ಮುನ್ನ ನೀವು ಖರೀದಿಸಲು ಬಯಸುವ ನಿರ್ದಿಷ್ಟ ವೇರಿಯೆಂಟ್‌ನ ಬ್ರೋಷರ್ ಅನ್ನು ಕೂಲಂಕುಷವಾಗಿ ಪರಿಶೀಲಿಸಿ. ಎಲ್ಲ ವೇರಿಯೆಂಟ್‌ಗಳಲ್ಲೂ ಇಎಸ್‌ಸಿ (ESC) ಮತ್ತು ಸೈಡ್ ಹೆಡ್ ಏರ್‌ಬ್ಯಾಗ್‌ಗಳು ಇವೆಯೇ ಎಂದು ಖಚಿತಪಡಿಸಿಕೊಳ್ಳಿ. ಟಾಪ್ ಟೆಥರ್ ಇರುವ ISOFIX ಚೈಲ್ಡ್ ಶೀಟ್ ಮೌಂಟ್ ಮತ್ತು ಪ್ರತಿಯೊಂದು ಸೀಟ್‌ಗೂ 3-ಪಾಯಿಂಟ್ ಸೀಟ್‌ಬೆಲ್ಟ್ ಇದೆಯೇ ಎಂಬುದನ್ನು ನೋಡಿ. ಎರಡೂ ಸಾಲಿನ ಸೀಟ್‌ಗಳಿಗೂ ಸೀಟ್‌ಬೆಲ್ಟ್ ರಿಮೈಂಡರ್ ಇದೆಯೇ ಎಂದು ಪರಿಶೀಲಿಸಿ. ಭಾರತ್ ಎನ್‌ಸಿಎಪಿ ಸರ್ಟಿಫಿಕೇಟ್‌ನಲ್ಲಿ ನೀಡಲಾದ ಸ್ಟಾರ್ ರೇಟಿಂಗ್ ವರ್ಷ ಮತ್ತು ಪ್ರೋಟೋಕಾಲ್ ಅನ್ನು ಗಮನಿಸಿ. ಕೇವಲ ಟಾಪ್ ವೇರಿಯೆಂಟ್ ಮಾತ್ರವಲ್ಲದೆ, ಎಲ್ಲ ವೇರಿಯೆಂಟ್‌ಗಳಿಗೂ ಸಮಾನ ಸುರಕ್ಷತಾ ಫೀಚರ್‌ಗಳು ಮತ್ತು ಅತ್ಯುತ್ತಮ 'ಚೈಲ್ಡ್ ಶೀಟ್' ಸ್ಕೋರ್ ಇರುವ ಕಾರುಗಳನ್ನು ಆಯ್ಕೆ ಮಾಡುವುದು ಸೂಕ್ತ.

ಶೋರೂಮ್‌ನಲ್ಲಿ ಕಾರು ಆಯ್ಕೆ ಮಾಡುವಾಗ ನೆನಪಿರಬೇಕಾದ ಪ್ರಮುಖ CMVR ಕ್ರಾಶ್-ಟೆಸ್ಟ್ ದಿನಾಂಕಗಳು

ಸುರಕ್ಷತಾ ನಿಯಮ ಜಾರಿಯಾಗುವ ದಿನಾಂಕ ಇದು ಏಕೆ ಮುಖ್ಯ?
ಆಫ್‌ಸೆಟ್ ಫ್ರಂಟಲ್ ಮತ್ತು ಸೈಡ್ ಡಿಕ್ಕಿ ನಿಯಮಗಳು Rev.1 (AIS-098/099) ಹೊಸ ಮಾಡೆಲ್: ಅಕ್ಟೋಬರ್ 1, 2027; ಚಾಲ್ತಿಯಲ್ಲಿರುವ ಮಾಡೆಲ್: ಅಕ್ಟೋಬರ್ 1, 2028 ಕಾರಿನ ಬಾಡಿ ಸ್ಟ್ರಕ್ಚರ್ ಇನ್ನಷ್ಟು ಬಲಗೊಳ್ಳಲಿದೆ
ಪಾದಚಾರಿಗಳ ಸುರಕ್ಷತೆ Rev.1; FlexPLI ಟೂಲ್ ಅಕ್ಟೋಬರ್ 1, 2028; FlexPLI: ಅಕ್ಟೋಬರ್ 1, 2032 ಕಾಲಿನ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮಗಳು
ರಿಯರ್-ಇಂಪ್ಯಾಕ್ಟ್ ಸುರಕ್ಷತೆ (AIS-101 Rev.1) ಮತ್ತು EDR (AIS-192) ಏಪ್ರಿಲ್ 1, 2029; ಅಕ್ಟೋಬರ್ 1, 2029 ಡಿಕ್ಕಿಯ ನಂತರದ ಸುರಕ್ಷತೆ ಹಾಗೂ ಅಪಘಾತದ ನಿಖರ ಡೇಟಾ ಲಭ್ಯ

ನೀವು ಆಯ್ಕೆ ಮಾಡುವ ಕಾರಿನ ವೇರಿಯೆಂಟ್‌ನಲ್ಲಿ ESC ಮತ್ತು ಸೈಡ್ ಹೆಡ್ ಏರ್‌ಬ್ಯಾಗ್‌ಗಳು ಕಡ್ಡಾಯವಾಗಿ ಲಭ್ಯವಿದ್ದು, 2024-2026ರ ಇತ್ತೀಚಿನ ಭಾರತ್ ಎನ್‌ಸಿಎಪಿ ಸರ್ಟಿಫಿಕೇಟ್ ಹೊಂದಿದ್ದರೆ ಈಗ ಕಾರು ಖರೀದಿಸುವುದು ಸರಿಯಾದ ತೀರ್ಮಾನ. ಒಂದು ವೇಳೆ ಈ ಫೀಚರ್‌ಗಳು ಇಲ್ಲದಿದ್ದರೆ, 2027ರ ಹೊಸ ನಿಯಮಗಳು ಜಾರಿಯಾಗುವವರೆಗೆ ಕಾಯುವುದು ಸೂಕ್ತ. ಇದರಿಂದ ನಿಮಗೆ ಇನ್ನಷ್ಟು ಬಲವಾದ ಬಾಡಿ ಸ್ಟ್ರಕ್ಚರ್ ಹಾಗೂ ಇಮೊಬಿಲೈಸರ್ ಇರುವ ಕಾರುಗಳು ಸಿಗಲಿವೆ. ನೆನಪಿಡಿ, ಕಾರಿನ ವಿನ್ಯಾಸ ಮತ್ತು ಪರೀಕ್ಷಾ ನಿಯಮಗಳು ಬದಲಾದ ನಂತರ ಈಗಿನ 5-ಸ್ಟಾರ್ ರೇಟಿಂಗ್ ಹಾಗೆಯೇ ಮುಂದುವರಿಯುತ್ತದೆ ಎಂದು ಭಾವಿಸಬೇಡಿ.

Article Published On: Wednesday, October 28, 2026, 15:46 [IST]
Read more on car safety
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+