ಹೋಂಡಾ ಸಿಟಿ ಸವಾಲಾಗಲಿರುವ 8 ಕಾರುಗಳು ಯಾವುವು?

Written By:

ಈಗಾಗಾಲೇ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ನಾಲ್ಕನೇ ತಲೆಮಾರಿನ 2014 ಹೋಂಡಾ ಸಿಟಿ ಕಾರು 9,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿದೆ. ಇದು ಎಲ್ಲ ಹಂತದಲ್ಲೂ ತನ್ನ ನಿಕಟ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲಿದೆ ಎಂದು ಆಟೋ ವಿಮರ್ಶಕರು ಭವಿಷ್ಯ ನುಡಿದಿದ್ದಾರೆ.

ನೀವ್ಯಾಕೆ ಹೋಂಡಾ ಸಿಟಿ ಖರೀದಿಸಬೇಕು? ಟಾಪ್ 10 ಅಂಶಗಳು

7.42 ಲಕ್ಷ ರು.ಗಳ ಎಕ್ಸ್ ಶೋಂ ದರಗಳಲ್ಲಿ ಎಂಟ್ರಿ ಕೊಟ್ಟಿರುವ ಹೋಂಡಾ ಸಿಟಿಯ ಡೀಸೆಲ್ ಎಂಜಿನ್ ಭಾರತ ವಾಹನ ಅಧ್ಯಯನ ಸಂಸ್ಥೆ ಪ್ರಕಾರ ಪ್ರತಿ ಲೀಟರ್‌ಗೆ 26 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇಲ್ಲಿಗೆ ಹೋಂಡಾ ಸಿಟಿ ಯಶಸ್ಸು ಖಚಿತವಾಗುವುದಿಲ್ಲ. ಇದು ತನ್ನ ನಿಕಟ ಸ್ಪರ್ಧಿಗಳನ್ನು ಮೀರಿ ನಿಲ್ಲಬೇಕಾಗುತ್ತದೆ. ಅಷ್ಟಕ್ಕೂ 2014 ಹೋಂಡಾ ಸಿಟಿಗೆ ಯಾವೆಲ್ಲ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡಲಿದೆ ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ.

2014 ಹೋಂಡಾ ಸಿಟಿ
  

2014 ಹೋಂಡಾ ಸಿಟಿ

ಜಾಝ್ ಹ್ಯಾಚ್‌ಬ್ಯಾಕ್ ಕಾರಿನ ತಲಹದಿಯಲ್ಲಿ ನಿರ್ಮಾಣವಾಗಿರುವ ಹೋಂಡಾ ಸಿಟಿ ಕಾರಿನ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಮತ್ತು 1.5 ಲೀಟರ್ ಐವಿಟೆಕ್ ಎಂಜಿನ್ ಪ್ರಮುಖ ಆಕರ್ಷಣೆಯಾಗಿದೆ.

ದರ ಮಾಹಿತಿ: 7.42 ಲಕ್ಷ ರು.ಗಳಿಂದ 11.10 ಲಕ್ಷ ರು.

 

ಮಾರುತಿ ಸುಜುಕಿ ಎಸ್‌ಎಕ್ಸ್4
  

ಮಾರುತಿ ಸುಜುಕಿ ಎಸ್‌ಎಕ್ಸ್4

ಬಹುನಿರೀಕ್ಷಿತ ಮಾರುತಿ ಸುಜುಕಿ ಪರಿಷ್ಕೃತ ಎಸ್‌ಎಕ್ಸ್4 ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಇದು ಸಹ ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಇದಕ್ಕೆ ಹೋಂಡಾ ಸಿಟಿಯಿಂದ ಪೈಪೋಟಿ ಎದುರಾಗಲಿದೆ.

ದರ ಮಾಹಿತಿ: 7.32 ಲಕ್ಷ ರು.ಗಳಿಂದ 9.85 ಲಕ್ಷ ರು.

 

ಹ್ಯುಂಡೈ ವರ್ನಾ
  

ಹ್ಯುಂಡೈ ವರ್ನಾ

ಈಗಾಗಲೇ ತಿಳಿಸಿರುವಂತೆಯೇ ಹ್ಯುಂಡೈ ವರ್ನಾ ಡೀಸೆಲ್ ವೆರಿಯಂಟ್ ಸದ್ಯದಲ್ಲೇ ಮಾರುಕಟ್ಟೆಗೆ ಅಪ್ಪಳಿಸಲಿದೆ.

ದರ ಮಾಹಿತಿ: 7.40 ಲಕ್ಷ ರು.ಗಳಿಂದ 11.69 ಲಕ್ಷ ರು.

 

 ಫೋರ್ಡ್ ಫಿಯೆಸ್ಟಾ
  

ಫೋರ್ಡ್ ಫಿಯೆಸ್ಟಾ

ಪ್ರೀಮಿಯಂ ಮಿಡ್ ಸೈಜ್ ಸೆಡಾನ್ ಕಾರಾಗಿರುವ ಫೋರ್ಡ್ ಫಿಯೆಸ್ಟಾ, ಸ್ಟೈಲಿಷ್ ಲುಕ್ ಪಡೆದುಕೊಂಡಿದೆ. ಇದು ಫೋರ್ಡ್‌ನ ಜಾಗತಿಕ ಕೈನಾಟಿಕ್ ವಿನ್ಯಾಸದಿಂದ ಪುಳಕಿತಗೊಂಡಿದೆ.

ದರ ಮಾಹಿತಿ: 7.47 ಲಕ್ಷ ರು.ಗಳಿಂದ 10.32 ಲಕ್ಷ ರು.

 

ಫಿಯೆಟ್ ಲಿನಿಯಾ
  

ಫಿಯೆಟ್ ಲಿನಿಯಾ

ಇನ್ನೊಂದೆಡೆ ಫಿಯೆಟ್ ಲಿನಿಯಾ ಫೇಸ್‌ಲಿಫ್ಟ್ ಮಾಡೆಲ್ ಕೂಡಾ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿದೆ.

ದರ ಮಾಹಿತಿ: 7.18 ಲಕ್ಷ ರು.ಗಳಿಂದ 9.61 ಲಕ್ಷ ರು.

 

ಫೋಕ್ಸ್‌ವ್ಯಾಗನ್ ವೆಂಟೊ
  

ಫೋಕ್ಸ್‌ವ್ಯಾಗನ್ ವೆಂಟೊ

ಜರ್ಮನಿಯ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್‌ನ ಪ್ರೀಮಿಯಂ ಸೆಡಾನ್ ಕಾರಾಗಿರುವ ವೆಂಟೊ ಪೆಟ್ರೋಲ್ ಜತೆಗೆ ಡೀಸೆಲ್ ವೆರಿಯಂಟ್‌ನಲ್ಲೂ ಲಭ್ಯವಿರಲಿದೆ. ಇದು ಅತ್ಯುತ್ತಮ ಫ್ಯಾಮಿಲಿ ಸೆಡಾನ್ ಕಾರಾಗಿದೆ.

ದರ ಮಾಹಿತಿ: 7.38 ಲಕ್ಷ ರು.ಗಳಿಂದ 10.05 ಲಕ್ಷ ರು.

 

 ಸ್ಕೋಡಾ ರಾಪಿಡ್
  

ಸ್ಕೋಡಾ ರಾಪಿಡ್

ಇದು ಫೋಕ್ಸ್‌ವ್ಯಾಗನ್ ವೆಂಟೊದ ರಿ ಬ್ಯಾಡ್ಜ್ ಆವೃತ್ತಿಯಾಗಿದೆ. ಆದರೆ ನಿರ್ವಹಣಾ ವಿಚಾರಕ್ಕೆ ಬಂದಲ್ಲಿ ವೆಂಟೊಗಿಂತ ಸಂಪೂರ್ಣ ವಿಭಿನ್ನವಾಗಿರಲಿದೆ.


ದರ ಮಾಹಿತಿ:
6.93 ಲಕ್ಷ ರು.ಗಳಿಂದ 9.78 ಲಕ್ಷ ರು.

 

ನಿಸ್ಸಾನ್ ಸನ್ನಿ
  

ನಿಸ್ಸಾನ್ ಸನ್ನಿ

ಅಂತಿಮವಾಗಿ ನಿಸ್ಸಾನ್ ಸನ್ನಿ ಆವೃತ್ತಿಗೂ ಹೋಂಡಾ ಸಿಟಿ ಸವಾಲೊಡ್ಡುವ ಸಾಧ್ಯತೆಯಿದೆ.

ದರ ಮಾಹಿತಿ: 6.30 ಲಕ್ಷ ರು.ಗಳಿಂದ 9.87 ಲಕ್ಷ ರು.

 

Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark