ಇನ್ನು ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು..!

Written By:

ಪೆಟ್ರೋಲ್ ಕಾರು, ಡೀಸೆಲ್ ಕಾರು, ಹೈಬ್ರಿಡ್ ಕಾರು, ಎಲೆಕ್ಟ್ರಿಕ್ ಕಾರು ಹೀಗೆ ಹತ್ತು ಹಲವು ಕಾರುಗಳ ಬಗ್ಗೆ ಓದಿರುತ್ತೀರಾ. ಆದರೆ ತಣ್ಣನೆಯ ಗಾಳಿಯಿಂದ ಚಲಿಸುವ ಕಾರುಗಳ ಬಗ್ಗೆ ಎಲ್ಲಾದರೂ ಕೇಳಿದ್ದೀರಾ..?

ಹೌದು ಬ್ರಿಟನ್ ಮೂಲದ ಸಂಶೋಧಕ ಅತ್ಯಾಧುನಿಕ ಅಲ್ಟಿಮೇಟ್ ಗ್ರೀನ್ ವೆಹಿಕಲ್ ಅಭಿವೃದ್ಧಿಪಡಿಸಿದ್ದು, ಇದು ತಣ್ಣನೆಯ ಗಾಳಿಯ ನೆರವಿನಿಂದ ಸಂಚರಿಸಲಿದೆ.

ಈ ಕಾರು ಪ್ರತಿ ಗಂಟೆಗೆ 48 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಗಾಳಿ ಬಳಕೆಯಾಗುವುದರಿಂದ ಯಾವುದೇ ರೀತಿಯ ಎಮಿಷನ್ ಹೊರಸೂಸುವುದಿಲ್ಲ. ಇದರಿಂದ ಪರಿಸರ ಸ್ನೇಹಿ ಎಂದೆನಿಸಿಕೊಳ್ಳಲಿದೆ.

ಸ್ಟೀಮ್ ಎಂಜಿನ್ ಸ್ಪೂರ್ತಿ ಪಡೆದಿರುವ ಪೀಟರ್ ಡಿಯರ್‌ಮ್ಯಾನ್ ಈ ಹೊಸ ಚಾಲನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದರಲ್ಲಿ ತಂಪಾದ ಲಿಕ್ವಿಡ್ ಗಾಳಿಯನ್ನು ಬಳಸಲಾಗುತ್ತದೆ. ಹಗುರ ಹಾಗೂ ಅಗ್ಗವಾಗಿರುವುದರಿಂದ ಗಾಳಿಯನ್ನೇ ಬಳಸಲಾಗಿದೆ ಎಂದವರು ವಿವರಿಸುತ್ತಾರೆ.

ಡಿಯರ್‌ಮ್ಯಾನ್ ಹೊಸ ಸಂಶೋಧನೆಯು ಇತರೆಡೆ ಪಸರಿಸುತ್ತಿರುವಂತೆಯೇ ಅವರ ಈ ಸಾಹಸಕ್ಕೆ ನೆರವಾಗಲು ಎಂಜಿನಿಯರಿಂಗ್ ಕಂಪನಿ ರಿಕಾರ್ಡೊ ಮುಂದೆ ಬಂದಿದೆ. ನಾನು ಮೊದಲ ಹಂತವನ್ನು ಪೂರ್ಣಗೊಳಿಸಿದ್ದೇನೆ ಎಂದು ಡಿಯರ್ ಮ್ಯಾನ್ ತಿಳಿಸಿದ್ದಾರೆ.

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

ತಣ್ಣನೆಯ ಗಾಳಿಯಿಂದ ಚಲಿಸಲಿದೆ ಕಾರು!

English summary
A UK-based inventor claims to have developed the ultimate green vehicle - a car that runs only on cold air and it can reach speeds of up to 48 km per hour.
Story first published: Tuesday, March 19, 2013, 11:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark