ಐಷಾರಾಮಿ ಆಡಿ ಕಾರಿಗೂ ಬಂತು ನೋಡಿ ರಕ್ಷಾಕವಚ!

By Nagaraja

ಬಹುತೇಕರು ಆಡಿ ಎ8ಎಲ್ ಬಗ್ಗೆ ತಿಳಿದುಕೊಂಡಿರಬಹುದು. ಅತ್ಯುತ್ತಮ ಇಂಟಿರಿಯರ್‌ನಿಂದ ರೂಪಿತಗೊಂಡಿರುವ ಈ ಸೆಡಾನ್ ಕಾರು ಪರಿಪೂರ್ಣ ರೈಡಿಂಗ್ ಅನುಭವ ಪ್ರದಾನ ಮಾಡುತ್ತದೆ.

ಇದೀಗ ಈ ಸ್ಟೈಲಿಷ್ ಒಳಮೈಗೆ ಗರಿಷ್ಠ ಸುರಕ್ಷತೆಯ ಸ್ಪರ್ಶ ನೀಡಿದರೆ ಹೇಗಿರಬಹುದು? ನಾವು ಸಾಮಾನ್ಯ ಕಾರುಗಳಲ್ಲಿ ಲಭ್ಯವಿರುವಂತಹ ಸ್ಟಾಂಡರ್ಡ್ ಸುರಕ್ಷತಾ ಮಾನದಂಡಗಳ ಬಗ್ಗೆ ಮಾತನಾಡುತ್ತಿಲ್ಲ. ನಾವು ಎಲ್ಲ ಹೊಸತನದಿಂದ ಕೂಡಿದ ರಕ್ಷಾಕವಚ ಲೇಪಿತ ಆಡಿ ಎ8 ಪರಿಪೂರ್ಣ ಐಷಾರಾಮಿ ಕಾರಿನ ಬಗ್ಗೆ ಮಾತನಾಡುತ್ತಿದ್ದೇವೆ.

ಐಷಾರಾಮಿ ಆಡಿ ಕಾರಿಗೂ ಬಂತು ನೋಡಿ ರಕ್ಷಾಕವಚ!

ಆಡಿ ಎ8ಎಲ್ ಸೆಕ್ಯೂರಿಟಿ ಎಂದೇ ಗುರುತಿಸಿಕೊಂಡಿರುವ ಪ್ರಸ್ತುತ ಕಾರು ಉದ್ದವಾದ ವೀಲ್ ಬೇಸ್ ಹೊಂದಿದೆ. ಇದು 435 ಅಶ್ವಶಕ್ತಿ ಉತ್ಪಾದಿಸುವ ಟ್ವಿನ್ ಟರ್ಬೊ 4.0 ಲೀಟರ್ ವಿ8 ಮತ್ತು 6.3 ಲೀಟರ್ ಡಬ್ಲ್ಯು 12 ಎಂಜಿನ್‌ ಹೊಂದಿದೆ.

ಐಷಾರಾಮಿ ಆಡಿ ಕಾರಿಗೂ ಬಂತು ನೋಡಿ ರಕ್ಷಾಕವಚ!

ಈ ಮೊದಲೇ ತಿಳಿಸಿರುವಂತೆಯೇ ವಿನ್ಯಾಸ ವಿಚಾರದಲ್ಲಿ ಯಾವುದೇ ರಾಜಿಗೂ ಆಡಿ ಸಿದ್ಧವಾಗಿಲ್ಲ. ಇಲ್ಲಿ ಸಂಸ್ಥೆಯು ಕೇಳುತ್ತಿರುವಂತೆಯೇ ನೀವು ಸಾಹಸ ಜೀವನವನ್ನು ಇಷ್ಟಪಡುವುದಾದ್ದಲ್ಲಿ ಅದನ್ನು ಏಕೆ ಆಡಿಯಲ್ಲಿ ತೊಡಗಿಸಿಕೊಳ್ಳಬಾರದು?

ಐಷಾರಾಮಿ ಆಡಿ ಕಾರಿಗೂ ಬಂತು ನೋಡಿ ರಕ್ಷಾಕವಚ!

ನೂತನ ಆಡಿ ಗಾಡಿ ಹೊಸತಾದ ಹೆಡ್ ಲೈಟ್, ಸೊಗಸಾದ ಗ್ರಿಲ್, ಪರಿಷ್ಕೃತ ರಿಯರ್ ಎಂಡ್ ಪಡೆದುಕೊಳ್ಳಲಿದೆ. ಇನ್ನು ಸುರಕ್ಷಾ ವಿಚಾರಕ್ಕೆ ಬಂದಾಗ, ಕೈಯಿಂದ ರಚಿಸಲಾದ ಶಾಖ ನೀಡದ ಉಕ್ಕಿನ ರಕ್ಷಾಕವಚ, ಅರಾಮಿಡ್ ಫ್ಯಾಬ್ರಿಕ್ ಮತ್ತು ಬಹು ಹೊದಿಕೆಯುಳ್ಳ ಗಾಜಿನ ರಕ್ಷಾಕವಚವನ್ನು ಹೊಂದಿದೆ.

ಐಷಾರಾಮಿ ಆಡಿ ಕಾರಿಗೂ ಬಂತು ನೋಡಿ ರಕ್ಷಾಕವಚ!

ಅಷ್ಟೇ ಯಾಕೆ ಕಾರಿನ ನೆಲಭಾಗವು ರಕ್ಷಾಕವಚದಿಂದ ಲೇಪಿತವಾಗಿರಲಿದೆ. ಇದು ಯಾವುದೇ ಸ್ಫೋಟವನ್ನು ತಡೆಯುವಂತಹ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಬುಲೆಟ್ ಪ್ರೂಪ್ ವಿಂಡೋಗಳನ್ನು ಪಡೆದಿದೆ.

ಐಷಾರಾಮಿ ಆಡಿ ಕಾರಿಗೂ ಬಂತು ನೋಡಿ ರಕ್ಷಾಕವಚ!

ಇನ್ನು ತುರ್ತು ಪರಿಸ್ಥಿತಿಯಲ್ಲಿ ಬಚಾವಾಗಲು ಎಮರ್ಜನ್ಸಿ-ಎಕ್ಸಿಟ್ ವ್ಯವಸ್ಥೆಯನ್ನು ಆಡಿ ಹೊಂದಿದ್ದು, ಈ ಮೂಲಕ ಬಾಗಿಲು ಸಂಪೂರ್ಣವಾಗಿ ಬೇರ್ಪಡಲಿದೆ. ಹಾಗೆಯೇ ವಿಷಕಾರಿ ಅನಿಲಗಳು ಕಾರನ್ನು ಪ್ರವೇಶಿಸದಂತೆ ನೋಡಿಕೊಳ್ಳಲು ಎಮರ್ಜನ್ಸಿ ಫ್ರೆಶ್ ಏರ್ ಸಿಸ್ಟಂ ಕೂಡಾ ಲಗತ್ತಿಸಲಾಗಿದೆ.

Article Published On: Saturday, January 18, 2014, 17:23 [IST]
English summary
Called the Audi A8L Security, it comes with a long-wheelbase, and is available with the 435bhp, twin-turbo 4.0-litre V-8 or the naturally aspirated, 500bhp, 6.3-litre W-12
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+