ಬೆಂಗಳೂರು ಪ್ರವೇಶ ಪಡೆದ ಆಡಿ ಎ3 ಓಪನ್ ಟಾಪ್ ಕಾರು

By Nagaraja

ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ, ಸ್ಥಳೀಯ ಬಿಡುಗಡೆಯ ಅಂಗವಾಗಿ ಆಡಿ ಎ3 ಕ್ಯಾಬ್ರಿಯೊಲೆಟ್ ಮಾದರಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.

ಬೆಲೆ - 45.83 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಇದು ದೇಶದಲ್ಲಿ ಲಭ್ಯವಿರುವ ಕೆಲವೇ ಕೆಲವು ಓಪನ್ ಟಾಪ್ ಕಾರುಗಳಲ್ಲಿ ಒಂದಾಗಿದ್ದು, ಕನ್ವರ್ಟಿಬಲ್ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಎರಡನೇ ಶೋ ರೂಂ ಸಹ ಆಡಿ ಲೋಕರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ನಟಿ ಗುಲ್ ಪನಾಗ್ ಹಾಗೂ ರೇಸರ್ ಆದಿತ್ಯ ಪಟೇಲ್ ಉಪಸ್ಥಿತರಿದ್ದರು. ಇದು ಆಡಿ ಎ3 ಕ್ಯಾಬ್ರಿಯೊ ಬಿಡುಗಡೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತುಂಬುವಂತಾಗಿತ್ತು.

ತಾಂತ್ರಿಕತೆ

ತಾಂತ್ರಿಕತೆ

ಇದರ 40 ಟಿಎಫ್‌ಎಸ್‌ಐ 1.8 ಲೀಟರ್ ಪೆಟ್ರೋಲ್ ಎಂಜಿನ್ 180 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಅಂತೆಯೇ 7ಸ್ಪೀಡ್ ಡ್ಯುಯಲ್ ಕ್ಲಾಚ್ ಎಸ್ ಟ್ರಾನಿಕ್ ಟ್ರಾನ್ಸ್‌ಮಿಷನ್ ಇದರಲ್ಲಿರಲಿದೆ. ಭಾರತಕ್ಕೇ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಎಂಟ್ರಿ ಕೊಟ್ಟಿರುವ ಆಡಿ ಎ3 ಕ್ಯಾಬ್ರಿಯೊಲೆಟ್ ಸದ್ಯ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರುತ್ತದೆ. ನಾಲ್ಕು ಸೀಟುಗಳ ಎರಡು ಬಾಗಿಲಿನ ಆಡಿ ಎ3 ಕ್ಯಾಬ್ರಿಯೊಲೆಟ್ 7.8 ಸೆಕೆಂಡುಗಳಲ್ಲಿ ಗಂಟೆಗೆ ಗರಿಷ್ಠ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 242 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಹೊರಮೈ

ಹೊರಮೈ

ಹೊಸ ಆಡಿ 3 ಕ್ಯಾಬ್ರಿಯೊಲೆಟ್ ಮಾದರಿಯು ಮ್ಯಾಟ್ ಫಿನಿಶ್, ಡೈಮಂಡ್ ಡಿಸೈನ್ ಆಡಿ ಸಿಂಗಲ್ ಫ್ರೇಮ್ ಗ್ರಿಲ್, ಕ್ರೀಡಾತ್ಮಕ ರಿಯರ್ ಬಂಪರ್ ಸ್ಪಾಯ್ಲರ್, ಬೈ ಕ್ಸೆನಾನ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಡೈ ಟೈಮ್ ರನ್ನಿಂಗ್ ಲೈಟ್, ವಿಭಜಿತ ಲೈಟ್ ಲ್ಯಾಂಪ್ ಹಾಗೂ 17 ಇಂಚಿನ ಅಲ್ಯೂಮಿನಿಯಂ ವೀಲ್ ಪಡೆದುಕೊಳ್ಳಲಿದೆ.

ಒಳಮೈ

ಒಳಮೈ

ಕಾರಿನೊಳಗೂ ಗರಿಷ್ಠ ತಂತ್ರಜ್ಞಾನಕ್ಕೆ ಆದ್ಯತೆ ಕೊಡಲಾಗಿದೆ. ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ತಂತ್ರಗಾರಿಕೆಯನ್ನು ಹೊಂದಿರುವ ಆಡಿ ಎ3, ಐಚ್ಛಿಕ ಪ್ಯಾಡಲ್ ಶಿಫ್ಟರ್ ಹಾಗೂ 4 ಸ್ಪೋಕ್ ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಕೂಡಾ ಪಡೆದುಕೊಂಡಿದೆ. ಅಲ್ಲದೆ ಎಲೆಕ್ಟ್ರೊ ಮೆಕ್ಯಾನಿಕಲ್ ಸ್ಟೀರಿಂಗ್ ಕೂಡಾ ಪಡೆದುಕೊಳ್ಳಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಆಟೋಮ್ಯಾಟಿಕ್ ಎಲೆಕ್ಟ್ರೊ ಹೈಡ್ರಾಲಿಕ್ ಮಡಚಬಹುದಾದ ಟಾಪ್ - ಗಂಟೆಗೆ 50 ಕೀ.ಮೀ. ವೇಗದಲ್ಲೂ 18 ಸೆಕೆಂಡುಗಳಲ್ಲೇ ತೆರೆಯುವುದು ಹಾಗೂ ಮಡಚಬಹುದಾಗಿದೆ.

7 ಇಂಚಿನ ಎಂಎಂಐ ಪರದೆ, ನೇವಿಗೇಷನ್, ಎಂಎಂಐ ಟಟ್ (ಐಚ್ಛಿಕ),

ಆಡಿ ಸೌಂಡ್ ಸಿಸ್ಟಂ

ಡ್ಯುಯಲ್ ಜೋನ್ ಆಟೋ ಎಸಿ, ಸನ್ ಸೆನ್ಸಾರ್,

ಆಡಿ ಟಿಟಿ ಪ್ರೇರಿತ ಜೆಟ್ ಟರ್ಬೈನ್ ಏರ್ ವೆಂಟ್,

ಲೈಟ್ ಹಾಗೂ ರೈನ್ ಸೆನ್ಸಾರ್,

ಕ್ರೂಸ್ ಕಂಟ್ರೋಲ್

ಸುರಕ್ಷತೆ

ಕೆ ಡಿಸೈನ್ ಸಾಫ್ಟ್ ಟಾಪ್ ಜೊತೆ ಆಕ್ಟಿವ್ ರೋಲ್‌ಓವರ್ ಪ್ರೊಟೆಕ್ಷನ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಹಾಗೂ ಏರ್ ‌ಬ್ಯಾಗ್ ಸೌಲಭ್ಯಗಳನ್ನು ಈ ದುಬಾರಿ ಕಾರಿನಲ್ಲಿರಲಿದೆ.

More from DriveSpark

Article Published On: Friday, January 23, 2015, 15:39 [IST]
English summary
The Audi A3 Cabriolet was officially launched today in Bangalore. The new car is the first convertible in the category and one of the few open-top vehicles available in the country presently. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+