ಆಡಿ ಎ3 ಕ್ಯಾಬ್ರಿಯೊಲೆಟ್ ಭಾರತದಲ್ಲಿ ಭರ್ಜರಿ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ, ಭಾರತ ಮಾರುಕಟ್ಟೆಗೆ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಆಡಿ ಎ3 ಕ್ಯಾಬ್ರಿಯೊಲೆಟ್ ಮಾದರಿಯನ್ನು ಬಿಡುಗಡೆಗೊಳಿಸಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ): 44.75 ಲಕ್ಷ ರು.

ನಾಲ್ಕು ಸೀಟುಗಳ ಎರಡು ಬಾಗಿಲಿನ ಆಡಿ ಎ3 ಕ್ಯಾಬ್ರಿಯೊಲೆಟ್ ಕಾರು ಮೃದುವಾದ ಮೇಲ್ಚಾಣಿಯನ್ನು ಪಡೆದುಕೊಂಡಿದ್ದು, ಗಂಟೆಗೆ 50 ಕೀ.ಮೀ. ವೇಗದಲ್ಲೂ 18 ಸೆಕೆಂಡುಗಳೊಳಗೆ ತೆರೆದುಕೊಳ್ಳುತ್ತದೆ.

ಆಡಿ ಎ3 ಕ್ಯಾಬ್ರಿಯೊಲೆಟ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಭಾರತಕ್ಕೇ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಎಂಟ್ರಿ ಕೊಟ್ಟಿರುವ ಆಡಿ ಎ3 ಕ್ಯಾಬ್ರಿಯೊಲೆಟ್ ಸದ್ಯ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ 40 ಟಿಎಫ್‌ಎಸ್‌ಐ 1.8 ಲೀಟರ್ ಪೆಟ್ರೋಲ್ ಎಂಜಿನ್ 180 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ.

ಆಡಿ ಎ3 ಕ್ಯಾಬ್ರಿಯೊಲೆಟ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ತಂತ್ರಗಾರಿಕೆಯನ್ನು ಹೊಂದಿರುವ ಆಡಿ ಎ3, ಐಚ್ಛಿಕ ಪ್ಯಾಡಲ್ ಶಿಫ್ಟರ್ ಹಾಗೂ 4 ಸ್ಪೋಕ್ ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಕೂಡಾ ಪಡೆದುಕೊಂಡಿದೆ.

ಆಡಿ ಎ3 ಕ್ಯಾಬ್ರಿಯೊಲೆಟ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಅಲ್ಲದೆ ಎಲೆಕ್ಟ್ರೊ ಮೆಕ್ಯಾನಿಕಲ್ ಸ್ಟೀರಿಂಗ್ ಕೂಡಾ ಪಡೆದುಕೊಳ್ಳಲಿದೆ. ಇದು 17 ಇಂಚಿನ ಅಲ್ಯೂಮಿನಿಯಂ ಚಕ್ರ ಕೂಡಾ ಪಡೆದುಕೊಂಡಿದ್ದು, 7.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ ಹಾಗೂ ಗರಿಷ್ಠ ಗಂಟೆಗೆ 242 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಆಡಿ ಎ3 ಕ್ಯಾಬ್ರಿಯೊಲೆಟ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಸದ್ಯಕ್ಕೆ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಭಾರತದಲ್ಲಿ ಲಭ್ಯವಿರುತ್ತದೆ. ಆದರೆ ನಿಕಟ ಭವಿಷ್ಯದಲ್ಲೇ ಪರಿಚಯಿಸುವ ಯೋಜನೆಯನ್ನು ಆಡಿ ಸಂಸ್ಥೆ ಹೊಂದಿದೆ.

ಆಡಿ ಎ3 ಕ್ಯಾಬ್ರಿಯೊಲೆಟ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಇವೆಲ್ಲದರ ಜೊತೆಗೆ ಹೊಸ ಎ3 ಕ್ಯಾಬ್ರಿಯೊ ಕಾರು ವಿಂಡ್ ಡಿಫ್ಲೆಕ್ಟರ್ (ಗಾಳಿಯ ಗತಿಯನ್ನು ಬದಲಾಯಿಸುವ ಸಲಕರಣೆ) ಹಾಗೂ ಆಕ್ಟಿವ್ ರೋಲ್‌ಓವರ್ ಪ್ರೊಟೆಕ್ಷನ್ ಸಿಸ್ಟಂ ಸಹ ಪಡೆದುಕೊಂಡಿರುತ್ತದೆ. ಅದೇ ರೀತಿ ಇಎಸ್‌ಪಿ, ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಹಾಗೂ ಏರ್ ‌ಬ್ಯಾಗ್ ಸೌಲಭ್ಯಗಳನ್ನು ಈ ದುಬಾರಿ ಕಾರಿನಲ್ಲಿರಲಿದೆ. ಇನ್ನು ಹೆಡ್ ಲೆವೆಲ್ ಹೀಟಿಂಗ್ ಕೂಡಾ ಇರಲಿದೆ.

ಆಡಿ ಎ3 ಕ್ಯಾಬ್ರಿಯೊಲೆಟ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಕಾರಿನೊಳಗೂ ಹೆಚ್ಚಿನ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇದು ಗರಿಷ್ಠ ಗುಣಮಟ್ಟದ ಮಾಹಿತಿ ಮನರಂಜನಾ ವ್ಯವಸ್ಥೆ ಹಾಗೂ ಕ್ರೂಸ್ ಕಂಟ್ರೋಲ್‌ಗಳನ್ನು ಪಡೆದಿರುತ್ತದೆ.

ಆಡಿ ಎ3 ಕ್ಯಾಬ್ರಿಯೊಲೆಟ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಇದರೊಂದಿಗೆ ದೇಶದಲ್ಲಿ ಲಭ್ಯವಿರುವ ಕೆಲವೇ ಕೆಲವು ಓಪನ್ ಟಾಪ್ ವಾಹನಗಳಲ್ಲಿ ಆಡಿ ಎ3 ಕ್ಯಾಬ್ರಿಯೊಲೆಟ್ ಒಂದೆನಿಸಿಕೊಳ್ಳಲಿದ್ದು, ಕನ್ವರ್ಟಿಬಲ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ.

ಹೊರಮೈ

ಹೊರಮೈ

ಹೊರಗಡೆ ಇದು ಮ್ಯಾಟ್ ಫಿನಿಶ್, ಡೈಮಂಡ್ ಡಿಸೈನ್ ಸಿಂಗಲ್ ಫ್ರೇಮ್ ಗ್ರಿಲ್ ಪಡೆದುಕೊಳ್ಳಲಿದೆ. ಜೊತೆಗೆ ಸ್ಪೋರ್ಟಿ ರಿಯರ್ ಬಂಪರ್ ಸ್ಪಾಯ್ಲರ್, ಬೈ ಕ್ಸೆನಾನ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಡಿಆರ್‌ಎಲ್ ಹಾಗೂ ಹಿಂಭಾಗದಲ್ಲಿ ವಿಭಜಿತ ಟೈಲ್ ಲ್ಯಾಂಪ್ ಪಡೆಯಲಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

  • ಆಟೋಮ್ಯಾಟಿಕ್ ಎಲೆಕ್ಟ್ರೊ ಹೈಡ್ರಾಲಿಕ್ ಮಡಚಬಹುದಾದ ಟಾಪ್,
  • 7 ಇಂಚಿನ ಎಂಎಂಐ ಪರದೆ, ನೇವಿಗೇಷನ್, ಎಂಎಂಐ ಟಟ್ (ಐಚ್ಛಿಕ),
  • ಆಡಿ ಸೌಂಡ್ ಸಿಸ್ಟಂ
  • ಡ್ಯುಯಲ್ ಜೋನ್ ಆಟೋ ಎಸಿ, ಸನ್ ಸೆನ್ಸಾರ್,
  • ಆಡಿ ಟಿಟಿ ಪ್ರೇರಿತ ಜೆಟ್ ಟರ್ಬೈನ್ ಏರ್ ವೆಂಟ್,
  • ಲೈಟ್ ಹಾಗೂ ರೈನ್ ಸೆನ್ಸಾರ್,
  • ಕ್ರೂಸ್ ಕಂಟ್ರೋಲ್

More from DriveSpark

Article Published On: Thursday, December 11, 2014, 14:44 [IST]
English summary
The Audi A3 Cabriolet was launched today at an event in Delhi. The new car is the first convertible in the category and one of the few open-top vehicles available in the country presently. Read on for more about pricing, specs, features and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+