ಬುದ್ಧ ಸರ್ಕ್ಯೂಟ್‌ನಲ್ಲಿ ಆಡಿ ಐಷಾರಾಮಿ ಕಾರು ಲಾಂಚ್
ಕಳೆದ ದಿನವಷ್ಟೇ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಡೀಸೆಲ್ ಕಾರು ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಇದರ ಬೆನ್ನಲ್ಲೇ ಜರ್ಮನಿಯ ಮತ್ತೊಂದು ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಭಾರತಕ್ಕೆ ಅತಿ ದುಬಾರಿ ಎಸ್6 ಕಾರನ್ನು ಪರಿಚಯಿಸಿದೆ.
ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಯಶಸ್ವಿ ಪರೀಕ್ಷೆ ನಡೆಸಿರುವ ಆಡಿ ಎಸ್6 ದೆಹಲಿ ಎಕ್ಸ್ ಶೋ ರೂಂ ದರ 85.99 ಲಕ್ಷ ರು.ಗಳಾಗಿವೆ. ವಾರದ ಆರಂಭದಲ್ಲಷ್ಟೇ ಆಡಿ ಇಂಡಿಯಾ ತನ್ನ ರೇಂಜ್‌ನ ಮಾಡೆಲ್‌ಗಳ ದರಗಳನ್ನು ಹೆಚ್ಚಳಗೊಳಿಸಿತ್ತು. ಇದರ ಬೆನ್ನಲ್ಲೇ ಎಸ್6 ಬಿಡುಗಡೆ ಮಾಡಿರುವುದು ಕುತೂಹಲ ಸೃಷ್ಟಿ ಮಾಡಿದೆ.
ಬಿಎಂಡಬ್ಲ್ಯ ಎಂ ಹಾಗೂ ಮುಂಬರುವ 2013 ಮರ್ಸಿಡಿಸ್ ಬೆಂಝ್ ಇ63 ಎಎಂಜಿ ಕಾರುಗಳಇಗೆ ಆಡಿ ಆರ್6 ಸ್ಪರ್ಧೆ ಒಡ್ಡಲಿದೆ. ಎ6ಗಿಂತಲೂ ವಿಭಿನ್ನವಾಗಿ ಆಡಿ ಆರ್6 ಸ್ಪೋರ್ಟ್ಸ್ ಸೆಡಾನ್ ಕಾರಿನಲ್ಲಿ ನಿರ್ವಹಣೆಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲಾಗಿದೆ.

ಗರಿಷ್ಠ ನಿರ್ವಹಣೆ ಜತೆಗೆ ಕ್ರೀಡಾ ಲುಕ್ ಆಡಿ ಆರ್6 ವೈಶಿಷ್ಟ್ಯವಾಗಿದೆ. ಇದು 4.0 ಲೀಟರ್ ವಿ8 ಟಿಎಫ್‌ಎಸ್‌ಐ ಎಂಜಿನ್ ನಿಯಂತ್ರಿಸಲ್ಪಡುತ್ತಿದ್ದು, 7 ಸ್ಪಿಡ್ ಎಸ್ ಟ್ರಾನಿಕ್ ಡಿಎಸ್‌ಜಿ ಟ್ರಾನ್ಸ್‌ಮಿಷನ್ ಹೊಂದಿದೆ.

420 ಅಶ್ವಶಕ್ತಿ (550 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಆಡಿ ಆರ್6 ಕೇವಲ 4.8 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧಿಸಲಿದೆ. ಹಾಗೆಯೇ ಗಂಟೆಗೆ 200 ಕೀ.ಮೀ. ವೇಗತೆಯಲ್ಲಿ ಚಲಿಸಲಿದೆ.

ಇದರ 'ಸಿಲಿಂಡರ್ ಆನ್ ಡಿಮ್ಯಾಂಡ್' ತಂತ್ರಜ್ಞಾನ ಕಾರಿನಲ್ಲಿ ಸಂಚರಿಸುವ ಪ್ರಯಾಣಿಕರ ಭಾರತಕ್ಕೆ ಅನುಗುಣವಾಗಿ ಆಟೋಮ್ಯಾಟಿಕ್ ಆಗಿ ಸಿಲಿಂಡರ್ ಕಾರ್ಯ ನಿರ್ವಹಿಸಲಿದೆ.

ಇದರಲ್ಲಿರುವ ಎಸ್ ಬ್ಯಾಡ್ಸ್‌ನಿಂದಾಗಿ ನೂತನ ಆಡಿ ಎಸ್6 ಕಾರನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದಾಗಿದೆ.

ಒಟ್ಟಿನಲ್ಲಿ ಆಡಿ ಎಸ್6 ಕಾರಿನಲ್ಲಿ ನಿರ್ವಹಣೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದೆ.

ಆಕರ್ಷಕ ಚಿತ್ರಗಳು

ಆಕರ್ಷಕ ಚಿತ್ರಗಳು

ಆಕರ್ಷಕ ಚಿತ್ರಗಳು

ಆಕರ್ಷಕ ಚಿತ್ರಗಳು

ಆಕರ್ಷಕ ಚಿತ್ರಗಳು


Click it and Unblock the Notifications








