ಜಿನಿವಾ ಮೋಟಾರು ಶೋಗೆ ಆಡಿ ಟಿಟಿ ಎಂಟ್ರಿ
ಫೋಕ್ಸ್‌ವ್ಯಾಗನ್ ಅಧೀನತೆಯಲ್ಲಿರುವ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, 2014 ಜಿನೆವಾ ಮೋಟಾರು ಶೋದಲ್ಲಿ ನೂತನ ಮೂರನೇ ಆವೃತ್ತಿ ಟಿಟಿ ಕಾರನ್ನು ಅನಾವರಣಗೊಳಿಸಿದೆ.
ಸ್ಪೋರ್ಟ್ ಕ್ವಾಟ್ರೊ ಕಾನ್ಸೆಪ್ಟ್ ಹಾಗೂ ಹಿಂದಿನ ಟಿಟಿ ಆವೃತ್ತಿಯಿಂದ ಸ್ಪೂರ್ತಿ ಪಡೆದು ನೂತನ ಎರಡು ಸೀಟುಗಳ ಟಿಟಿ ಕಾರನ್ನು ಅಭಿವೃದ್ಧಿಗೊಳಿಸಲಾಗಿದೆ. ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ಟಿಟಿ ಲಭ್ಯವಿರಲಿದೆ. ಇದರಲ್ಲಿ ಡೈರಕ್ಟ್ ಇಂಜೆಕ್ಷನ್ ಮತ್ತು ಟರ್ಬೊಚಾರ್ಜಿಂಗ್ ಪ್ರಮುಖವಾಗಿರಲಿದೆ. ಇದರ 2.0 ಲೀಟರ್ ಫೋರ್ ಸಿಲಿಂಡ್ ಟಿಡಿಐ ಎಂಜಿನ್ 184 ಅಶ್ವಶಕ್ತಿ ಉತ್ಪಾದಿಸಲಿದೆ.
ಹಾಗೆಯೇ ಎರಡನೇ ಟರ್ಬೊಚಾರ್ಜ್ಡ್ 2.0 ಲೀಟರ್ ಫೋರ್ ಸಿಲಿಂಡರ್ ಎಂಜಿನ್ 230 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಸಿಕ್ಸ್ ಸ್ಪೀಡ್ ಮ್ಯಾನುವಲ್ ಫ್ರಂಟ್ ವೀಲ್ ಡ್ರೈವ್ ಹಾಗೂ ಸಿಕ್ಸ್ ಸ್ಪೀಡ್ ಡ್ಯುಯಲ್ ಕ್ಲಚ್ ಎಸ್ ಟ್ರಾನಿಕ್ ಆಲ್ ವೀಲ್ ಡ್ರೈವ್ ಪಡೆದುಕೊಳ್ಳಲಿದೆ. ಇನ್ನು ಹೆಚ್ಚಿನ ಎಂಜಿನ್ ಸಾಮರ್ಥ್ಯ ಬಯಸುವವರಿಗಾಗಿ 310 ಅಶ್ವಶಕ್ತಿ ಉತ್ಪಾದಿಸುವ 2.0 ಲೀಟರ್ ಟಿಎಫ್‌ಎಸ್‌ಐ ಎಂಜಿನ್ ಕೂಡಾ ಲಭ್ಯವಿರಲಿದೆ.

ಆಡಿ ಟಿಟಿ
2014 ಜಿನೆವಾ ಮೋಟಾರು ಶೋದಲ್ಲಿ ಆಡಿ ಟಿಟಿ ಪ್ರಮುಖ ಆಕರ್ಷಣೆಯಾಗಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಪ್ರಭಾವಿ ವಿನ್ಯಾಸ ಪಡೆದುಕೊಂಡಿದೆ.

ಇದರ ಎಲ್‌ಇಡಿ ಡೈಟೈಮ್ ರನ್ನಿಂಗ್ ಲೈಟ್ಸ್ ಆಧುನಿಕ ವಿನ್ಯಾಸದ ಸಂಕೇತವಾಗಿರಲಿದೆ. ಹಾಗೆಯೇ ಇದು ಕಾರಿಗೆ ಹೆಚ್ಚಿನ ಆಕರ್ಷಣೆಯನ್ನು ಪ್ರದಾನ ಮಾಡುತ್ತಿದೆ. ಅಲ್ಲದೆ ನಿರ್ಮಾಣ ಗುಣಮಟ್ಟತೆಗೂ ಮೊದಲ ಆದ್ಯತೆ ನೀಡಲಾಗಿದೆ.

ಇನ್ನು ಕಾರಿನ ಬದಿಗಳು ದೊಡ್ಡದಾದ ವೀಲ್ ಆರ್ಚ್‌ನಿಂದ ಕಂಗೊಳಿಸುತ್ತದೆ. ಇದರ ಮಲ್ಟಿ ಸ್ಪೋಕ್ ಅಲಾಯ್ ವೀಲ್ ಕ್ರೀಡಾತ್ಮಕ ಲುಕ್‌ಗೆ ಕಾರಣವಾಗಿದೆ.

ಇನ್ನು ಹಿಂದುಗಡೆಯೂ ಎಲ್‌ಇಡಿ ವಿನ್ಯಾಸಿತ ಟೈಲ್ ಲ್ಯಾಂಪ್ ಹೊರತಾಗಿಯೂ ನಾಲ್ಕು ಎಕ್ಸಾಸ್ಟ್‌ಗಳು ಕಾರಿಗೆ ಇನ್ನಷ್ಟು ಸ್ಪೋರ್ಟಿ ಲುಕ್ ಪ್ರದಾನ ಮಾಡುತ್ತಿದೆ.

ಇಂಟಿರಿಯರ್
ಅಂತಿಮವಾಗಿ ಕಾರಿನೊಳಗೆ ನಿಮಗೆ ಟಿಎಫ್‌ಟಿ ಪರದೆಯ ಸೌಲಭ್ಯವಿರಲಿದೆ. ಈ ಮೂಲಕ ಕಾರಿನ ವೇಗತೆ, ಇಂಧನ, ಇಂಧನ ಒತ್ತಡ ಮತ್ತು ಇತರ ಮಹತ್ವಪೂರ್ಣ ಮಾಹಿತಿಗಳನ್ನು ಒದಗಿಸಲಿದೆ. ಹಾಗೆಯೇ ಇದರ ಕಪ್ಪು ವರ್ಣ ಒಳಾಂಗಣವು ಆಡಿ ಟಿಟಿಗೆ ಪ್ರೀಮಿಯಂ ಲುಕ್ ನೀಡುತ್ತದೆ.


Click it and Unblock the Notifications