ಬಿಎಂಡಬ್ಲ್ಯು, ಬೆಂಝ್‌ನಿಂದ ಅಗ್ಗದ ಐಷಾರಾಮಿ ಕಾರು ನಿರೀಕ್ಷಿಸಿ
ಐಷಾರಾಮಿ ಕಾರುಗಳನ್ನು ಹೊಂದಿರಬೇಕೆಂಬುದು ಅನೇಕರ ಜೀವನ ಅಭಿಲಾಷೆಯಾಗಿರುತ್ತದೆ. ಅಂತವರ ಕನಸು ನನಸು ಮಾಡಲು ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಗಳು ಮುಂದಾಗುತ್ತಿದೆ.
ಪ್ರಮುಖವಾಗಿಯೂ ಭಾರತ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವ ಬಿಎಂಡಬ್ಲ್ಯು ಇಂಡಿಯಾ ಹಾಗೂ ಮರ್ಸಿಡಿಸ್ ಬೆಂಝ್, ಅಗ್ಗದ ಐಷಾರಾಮಿ ಕಾರುಗಳನ್ನು ನಿಕಟ ಭವಿಷ್ಯದಲ್ಲಿ ದೇಶಕ್ಕೆ ಪರಿಚಯಿಸಲಿದೆ.
ಮೂಲಗಳ ಪ್ರಕಾರ ಬಿಎಂಡಬ್ಲ್ಯು 1 ಸಿರೀಸ್ ಪ್ರೀಮಿಯಂ ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ 2013 ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಇದು 18ರಿಂದ 20 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಬಿಎಂಡಬ್ಲ್ಯು 1 ಸಿರೀಸ್ ಚೆನ್ನೈ ಘಟಕದಲ್ಲಿ ಜೋಡಣೆಯಾಗಲಿದ್ದು, ಎಕ್ಸ್1 ಆವೃತ್ತಿಯನ್ನು ಹಿಮ್ಮೆಟ್ಟಿಸಲಿದೆ. ಇದು 4 ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದಿರಲಿದೆ. ಪ್ರಸ್ತುತ ಬಿಎಂಡಬ್ಲ್ಯು ದೇಶದಲ್ಲಿ 35 ಡೀಲರ್‌ಶಿಪ್‌ಗಳನ್ನು ಹೊಂದಿದ್ದು, 2014ರ ವೇಳೆಗೆ ಈ ಸಂಖ್ಯೆಯನ್ನು 50ಕ್ಕೆ ಏರಿಸುವ ಇರಾದೆ ಹೊಂದಿದೆ.

ಮತ್ತೊಂದೆಡೆ ಬಿಎಂಡಬ್ಲ್ಯುಕ್ಕಿಂತ ಮೊದಲೇ ಎ ಕ್ಲಾಸ್ ಕಾರನ್ನು ಲಾಂಚ್ ಮಾಡಲು ಮರ್ಸಿಡಿಸ್ ಬೆಂಝ್ ಗುರಿಯಿರಿಸಿಕೊಂಡಿದೆ. ಪ್ರಸ್ತುತ ಕಾರು ಜೂನ್ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ.

ಬೆಂಝ್ ಅಗ್ಗದ ಲಗ್ಷುರಿ ಕಾರು ಕೂಡಾ 20 ಲಕ್ಷ ಅಸುಪಾಸಿನಲ್ಲಿರಲಿದ್ದು, ಮಹಾರಾಷ್ಟ್ರದ ಚಕಾನ್ ಘಟಕದಲ್ಲಿ ಜೋಡಣೆಯಾಗಲಿದೆ.

ಬಿಎಂಡಬ್ಲ್ಯು 1 ಸಿರೀಸ್



Click it and Unblock the Notifications