ಹೊಸ ಸ್ವರೂಪ; ಬಿಎಂಡಬ್ಲ್ಯು 5 ಸಿರೀಸ್ ಫೇಸ್‌ಲಿಫ್ಟ್ ಲಾಂಚ್
ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಈ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ 5 ಸಿರೀಸ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಿದೆ. ಭಾರತ ಮಾರುಕಟ್ಟೆಯಲ್ಲಿ ಇದರ ಪ್ರಾರಂಭಿಕ ಬೆಲೆ 46.90 ಲಕ್ಷ ರು.ಗಳಾಗಿವೆ.
ನೂತನ ಬಿಎಂಡಬ್ಲ್ಯು 5 ಸಿರೀಸ್ ಐಷಾರಾಮಿ ಸೆಡಾನ್ ಕಾರಿನ ಹೊರ ಸ್ವರೂಪವನ್ನು ಸುಂದರಗೊಳಿಸಲಾಗಿದೆ. ಇದು ಕ್ರೋಮ್ ಗ್ರಿಲ್, ಸೈಡ್ ವಿಂಡೋ ಫ್ರೇಮ್, ಟೈಲ್ ಪೈಪ್ ಟಿಪ್, ಫಾಗ್ ಲ್ಯಾಂಪ್‌ಗಳಂತಹ ಆಕರ್ಷಕ ಫೀಚರ್‌ಗಳಿವೆ. ಇನ್ನು ಏರ್ ಡ್ಯಾಮ್ ಪರಿಷ್ಕೃತಗೊಳಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷ ಪಿಲಿಪ್, 5 ಸಿರೀಸ್ ಅತ್ಯಾಧುನಿಕ ಮುಂದುವರಿದ ಬಿಎಂಡಬ್ಲ್ಯು 5 ಸಿರೀಸ್ ತಂತ್ರಗಾರಿಕೆಯನ್ನು ಹೊಂದಿದೆ ಎಂದಿದ್ದಾರೆ.

ದರ ಮಾಹಿತಿ
- ಬಿಎಂಡಬ್ಲ್ಯು 520ಡಿ ಮಾರ್ಡನ್: ರು. 46,90,000
- ಬಿಎಂಡಬ್ಲ್ಯು 520ಡಿ ಲಗ್ಷುರಿ: ರು. 46,90,000
- ಬಿಎಂಡಬ್ಲ್ಯು 525ಡಿ ಲಗ್ಷುರಿ ಪ್ಲಸ್: ರು. 51,90,000
- ಬಿಎಂಡಬ್ಲ್ಯು 525ಡಿ ಎಂ ಸ್ಪೋರ್ಟ್: ರು. 57,90,000

ಕಲರ್ ವೆರಿಯಂಟ್
ಮೆಟ್ಯಾಲಿಕ್: ಬ್ಲ್ಯಾಕ್ ಸಪೈರ್, ಕ್ಯಾಲಿಸ್ಟೊ ಗ್ರೇ, ಕಾರ್ಬನ್ ಬ್ಲ್ಯಾಕ್ ಮೆಟ್ಯಾಲಿಕ್, ಕ್ಯಾಶ್‌ಮೆರ್ ಸಿಲ್ವರ್, ಗ್ರೇಸಿಯರ್ ಸಿಲ್ವರ್, ಇಂಪಿರಿಯಲ್ ಬ್ಲ್ಯೂ, ಬ್ರಿಲಿಯಂಟ್ ಎಫೆಕ್ಟ್, ಜಟೊಬಾ, ಸಾಫಿಸ್ಟೊ ಗ್ರೇ ಬ್ರಿಲಿಯಂಟ್ ಎಫೆಕ್ಟ್ ಮತ್ತು ಮಿನರಲ್ ವೈಟ್.
ನಾನ್ ಮೆಟ್ಯಾಲಿಕ್ ಕಲರ್- Alpine White

ಎಂಜಿನ್ ಮತ್ತು ವೆರಿಯಂಟ್
ಬಿಎಂಡಬ್ಲ್ಯು 530ಡಿ ಎಂ ಸ್ಪೋರ್ಟ್: 3.0 ಲೀಟರ್ ಟ್ವಿನ್ ಪವರ್ ಟರ್ಬೊ ಇನ್ ಲೈನ್ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್ (258 ಅಶ್ವಶಕ್ತಿ, 540 ಎನ್‌ಎಂ ಟಾರ್ಕ್)
ವೇಗವರ್ಧನೆ: 5.8 ಸೆಕೆಂಡುಗಳಲ್ಲಿ 0-100 km/h
ಗರಿಷ್ಠ ವೇಗ: 250 km/h

ಎಂಜಿನ್ ಮತ್ತು ವೆರಿಯಂಟ್
ಬಿಎಂಡಬ್ಲ್ಯು 525ಡಿ: 2.0 ಲೀಟರ್ ಟ್ವಿನ್ ಪವರ್ ಟರ್ಬೊ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ (218 ಅಶ್ವಶಕ್ತಿ, 450 ಎನ್‌ಎಂ ಟಾರ್ಕ್).
ವೇಗವರ್ಧನೆ: 6.9 ಸೆಕೆಂಡುಗಳಲ್ಲಿ 0-100 km/h
ಗರಿಷ್ಠ ವೇಗ: 243 km/h

ಎಂಜಿನ್ ಮತ್ತು ವೆರಿಯಂಟ್
ಬಿಎಂಡಬ್ಲ್ಯು 520ಡಿ: 2.0 ಲೀಟರ್ ಟ್ವಿನ್ ಪವರ್ ಟರ್ಬೊ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ (184 ಅಶ್ವಶಕ್ತಿ, 380 ಎನ್‌ಎಂ ಟಾರ್ಕ್).
ವೇಗವರ್ಧನೆ: 7.9 ಸೆಕೆಂಡುಗಳಲ್ಲಿ 0-100 km/h
ಗರಿಷ್ಠ ವೇಗ: 231 km/h

ಸ್ಟಾಂಡರ್ಡ್ ವೈಶಿಷ್ಟ್ಯಗಳು
ಆಕ್ಟಿವ್ ಪ್ರೊಟೆಕ್ಷನ್ ಜತೆ ಆಟೆಕ್ಷನ್ ಅಸಿಸ್ಟ್, ಆಕ್ಟಿವ್ ಹೆಡ್ ರೆಸ್ಟ್ (ಫ್ರಂಟ್), ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ) ಜತೆ ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (ಡಿಟಿಸಿ), ಸೈಡ್ ಇಂಪಾಕ್ಟ್ ಪೊಟೆಕ್ಷನ್ ಮತ್ತು ವಾರ್ನಿ ಟ್ರೈಯಂಗಲ್ ಜತೆ ಫಸ್ಟ್ ಏಡ್ ಕಿಟ್. ಆಟೋ ಸ್ಟಾರ್ಟ್-ಸ್ಟಾಪ್, ಇಕೊ ಪ್ರೊ ಮೋಡ್, ಬ್ರೇಕ್ ಎನರ್ಜಿ ರಿಜನರೇಷನ್, ನೆಕ್ಸ್ಟ್ ಜನರೇಷನ್ ಐಡ್ರೈವ್ (ಆನ್ ಬೋರ್ಡ್ ಡ್ರೈವರ್ ಮಾಹಿತಿ ಸಿಸ್ಟಂ), ಹಾರ್ಮನ್ ಕರ್ಡಾನ್ ಸೌರಂಡ್ ಸೌಂಡ್ ಸಿಸ್ಟಂ, ಬ್ಲ್ಯೂಟೂತ್ ಕನೆಕ್ಟಿವಿಟಿ ಮತ್ತು ಯುಎಸ್‌ಬಿ ಡಿವೈಸ್.

ಮಾಹಿತಿ ಸಿಸ್ಟಂ
ಇದರ ಜತೆಗೆ ಬಿಎಂಡಬ್ಲ್ಯು 525ಡಿ ಲಗ್ಷುರಿ ಪ್ಲಸ್ ಮತ್ತು 530ಡಿ ಎಂ ಸ್ಪೋರ್ಟ್ ಆವೃತ್ತಿಗಳು ಬಿಎಂಡ್ಲ್ಯು ಆಪ್ ಹಾಗೂ ನೇವಿಗೇಷನ್ ಪ್ರೊಫೆಶನಲ್ (ಜಿಪಿಎಸ್) ಜತೆ 25.9 ಸೆಂಟಿಮೀಟರ್ ಕಲರ್ ಡಿಸ್‌ಪ್ಲೇ, ಐಡ್ರೈವ್ ಜತೆ ಟಚ್ ಕಂಟ್ರೋಲರ್, ಡಿವಿಡಿ ಡ್ರೈವ್ ಮತ್ತು ಇಂಟೆಗ್ರೇಟಡನ್ ಹಾರ್ಡ್ ಡ್ರೈವ್ ಮ್ಯಾಪ್ ಮತ್ತು ಆಡಿಯೋ ಫೈಲ್ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.


Click it and Unblock the Notifications








