ಕೋಟಿ ದುಬಾರಿಯ ಬಿಎಂಡಬ್ಲ್ಯು ಎಂ3, ಎಂ4 ಭಾರತದಲ್ಲಿ ಲಾಂಚ್

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಅತ್ಯಂತ ದುಬಾರಿಯ ಎಂ3 ಸೆಡಾನ್ ಹಾಗೂ ಎಂ4 ಕೂಪೆ ಮಾದರಿಗಳನ್ನು ಪರಿಚಯಿಸಿದೆ. ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಬಿಎಂಡಬ್ಲ್ಯು ಬ್ರಾಂಡ್ ಅಂಬಾಸಿಡರ್ ಆಗಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಉಪಸ್ಥಿತಿಯಲ್ಲಿ ಹೊಸ ಕಾರು ಅದ್ದೂರಿಯಾಗಿ ಅನಾವರಣಗೊಂಡಿತ್ತು.

ದರ ಮಾಹಿತಿ (ಎಕ್ಸ್ ಶೋ ರೂಂ, ಭಾರತ)

  • ಬಿಎಂಡಬ್ಲ್ಯು ಎಂ3 - 1.12 ಕೋಟಿ ರು.
  • ಬಿಎಂಡಬ್ಲ್ಯು ಎಂ4 - 1.22 ಕೋಟಿ ರು.

ಬಿಎಂಡಬ್ಲ್ಯು ಹೊಸತಾದ ಎಂ3 ಸೆಡಾನ್ ಮತ್ತು ಎಂ4 ಕೂಪೆ ಮಾದರಿಗಳು ಇನ್ನಷ್ಟೇ ಆಗಮನವಾಗಲಿರುವ ಮರ್ಸಿಡಿಸ್ ಬೆಂಝ್‌ನ ಸಿ63 ಎಎಂಜಿ (ಮುಂದಿನ ವರ್ಷ ಬಿಡುಗಡೆ) ಮತ್ತು ವಿ6 ಜಾಗ್ವಾರ್ ಎಫ್ ಟೈಪ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಬಿಎಂಡಬ್ಲ್ಯು ಎಂ3 ಸೆಡಾನ್, ಎಂ4 ಕೂಪೆ ಭಾರತದಲ್ಲಿ ಬಿಡುಗಡೆ

3.0 ಲೀಟರ್ ಇನ್ ಲೈನ್ ಸಿಕ್ಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ಎರಡು ಬಿಎಂಡಬ್ಲ್ಯು ಮಾದರಿಗಳು 437 ಅಶ್ವಶಕ್ತಿ (550 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಕೇವಲ 4.1 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸಲು ಸಹಕಾರಿಯಾಗಲಿದೆ.

ಬಿಎಂಡಬ್ಲ್ಯು ಎಂ3 ಸೆಡಾನ್, ಎಂ4 ಕೂಪೆ ಭಾರತದಲ್ಲಿ ಬಿಡುಗಡೆ

ಭಾರತ ಮಾದರಿಯ ಎಂ3 ಹಾಗೂ ಎಂ4 ಮಾದರಿಗಳು ಸೆವೆನ್ ಸ್ಪೀಡ್ ಎಂ ಡಬಲ್ ಕ್ಲಚ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಹಾಗೆಯೇ ನಿರೀಕ್ಷೆಯಂತೆಯೇ 19 ವೀಲ್ ಮಾದರಿಯು ಭಾರತ ಪ್ರವೇಶವಾಗಿಲ್ಲ.

ಬಿಎಂಡಬ್ಲ್ಯು ಎಂ3 ಸೆಡಾನ್, ಎಂ4 ಕೂಪೆ ಭಾರತದಲ್ಲಿ ಬಿಡುಗಡೆ

ಶೈಲಿಯ ಬಗ್ಗೆ ಮಾತನಾಡುವುದಾದ್ದಲ್ಲಿ ಬಿಎಂಡಬ್ಲ್ಯು ಎಂ3 ಮಾದರಿಯು 3 ಸಿರೀಸ್ ಹಾಗೂ ಎಂ4 ಮಾದರಿಯು 4 ಸಿರೀಸ್ ತಳಹದಿಯಲ್ಲಿ ನಿರ್ಮಾಣವಾಗಿದೆ. ಅಂತೆಯೇ ಕಾರ್ಬನ್ ಫೈಬರ್, ಅಲ್ಯೂಮಿನಿಯಂ ಸಲಕರಣೆಗಳ ಬಳಕೆಯಿಂದಾಗಿ ಒಟ್ಟಾರೆ ಭಾರ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ಬಿಎಂಡಬ್ಲ್ಯು ಎಂ3 ಸೆಡಾನ್, ಎಂ4 ಕೂಪೆ ಭಾರತದಲ್ಲಿ ಬಿಡುಗಡೆ

ನಾವೀನ್ಯತೆಯ ಎಂ ಟ್ವಿನ್ ಪವರ್ ಟರ್ಬೊ ಟೆಕ್ನಾಲಜಿ, ಹಗುರ ಭಾರದ ವಿನ್ಯಾಸ, ಕ್ರೀಡಾತ್ಮಕ ಒಳಮೈ, ಅದ್ಭುತ ನಿರ್ವಹಣೆ, ಚುರುಕುತನ ಹಾಗೂ ನಿಖರತೆ ಹೊಸ ಬಿಎಂಡಬ್ಲ್ಯು ಮಾದರಿಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.

ಬಿಎಂಡಬ್ಲ್ಯು ಎಂ3 ಸೆಡಾನ್, ಎಂ4 ಕೂಪೆ ಭಾರತದಲ್ಲಿ ಬಿಡುಗಡೆ

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಬಿಎಂಡಬ್ಲ್ಯು ಹೊಸ ಕಾರುಗಳು ಭಾರತ ಮಾರುಕಟ್ಟೆಯನ್ನು ತಲುಪಲಿದೆ.

ಬಿಎಂಡಬ್ಲ್ಯು ಎಂ3 ಸೆಡಾನ್, ಎಂ4 ಕೂಪೆ ಭಾರತದಲ್ಲಿ ಬಿಡುಗಡೆ

ನೆಕ್ಸ್ಟ್ ಜನರೇಷನ್ ಬಿಎಂಡಬ್ಲ್ಯ ಐ ಡ್ರೈವ್ (ಆನ್ ಬೋರ್ಡ್ ಚಾಲಕ ಮಾಹಿತಿ ವ್ಯವಸ್ಥೆ) ಜೊತೆ ಟಚ್ ಕಂಟ್ರೋಲರ್, ಬಿಎಂಡಬ್ಲ್ಯು ನೇವಿಗೇಷನ್ ಪ್ರೊಫೆಷನಲ್ (ಇಂಟೆಗ್ರೇಟಡ್ ಗ್ಲೋಬಲ್ ಪೊಶಿಷನಿಂಗ್ ಸಿಸ್ಟಂ - ಜಿಪಿಎಸ್), 22.35 ಕಲರ್ ಡಿಸ್‌ಪ್ಲೇ, 3ಡಿ ಮ್ಯಾಪ್, ಫುಲ್ ಕಲರ್ ಬಿಎಂಡಬ್ಲ್ಯು ಹೆಡ್ ಅಪ್ ಡಿಸ್‌ಪ್ಲೇ, ಎಂ ಸ್ಪೆಸಿಫಿಕ್ ವ್ಯೂ, ಬ್ಲೂಟೂತ್ ಕೆನೆಕ್ಟಿವಿಟಿ, ಯುಎಸ್‌ಬಿ ಡಿವೈಸ್, ಬಿಎಂಡಬ್ಲ್ಯು ಆಪ್, ಪಾರ್ಕ್ ಡಿಸ್ಟಾನ್ಸ್ ಕಂಟ್ರೋಲ್ (ಪಿಡಿಸಿ) ಮತ್ತು ರಿಯರ್ ವ್ಯೂ ವ್ಯೂಗಳಂತಹ ಸೌಲಭ್ಯಗಳಿರಲಿದೆ.


More from DriveSpark

Article Published On: Thursday, November 27, 2014, 14:26 [IST]
English summary
The all new BMW M3 Sedan and the all new BMW M4 Coupe were launched in India priced Rs 1.19 crore and Rs 1.21 crore (ex-showroom, India) respectively.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+