ಬಿಎಂಡಬ್ಲ್ಯು‌ನಿಂದ ಐಷಾರಾಮಿ ಕಾರು ಲಾಂಚ್

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು, ಇನ್ನೊಂದು ಲಗ್ಷುರಿ ಝಡ್4 ಕಾರನ್ನು ಲಾಂಚ್ ಮಾಡಿದೆ.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ವರ್ಷಾರಂಭದಲ್ಲಿ ಡೆಟ್ರಾಯ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿದ್ದ ಬಿಎಂಡಬ್ಲ್ಯು ಝಡ್4 ಕಾರಿನಲ್ಲಿ ಅಂದತೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಅಂದರೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಇದು ಭಾರತದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಮಾರಾಟವಾಗಲಿದೆ.

ಬಿಎಂಡಬ್ಲ್ಯು ಝಡ್4 ಇಂಡಿಯಾ ಲಾಂಚ್

ಪುಣೆಯಲ್ಲಿ ನಡೆದ ಆದ್ಧೂರಿ ಸಮಾರಂಭದಲ್ಲಿ ಬಿಡುಗಡೆಯಾಗಿರುವ ಬಿಎಂಡಬ್ಲ್ಯು ಝಡ್4 ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ.

ಬಿಎಂಡಬ್ಲ್ಯು ಝಡ್4 ಇಂಡಿಯಾ ಲಾಂಚ್

ಈ ಐಷಾರಾಮಿ ಕಾರಿನ ದರ 68.90 ಲಕ್ಷ ರು.ಗಳಾಗಿವೆ. ಅಂದರೆ ಆಡಂಬರ ಜೀವನ ಬಯಸುವ ಶ್ರೀಮಂತರಿಗೆ ಹೆಚ್ಚು ಸುಖಕರವಾದ ಪಯಣದ ಅನುಭವ ನೀಡಲಿದೆ.

ಬಿಎಂಡಬ್ಲ್ಯು ಝಡ್4 ಇಂಡಿಯಾ ಲಾಂಚ್

ಇದರ ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್ ಮತ್ತು ಟರ್ನ್ ಇಂಡಿಕೇಟರುಗಳು ಹೆಚ್ಚು ಆಕರ್ಷಕವಾಗಿದೆ. ಹಾಗೆಯೇ ಮುಂಭಾಗದ ಬಂಪರ್ ಕೂಡಾ ಪರಿಷ್ಕೃತಗೊಳಿಸಲಾಗಿದೆ.

ಬಿಎಂಡಬ್ಲ್ಯು ಝಡ್4 ಇಂಡಿಯಾ ಲಾಂಚ್

18 ಇಂಚಿನ ಅಲಾಯ್ ವೀಲ್, ಕಿತ್ತಳೆ ಬಣ್ಣ ಹಾಗೂ ಐಚ್ಛಿಕ ಓಪನ್ ಟಾಪ್ ಮೇಲ್ಛಾವಣಿ ಇತರ ಪ್ರಮುಖ ವೈಶಿಷ್ಟ್ಯಗಳಾಗಿದೆ.

ಬಿಎಂಡಬ್ಲ್ಯು ಝಡ್4 ಇಂಡಿಯಾ ಲಾಂಚ್

ಕಾರಿನ ಆಂತರಿಕ ಭಾಗಗಳಲ್ಲೂ ಸೀಟಿಗೆ ಕಿತ್ತಳೆ ಬಣ್ಣ ವಿಶೇಷ ಸ್ಟಿಕ್ಕರುಗಳನ್ನು ಬಳಿಯಲಾಗಿದೆ. ಹಾಗೆಯೇ ಸೆಂಟ್ರೋಲ್ ಕನ್ಸೋಲ್‌ನಲ್ಲಿ ಐಡ್ರೈವ್ ಸೇವೆ ಲಭ್ಯವಿರುತ್ತದೆ.

ಬಿಎಂಡಬ್ಲ್ಯು ಝಡ್4 ಇಂಡಿಯಾ ಲಾಂಚ್

ನೂತನ ಬಿಎಂಡಬ್ಲ್ಯು ಝಡ್4 ಏಕೈಕ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ. ಇದು 3.0 ಲೀಟರ್ ಟ್ವಿನ್ ಟರ್ಬೊ 6 ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಿಲಿದ್ದು, 306 ಅಶ್ವಶಕ್ತಿ (400 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಬಿಎಂಡಬ್ಲ್ಯು ಝಡ್4 ಇಂಡಿಯಾ ಲಾಂಚ್

ಅಂತೆಯೇ 7 ಸ್ಪೀಡ್ ಡ್ಯುಯಲ್ ಕ್ಲಾಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಇದು ಕೇವಲ 5.1 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಾಮರ್ಥ್ಯವನ್ನು ಹೊಂದಿದೆ.

ವೆರಿಯಂಟ್

ವೆರಿಯಂಟ್

ಎಸ್‌ಡ್ರೈವ್ 35ಐ (sDrive 35i) ಮತ್ತು ಎಸ್‌ಡ್ರೈವ್ 35ಐ (sDrive 35i) ಡಿಸೈನ್ ಪ್ಯೂರ್ ಟ್ರಾಕ್ಷನ್ (ಡಿಪಿಟಿ) ವೆರಿಯಂಟ್‌ಗಳಲ್ಲಿ ಲಭ್ಯವಾಗಿರಲಿದೆ.

ದರ ಮಾಹಿತಿ

ದರ ಮಾಹಿತಿ

ಬಿಎಂಡಬ್ಲ್ಯು ಝಡ್4 ಎಸ್‌ಡ್ರೈವ್ 35ಐ - 68.9 ಲಕ್ಷ ರು.

ಬಿಎಂಡಬ್ಲ್ಯು ಝಡ್4 ಎಸ್‌ಡ್ರೈವ್ 35ಐ ಪ್ಯೂರ್ ಟ್ರಾಕ್ಷನ್- 69.9 ಲಕ್ಷ ರು.

Article Published On: Thursday, November 14, 2013, 14:25 [IST]
English summary
The 2014 model year BMW Z4 roadster has been launched in India. The stylish new hardtop convertible was revealed earlier this year at the Detroit Motor Show. The new BMW Z4 is mostly unchanged from the outgoing model, with all the changes limited to cosmetic updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+