ಈಗಲೇ ಕಾರು ಖರೀದಿಸಿ; ಭಾರಿ ಡಿಸ್ಕೌಂಟ್
ಕಾರು ಮಾರುಕಟ್ಟೆ ದೊಪ್ಪನೆ ಕುಸಿದಿರುವ ಹಿನ್ನಲೆಯಲ್ಲಿ ಬಹುತೇಕ ಎಲ್ಲ ಕಾರು ತಯಾರಕ ಸಂಸ್ಥೆಗಳು ರಿಯಾಯಿತಿ ದರ ಸೇರಿದಂತೆ ಹಲವು ಆಫರ್‌ಗಳನ್ನು ಮುಂದಿರಿಸಿವೆ. ಈ ಮೂಲಕ ಮಾರುಕಟ್ಟೆಗೆ ಉತ್ತೇಜನ ನೀಡುವ ಪ್ರಯತ್ನ ಮಾಡುತ್ತಿವೆ.
ಎಂಟ್ರಿ ಲೆವೆಲ್ ಮಾರುತಿ ಆಲ್ಟೊದಿಂದ ಆರಂಭಿಸಿ ದುಬಾರಿ ಬಿಎಂಡಬ್ಲ್ಯು 5 ಸಿರೀಸ್ ವರೆಗೂ ಡಿಸ್ಕೌಂಟ್ ಷೋಘಿಸಲಾಗಿದೆ. ಇದರಂತೆ ಪ್ರಮುಖ ಕಾರು ಉತ್ಪಾದಕರ ಆಫರ್‌ಗಳ ಬಗ್ಗೆ ಈ ಕೆಳಗಡೆ ಕೊಡಲಾಗಿದೆ. ನೀವಿದನ್ನು ಓದಿ ಮಾಹಿತಿ ಪಡೆದುಕೊಳ್ಳಬಹುದು.

ಮಾರುತಿ ವ್ಯಾಗನಾರ್
ನೀವು ನೂತನ ಮಾರುತಿ ವ್ಯಾಗನಾರ್ ಖರೀದಿಸಲು ಯೋಜನೆ ಹೊಂದಿದ್ದಲ್ಲಿ ಶೋರೂಂಗಳಲ್ಲಿ 20,000 ರು.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ. ಇದರ ಜತೆ ಹೆಚ್ಚುವರಿ 28 ಸಾವಿರ ರು.ಗಳ ಲಭ್ಯವಿದೆ. ಈ ಮೂಲಕ ಒಟ್ಟು 48,000 ರು.ಗಳ ವರೆಗೆ ಉಳಿತಾಯ ಮಾಡಿಕೊಳ್ಳಬಹುದಾಗಿದೆ.

ಮಾರುತಿ ಆಲ್ಟೊ
ಮಾರುತಿ ಆಲ್ಟೊಗೆ ಕೂಡಾ ರು. 20 ಸಾವಿರ ತನಕ ಡಿಸ್ಕೌಂಟ್ ಘೋಷಿಸಲಾಗಿದೆ. ಹಾಗೆಯೇ 20,000 ರು.ಗಳ ವರೆಗೆ ಎಕ್ಸ್‌ಜೇಂಜ್ ಬೋನಸ್ ನೀಡಲಾಗುತ್ತಿದೆ.

ಹ್ಯುಂಡೈ
ಉಚಿತ ವಿಮಾ ಯೋಜನೆಯೊಂದಿಗೆ ಹ್ಯುಂಡೈ ಐ10 ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಬಂದಿದೆ. ಅಂದರೆ ನೀವು 17,000 ರು.ಗಳ ವರೆಗೆ ಉಳಿತಾಯ ಮಾಡಿಕೊಳ್ಳಬಹುದಾಗಿದೆ. ಇದರ ಜತೆ 20,000 ರು.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್, 9,000 ನಗದು ಬೋನಸ್ ಹಾಗೂ 5,000 ರು.ಗಳ ವರೆಗೆ ಕಾರ್ಪೋರೇಟ್ ರಿಯಾಯಿತಿ ನೀಡಲಾಗುತತ್ತಿದೆ.

ಮಹೀಂದ್ರ ಕ್ವಾಂಟೊ
ಇನ್ನು ಮಹೀಂದ್ರ ಕಂಪನಿಯು ಕ್ವಾಂಟೊ ಖರೀದಿ ವೇಳೆ 20,000 ರು.ಗಳ ವರೆಗೆ ಡಿಸ್ಕೌಂಟ್ ಹಾಗೂ ಅಷ್ಟೇ ಮೊತ್ತದ ಎಕ್ಸ್‌ಚೇಂಜ್ ಬೋನಸ್ ಆಫರ್ ಕೂಡಾ ನೀಡುತ್ತಿದೆ.

ಮಹೀಂದ್ರ ಕ್ಸೈಲೋ
ಇನ್ನು ಕ್ಸೈಲೋಗೆ 52000 ರು.ಗಳ ವರೆಗೆ ರಿಯಾಯಿತಿ ದರ ಲಭಿಸಲಿದೆ. ಆದರೆ ಇದು ವೆರಿಯಂಟ್ ಆಧಾರದಲ್ಲಿರಲಿದೆ.

ಮಹೀಂದ್ರ ವೆರಿಟೊ
ಮಹೀಂದ್ರ ವೆರಿಟೊಗೆ ಕೂಡಾ ಉಚಿತ ವಿಮಾ ಸೌಲಭ್ಯ ಲಭ್ಯವಿದ್ದು, 10 ಸಾವಿರ ರು.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್ ಹಾಗೂ ರು. 7000 ವರೆಗೆ ಕಾರ್ಪೋರೇಟ್ ಡಿಸ್ಕೌಂಟ್ ಲಭ್ಯವಿದೆ. ಇದು ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಿಗೂ ಅನ್ವಯವಾಗಲಿದೆ.

ಫೋಕ್ಸ್‌ವ್ಯಾಗನ್ ಪ್ಯಾಸೆಟ್
ಫೋಕ್ಸ್‌ವ್ಯಾಗನ್ ಪ್ಯಾಸೆಟ್ ಖರೀದಿ ವೇಳೆ ರು. 2 ಲಕ್ಷ ವರೆಗೂ ಉಳಿತಾಯ ಮಾಡಬಹುದು. ಇದು ಎಲ್ಲ ಮಾಡೆಲ್‌ಗಳಿಗೂ ಅನ್ವಯವಾಗಲಿದೆ.

ಪೊಲೊ
ಪೊಲೊಗೆ ಉಚಿತ ವಿಮಾ ಯೋಜನೆ
ಪೆಟ್ರೋಲ್ ವೆರಿಯಂಟ್‌ಗೆ 24,000 ರು.ಗಳ ವರೆಗೆ ಉಳಿತಾಯ,
ಡೀಸೆಲ್ ವೆರಿಯಂಟ್ 26,000 ರು.ಗಳ ವರೆಗೆ ಉಳಿತಾಯ ಯೋಜನೆ
10 ಸಾವಿರ ರು.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್

ನಿಸ್ಸಾನ್ ಸನ್ನಿ
ನಿಸ್ಸಾನ್ ಸನ್ನಿ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗೆ 17000 ರು.ಗಳ ತನಕ ನಗದು ರಿಯಾಯಿತಿ. ಹಾಗೆಯೇ 20,000 ರು.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್

ನಿಸ್ಸಾನ್ ಇವಾಲಿಯಾ
ಇನ್ನು 2012 ಮಾದರಿಯ ನಿಸ್ಸಾನ್ ಇವಾಲಿಯಾ ಎಂಪಿವಿ ಖರೀದಿಸುವುದಾದರೆ 1.25 ಲಕ್ಷ ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ಆಡಿ ಎ4
2.0 ಟಿಡಿಐ ವೆರಿಯಂಟ್‌ಗೆ 4 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ (ವಾಣಿಜ್ಯ ಅಡಿಷನ್‌ಗೆ ಅನ್ವಯವಾಗುವುದಿಲ್ಲ)

ಮರ್ಸಿಡಿಸ್ ಬೆಂಝ್ ಸಿ ಹಾಗೂ ಇ ಕ್ಲಾಸ್
ಸಿ ಕ್ಲಾಸ್‌ಗೆ 3 ಲಕ್ಷ ರು.ಗಳ ವರೆಗೆ ಆಫರ್. ಹಾಗೆಯೇ ಇ ಕ್ಲಾಸ್‌ಗೆ 5 ಲಕ್ಷ ರು.ಗಳ ವರೆಗೆ ಆಫರ್.

ಬಿಎಂಡಬ್ಲ್ಯು 3 ಹಾಗೂ 5 ಸಿರೀಸ್
3 ಸಿರೀಸ್‌ಗೆ 3.5 ಹಾಗೂ 5 ಸಿರೀಸ್‌ಗೆ 5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್

ಟೊಯೊಟಾ ಕರೊಲ್ಲಾ ಆಲ್ಟೀಸ್
20,000 ರು.ಗಳ ವರೆಗೆ ಎಕ್ಸ್‌ಚೇಂಜ್ ಆಫರ್
ಟೊಯೊಟಾ ಕರೊಲ್ಲಾ ಆಲ್ಟೀಸ್ 29,000 ಉಳಿತಾಯ

ಟಾಟಾ ಆರಿಯಾ
ಇನ್ನು ಇತರ ಸಂಸ್ಥೆಗಳಿಗೆ ಹೋಲಿಸಿದರೆ ಟಾಟಾ ಮೋಟಾರ್ಸ್ ಆರಿಯಾಗೆ ಹೆಚ್ಚಿನ ರಿಯಾಯಿತಿ ದರ ನೀಡಲಾಗುತ್ತಿದೆ. ಪ್ಯೂರ್ ಎಲ್‌ಎಕ್ಸ್ ಮಾದರಿ ಹೊರತುಪಡಿಸಿ 2012ರ ಎಲ್ಲ ಆರಿಯಾ ವೆರಿಯಂಟ್‌ಗಳಿಗೆ 2 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಇನ್ನು 2011ರ ಕೆಲವು ಮಾಡೆಲ್‌ಗಳಿಗೆ ರು. 2.5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರ ಜತೆಗೆ 2012 ಹಾಗೂ 2013 ಮಾಡೆಲ್‌ಗಳಿಗೆ 50 ಸಾವಿರು ರು. ತನಕ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.

ಷೆವರ್ಲೆ ಕ್ರೂಜ್
ಷೆವರ್ಲೆ ಕ್ರೂಜ್ ಉಚಿತ ವಿಮಾ ಯೋಜನೆ.
58,000 ರು.ಗಳ ವರೆಗೆ ಉಳಿತಾಯ.
ಇನ್ನು 20,000 ರು.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್.


Click it and Unblock the Notifications








