ಆಫ್ ರೋಡಿಂಗ್ ರೈಡರ್ಸ್‌ಗೆ ಫೋರ್ಡ್ ಎಂಡೋವರ್
ಜಾಗತಿಕ ಮಾರುಕಟ್ಟೆಯಲ್ಲಿ ಒಂದರ ಬಳಿಕ ಒಂದರಂತೆ ಅತಿ ನೂತನ ಕಾರುಗಳನ್ನು ಪರಿಚಯಿಸುತ್ತಿರುವ ಅಮೆರಿಕ ವಾಹನ ತಯಾರಕ ಕಂಪನಿಯಾದ ಫೋರ್ಡ್, ಇದೀಗ ಭಾರತದಲ್ಲಿ ನೂತನ ಫೋರ್ಡ್ ಎಂಡೋವರ್ ಎಸ್‌ಯುವಿ ಕಾರನ್ನು ಪರಿಚಯಿಸಿದೆ.
ಆಕರ್ಷಕ ಲುಕ್ ಹಾಗೂ ಗರಿಷ್ಠ ನಿರ್ವಹಣೆಯಿಂದಾಗಿ ಫೋರ್ಡ್ ಎಂಡೋವರ್ ಅಲ್ಟ್-ಟರೈನ್ ಅಡಿಷನ್ ವಿಶೇಷವೆನಿಸಿದೆ. ಪ್ರಮುಖವಾಗಿಯೂ ಆಫ್ ರೋಡಿಂಗ್ ಇಷ್ಟಪಡುವ ಯುವ ಉತ್ಸಾಹಿ ಗ್ರಾಹಕರಲ್ಲಿ ಪ್ರಸ್ತುತ ಕಾರು ಸಂಚಲನವನ್ನುಂಟು ಮಾಡಲಿದೆ.
ನೂತನ ಅಲ್ಟ್-ಟರೈನ್, ಎಂಡೋವರ್ ಸರಣಿಯ ಎರಡನೇ ಸ್ಪೆಷನ್ ಅಡಿಷನ್ ಮಾಡೆಲ್ ಆಗಿದೆ. ಭಾರತದಲ್ಲಿ ಈ ಎಸ್‍ಯುವಿ ಕಾರಿನ ಆರಂಭಿಕ ದರ 19.11 ಲಕ್ಷ ರು.ಗಳಾಗಿವೆ. ಹಾಗೆಯೇ ಕಂಪನಿಯು ಈ ಕಾರಿನಲ್ಲಿ 3.0 ಲೀಟರ್ ಕ್ಷಮತೆಯ ಟಿಡಿಸಿಐ (TDCi) ಡೀಸೆಲ್ ಎಂಜಿನ್ ಪ್ರಯೋಗಿಸಿದೆ. ಇದರಿಂದ 156 ಪಿಎಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಎಂಡೋವರ್ ಸರಣಿಯ ಎರಡನೇ ಸ್ಪೆಷಲ್ ಅಡಿಷನ್ ಕಾರಾದ ಅಲ್ಟ್-ಟರೈನ್ ಕಾರನ್ನು ಫೋರ್ಡ್ ಮಾರುಕಟ್ಟೆಗೆ ಪರಿಚಯಿಸಿದೆ.

ಕಂಪನಿಯು ಈ ಕಾರಿನಲ್ಲಿ 3.0 ಲೀಟರ್ ಸಾಮರ್ಥ್ಯದ ಎಂಜಿನ್ ಪ್ರಯೋಗಿಸಿದೆ. ಇದರಿಂದ ಎಂಜಿನ್ ಮತ್ತಷ್ಟು ಶಕ್ತಿಶಾಲಿ ಎನಿಸಿಕೊಂಡಿದೆ.

ಕಂಪನಿಯು ಈ ಕಾರಿನಲ್ಲಿ ಆಕರ್ಷಕ ಗ್ರಿಲ್ ಪ್ರಯೋಗಿಸಿದೆ. ಒಟ್ಟಾರೆಯಾಗಿ ಎಕ್ಸ್‌ಟೀರಿಯರ್ ವಿನ್ಯಾಸ ಗಮನ ಸೆಳೆಯುತ್ತಿದೆ.

ಇದರ ಜತೆಗೆ 16 ಇಂಚು ಕ್ರೋಮ್ ಪ್ಲೇಟಡ್ ಅಲಾಯ್ ವೀಲ್ ಸಮತೋಲನ ಕಾಪಾಡಿಕೊಳ್ಳಲು ನೆರವಾಗಲಿದೆ.

ಪ್ರಮುಖವಾಗಿಯೂ ಆಫ್ ರೋಡಿಂಗ್ ಇಷ್ಟಪಡುವ ಯುವ ಜನಾಂಗದವರಲ್ಲಿ ಫೋರ್ಡ್ ಎಂಡೋವರ್ ಸಂಚಲನ ಮೂಡಿಸಲಿದೆ.

ಇನ್ನೊಂದು ಪ್ರಮುಖ ಫೀಚರ್ ಏನೆಂದರೆ ಸ್ಟೀರಿಂಗ್ ವೀಲ್‌ನಲ್ಲೇ ಸ್ಟಿರಿಯೋ ಸಿಸ್ಟಂ ಕಂಟ್ರೋಲ್ ವ್ಯವಸ್ಥೆ ಆಳವಡಿಸಲಾಗಿದೆ. ಇದರಿಂದ ವಾಹನ ಚಲಾಯಿಸುವ ಸಂದರ್ಭದಲ್ಲಿ ಸುಲಭದಲ್ಲಿ ಮ್ಯೂಸಿಕ್ ಸಿಸ್ಟಂ ಕಂಟ್ರೋಲ್ ಮಾಡಬಹುದಾಗಿದೆ.

ಕೇವಲ ಅಂದತೆ ಮಾತ್ರವಲ್ಲ ಸುರಕ್ಷತೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕಂಪನಿಯು ಈ ಕಾರಿನಲ್ಲಿ 360 ಡಿಗ್ರೆ ಅಂದರೆ ಮೊದಲ ಸಾಲಿನಲ್ಲೇ ನಾಲ್ಕು ಏರ್ ಬ್ಯಾಗ್ ಆಳವಡಿಸಿಕೊಂಡಿದೆ.

ಆರಾಮದಾಯಕ ಚಾಲನೆಗೆ ಫೋರ್ಡ್ ಎಂಡೋವರ್

ಆಕರ್ಷಕ ಇಂಟಿರಿಯರ್

ಫೋರ್ಡ್ ಎಂಡೋವರ್


Click it and Unblock the Notifications








