ಹೋಂಡಾ ಅಮೇಜ್ ಅಮೇಜಿಂಗ್; ಒಪ್ತೀರಾ?

By Nagaraja

ನಿಜಕ್ಕೂ ಅಮೇಜಿಂಗ್ ಎನಿಸಿಕೊಂಡಿರುವ ಹೋಂಡಾ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು ಭಾರತ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಜಪಾನ್ ಮೂಲದ ಕಂಪನಿಯ ಊಹೆಗೂ ಮೀರಿದ ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿರುವ ಹೋಂಡಾ ಅಮೇಜ್ ಈಗಾಗಲೇ 50,000 ಮಾರಾಟದ ಸಂಖ್ಯೆಯನ್ನು ದಾಟಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಪ್ರಸಕ್ತ ಆರ್ಥಿಕ ಸಾಲಿನೊಳಗೆ 50,000 ಅಮೇಜ್ ಮಾರಾಟ ಮಾಡುವುದು ಕಂಪನಿ ಗುರಿಯಾಗಿತ್ತು. ಆದರೆ 2013 ವರ್ಷಾಂತ್ಯದಲ್ಲೇ ಈ ಗುರಿ ತಲುಪಿರುವ ಹೋಂಡಾ ಅಮೇಜ್ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೋಂಡಾ ಅಮೇಜ್ ಅಮೇಜಿಂಗ್

ಏಳು ತಿಂಗಳೊಳಗೆ 50,000 ಯುನಿಟ್ ಮಾರಾಟ ದಾಖಲಿಸಿರುವ ಅಮೇಜ್ ಯಶಸ್ಸನ್ನು ಆಚರಿಸಲು ಹೊರಡಿರುವ ಕಂಪನಿ, ನೂತನ ಖರೀದಿ ಗ್ರಾಹಕರಿಗೆ ಚಾಕೋಲೇಟ್ ಬಾಕ್ಸ್ ವಿತರಿಸುತ್ತಿದೆ.

ಹೋಂಡಾ ಅಮೇಜ್ ಅಮೇಜಿಂಗ್

ಸಂಭ್ರಮ ಆಚರಣೆ ಕೇವಲ ಸಿಹಿ ವಿತರಣೆಗಷ್ಟೇ ಸೀಮಿತವಾಗಿಲ್ಲ. ವರ್ಷಾಂತ್ಯದಲ್ಲಿ ಅಮೇಜ್ ಖರೀದಿಸಿದ ಅದೃಷ್ಟಶಾಲಿ ಗ್ರಾಹಕರಿಗೆ ವಿದೇಶ ಪಯಣ ಕೈಗೊಳ್ಳುವ ಅವಕಾಶವೂ ಇದೆ.

ಹೋಂಡಾ ಅಮೇಜ್ ಅಮೇಜಿಂಗ್

ಗರಿಷ್ಠ ಇಂಧನ ಕ್ಷಮತೆಯು ಹೋಂಡಾ ಅಮೇಜ್ ಯಶಸ್ಸಿನ ಹಿಂದೆ ಬಹುದೊಡ್ಡ ಪಾತ್ರ ವಹಿಸಿದೆ.

ಹೋಂಡಾ ಅಮೇಜ್ ಅಮೇಜಿಂಗ್

ಈ ನಡುವೆ ಹೊಸ ವರ್ಷಕ್ಕೆ ಆಗಮನವಾಗಿರುವ 2014 ಸಿಟಿ ಸೆಡಾನ್ ಕಾರು ಸಹ ಹೋಂಡಾ ಮಾರಾಟವನ್ನು ಇನ್ನಷ್ಟು ಉತ್ತೇಜಿಸಲಿದೆ.

ಹೋಂಡಾ ಅಮೇಜ್ ಅಮೇಜಿಂಗ್

ಏತನ್ಮಧ್ಯೆ ಹೋಂಡಾ ಮೊಬಿಲಿಯೊ ಎಂಪಿವಿ, ಜಾಝ್ ಹ್ಯಾಚ್‌ಬ್ಯಾಕ್ ಕಾರು ಸಹ ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಇವೆಲ್ಲವೂ ಮುಂದಿನ ದಿನಗಳಲ್ಲಿ ಹೋಂಡಾಗೆ ವಿಸ್ತಾರವಾದ ಮಾರುಕಟ್ಟೆ ಒದಗಿಸಲು ನೆರವಾಗಲಿದೆ.

More from DriveSpark

Article Published On: Saturday, November 30, 2013, 15:37 [IST]
English summary
When Honda launched the Amaze compact sedan in India back in April the company estimated it would sell as many as 50,000 units before the fiscal year was over. In about 7 months time Honda has managed to reach that milestone number.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+