22,000 ಬುಕ್ಕಿಂಗ್; ಮಾರುತಿ ಹಿಂದಿಕ್ಕಿದ ಹೋಂಡಾ ಅಮೇಜ್?

ಬಿಡುಗಡೆಯಾದ ಮೂರು ವಾರಗಳಲ್ಲೇ 22,000 ಬುಕ್ಕಿಂಗ್ ದಾಖಲಿಸಿಕೊಂಡಿರುವ ಹೋಂಡಾ ಅಮೇಜ್, ದೇಶದ ಕಾರು ಮಾರುಕಟ್ಟೆಯಲ್ಲಿ ನೂತನ ಸೆನ್ಸಾಷನಲ್ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದೆ. ಜನಪ್ರಿಯ ಮಾರುತಿ ಡಿಜೈರ್ ಆವೃತ್ತಿಯನ್ನು ಎಲ್ಲ ಹಂತದಲ್ಲೂ ಹಿಮ್ಮೆಟ್ಟಿ ಮುನ್ನುಗ್ಗುತ್ತಿರುವ ಹೋಂಡಾ ಅಮೇಜ್ ದೇಶದಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದೆ.

ಇದು ಜಪಾನ್ ವಾಹನ ತಯಾರಕ ಕಂಪನಿಯಿಂದ ದೇಶದಲ್ಲಿ ಪರಿಚಯವಾಗಿರುವ ಮೊದಲ ಡೀಸೆಲ್ ಕಾರಾಗಿದೆ. ಸ್ಪರ್ಧಾತ್ಮಕ ದರದಲ್ಲಿ ಬಿಡುಗಡೆ ಮಾಡಿರುವುದು ಹಾಗೂ ಗರಿಷ್ಠ ಮೈಲೇಜ್ ಕಾರಿನ ಇನ್ನು ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಹೆಸರು ಸೂಚಿಸಿರುವಂತೆಯೇ ಹೋಂಡಾ ಅಮೇಜ್ ಎಲ್ಲರನ್ನು ಬೆರಗುಗೊಳಿಸಿದೆ. ಈ ಮೂಲಕ ಸೆಡಾನ್ ವಿಭಾಗದಲ್ಲಿ ಹೊಸ ಅಧಿಪತ್ಯ ಸೃಷ್ಟಿ ಮಾಡುತ್ತಿದೆ. ಹೋಂಡಾ ಅಮೇಜ್‌ನಲ್ಲಿ 1.5 ಲೀಟರ್ ಐಡಿಟೆಕ್ ಎಂಜಿನ್ ಆಳವಡಿಸಲಾಗಿದ್ದು, 100 ಪಿಎಸ್ ಪವರ್ ಉತ್ಪಾದಿಸುತ್ತಿದೆ. ಇನ್ನು ಪ್ರತಿ ಲೀಟರ್‌ಗೆ ಗರಿಷ್ಠ 25.8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

22,000 ಬುಕ್ಕಿಂಗ್; ಮಾರುತಿ ಹಿಂದಿಕ್ಕಿದ ಹೋಂಡಾ ಅಮೇಜ್?

ಮೂಲಗಳ ಪ್ರಕಾರ ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ಹೋಂಡಾ ಡೀಲರ್‌ಗಳಿಂದ ಸಾಧ್ಯವಾಗುತ್ತಿಲ್ಲ. ದಿನದಿಂದ ದಿನಕ್ಕೆ ಹೋಂಡಾ ಗ್ರಾಹಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಕಾಯುವಿಕೆ ಅವಧಿ ಹೆಚ್ಚಾಗಲು ಕಾರಣವಾಗಿದೆ.

22,000 ಬುಕ್ಕಿಂಗ್; ಮಾರುತಿ ಹಿಂದಿಕ್ಕಿದ ಹೋಂಡಾ ಅಮೇಜ್?

ಇನ್ನು ಎಪ್ರಿಲ್ ತಿಂಗಳಲ್ಲಿ 4,852 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಹೋಂಡಾ ಯಶಸ್ವಿಯಾಗಿದೆ. ಇದು ಈ ತಿಂಗಳ ಮಾರಾಟ ಪ್ರಗತಿ ಸಾಧಿಸುವಲ್ಲಿ ಹೋಂಡಾಗೆ ನೆರವಾಗಿದೆ.

22,000 ಬುಕ್ಕಿಂಗ್; ಮಾರುತಿ ಹಿಂದಿಕ್ಕಿದ ಹೋಂಡಾ ಅಮೇಜ್?

ಒಟ್ಟಿನಲ್ಲಿ ಹೋಂಡಾ ಅಮೇಜ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

22,000 ಬುಕ್ಕಿಂಗ್; ಮಾರುತಿ ಹಿಂದಿಕ್ಕಿದ ಹೋಂಡಾ ಅಮೇಜ್?
22,000 ಬುಕ್ಕಿಂಗ್; ಮಾರುತಿ ಹಿಂದಿಕ್ಕಿದ ಹೋಂಡಾ ಅಮೇಜ್?

Most Read Articles

Kannada
English summary
Within few weeks of its, Honda Cars India Ltd has received over 22,000 bookings for the Amaze sedan, outshining the response Maruti Suzuki India received for the Swift Dzire, launched a year ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X