ಭಾರತದಲ್ಲೇ ಹೋಂಡಾ ಬ್ರಿಯೊ ಕ್ರಾಸೋವರ್ ನಿರ್ಮಾಣ?

2014, ಜನವರಿ 07ನೇ ದಿನಾಂಕ ಹೋಂಡಾ ಮೋಟಾರ್ಸ್ ಇಂಡಿಯಾ ಪಾಲಿಗೆ ಮಹತ್ತರ ದಿನವಾಗಿತ್ತು. ಯಾಕೆಂದರೆ ಇದೇ ದಿನದಂದು ಬಹುನಿರೀಕ್ಷಿತ ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಕಾರು ಭಾರತ ಮಾರುಕಟ್ಟೆಗೆ ಭರ್ಜರಿ ರಿ ಎಂಟ್ರಿ ಕೊಟ್ಟಿತ್ತು.

ಸದ್ಯ ಇಲ್ಲಿಗೆ ಹೋಂಡಾ ಪರಾಕ್ರಮ ಭಾರತದ ಮಾರುಕಟ್ಟೆಯಲ್ಲಿ ಮುಗಿಯಿತು ಅಂದುಕೊಂಡರೆ ತಪ್ಪಾದಿತು. ಪ್ರಸ್ತುತ ದೇಶದ ವಿಶಾಲವಾದ ಮಾರುಕಟ್ಟೆಯತ್ತ ಗಮನ ಕೇಂದ್ರಿಕರಿಸಿರುವ ಜಪಾನ್ ಮೂಲದ ಈ ದೈತ್ಯ ವಾಹನ ತಯಾರಕ ಸಂಸ್ಥೆಯು ಇನ್ನಿತರ ಸೆಗ್ಮೆಂಟ್‌ಗಳಲ್ಲೂ ತನ್ನ ಪ್ರಾಬಲ್ಯ ಮುಂದುವರಿಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಐ-ಡಿಟೆಕ್ ಎಂಜಿನ್

ಐ-ಡಿಟೆಕ್ ಎಂಜಿನ್

ಭಾರತದಲ್ಲಿ ಡೀಸೆಲ್ ಎಂಜಿನ್ ಅವತರಣಿಕೆಯು ಹೋಂಡಾ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹೌದು ಹೋಂಡಾ ಐ-ಡಿಟೆಕ್ (i-DTEC) ಎಂಜಿನ್ ಮುಂಬರುವ ಮೊಬಿಲಿಯೊ ಎಂಪಿವಿ ಮತ್ತು ಹೋಂಡಾ ಜಾಝ್ ಹ್ಯಾಚ್‌ಬ್ಯಾಕ್ ಕಾರಿನಲ್ಲೂ ಬಳಕೆಯಾಗಲಿದೆ.

ಮೇಡ್ ಇನ್ ಇಂಡಿಯಾ

ಮೇಡ್ ಇನ್ ಇಂಡಿಯಾ

ಹೋಂಡಾ ಪ್ರಕಾರ ಏಷ್ಯಾಗೆ ಬೇಕಾಗಿರುವ ಒಟ್ಟು ಉತ್ಪಾದನಾ ಸಂಖ್ಯೆಯ ಅರ್ಧದಷ್ಟು ಭಾರತ ಹಾಗೂ ಇಂಡೋನೇಷ್ಯಾದಿಂದಲೇ ತಯಾರಿಯಾಗಲಿದೆ.

ದೆಹಲಿ ಆಟೋ ಎಕ್ಸ್ ಪೋ

ದೆಹಲಿ ಆಟೋ ಎಕ್ಸ್ ಪೋ

ಇದುವರೆಗೆ ಲಭಿಸಿರುವ ಮಾಹಿತಿಯ ಪ್ರಕಾರ ಫೆಬ್ರವರಿಯಲ್ಲಿ ಸಾಗಲಿರುವ ಆಟೋ ಎಕ್ಸ್ ಪೋದಲ್ಲಿ ಮೊಬಿಲಿಯೊ ಎಂಪಿವಿ ಜತೆ ಹೋಂಡಾ ಜಾಝ್ ಕೂಡಾ ಪ್ರದರ್ಶನಗೊಳ್ಳಲಿದೆ. ಈ ಪೈಕಿ ಮೊಬಿಲಿಯೊ ಒಂದೆರಡು ತಿಂಗಳಲ್ಲಿ ಲಾಂಚ್ ಆಗಲಿದ್ದರೆ ಜಾಝ್ ಹಬ್ಬದ ಆವೃತ್ತಿ ವೇಳೆ ಆಗಮನವಾಗುವ ನಿರೀಕ್ಷೆಯಿತ್ತು.

ಜಾಝ್ ಎಂಟ್ರಿ

ಜಾಝ್ ಎಂಟ್ರಿ

ಆದರೆ ಲಾಂಚ್ ದಿನಾಂಕ ಇದೀಗ ಮರು ನಿಗದಿಪಡಿಸುವ ಸಾಧ್ಯತೆಯಿದ್ದು, ಮುಂದಿನ ಆರ್ಥಿಕ ಸಾಲಿನ ಅಂತ್ಯದಲ್ಲಷ್ಟೇ ಜಾಝ್ ಎಂಟ್ರಿ ಕೊಡಲಿದೆ.

ಬ್ರಿಯೊ ತಲಹದಿಯಲ್ಲಿ ಎಸ್‌ಯುವಿ

ಬ್ರಿಯೊ ತಲಹದಿಯಲ್ಲಿ ಎಸ್‌ಯುವಿ

ಈ ಎರಡು ಮಾದರಿಗಳ ಹೊರತಾಗಿ ಮೇಡ್ ಇನ್ ಇಂಡಿಯಾ ಕಾರನ್ನು ಅಭಿವೃದ್ಧಿಪಡಿಸುವ ಕುರಿತಾಗಿಯೂ ಹೋಂಡಾ ಪರಿಗಣನೆಯಲ್ಲಿದೆ. ಇದು ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳಿಗೂ ವಿತರಣೆಯಾಗಲಿದೆ. ಈ ಹಿಂದೆ ಸೂಚಿಸಿರುವಂತೆಯೇ ಬ್ರಿಯೊ ತಲಹದಿಯ ಎಸ್‌ಯುವಿ ದೇಶದಲ್ಲೇ ನಿರ್ಮಾಣವಾಗುವ ಸಾಧ್ಯತೆಗಳು ಹೆಚ್ಚಿವೆ.

ನೂತನ ಫ್ಲ್ಯಾಟ್‌ಫಾರ್ಮ್

ನೂತನ ಫ್ಲ್ಯಾಟ್‌ಫಾರ್ಮ್

ಈ ಹಿಂದೆ ತಿಳಿಸಿರುವಂತೆಯೇ ವೆಜೆಲ್ ಕ್ರಾಸೋವರ್ ತಯಾರಿ ತುಂಬಾನೇ ದುಬಾರಿಯಾಗಿರುವುದರಿಂದ ಬ್ರಿಯೊ ತಲಹದಿಯಲ್ಲಿ ನೂತನ ಫ್ಲ್ಯಾಟ್‌ಫಾರ್ಮ್ ಅಭಿವೃದ್ಧಿಪಡಿಸಲು ಹೋಂಡಾ ಪರಿಗಣನೆಯಲ್ಲಿದೆ.

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ಹೋಂಡಾ ನೂತನ ಎಸ್‌ಯುವಿ ಫೋರ್ಡ್ ಇಕೊಸ್ಪೋರ್ಟ್ ಮತ್ತು ರೆನೊ ಡಸ್ಟರ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಇದು 2015 ಅಥವಾ 2016 ವರ್ಷಾರಂಭದಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles
 
Story first published: Wednesday, January 8, 2014, 9:41 [IST]
English summary
Today is a big day for Honda Motors India as it marks the return of one of its best selling cars in the country, the City sedan. Honda is trying to bring back the glory days of the once popular model with the launch of an all new iDTEC diesel engine to the lineup.
Please Wait while comments are loading...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X