2ರ ಸಂಭ್ರಮದಲ್ಲಿರುವ ಹೋಂಡಾ ಬ್ರಿಯೊ ಪ್ರತ್ಯೇಕ ಆವೃತ್ತಿ ಲಾಂಚ್
ಹೋಂಡಾ ಬ್ರಿಯೊ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಬಂದಿದ್ದು, ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ಹಬ್ಬದ ಆವೃತ್ತಿ ಬಂದಿರುವಂತೆಯೇ ಬ್ರಿಯೊ ಎಕ್ಸ್‌ಕ್ಲೂಸಿವ್ ಎಡಿಷನ್ ಲಾಂಚ್ ಮಾಡಿದೆ.
ಈ ಮೂಲಕ ದೇಶಕ್ಕೆ ಪ್ರವೇಶಿಸಿರುವ ಎರಡು ವಸಂತಗಳ ಯಶಸ್ಸನ್ನು ಆಚರಿಸಿಕೊಳ್ಳುತ್ತಿರುವ ಬ್ರಿಯೊ ಹ್ಯಾಚ್‌ಬ್ಯಾಕ್, ತನ್ನ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಸಣ್ಣ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಭಾರತ ಮಾರುಕಟ್ಟೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಸದ್ದು ಮಾಡಿದ್ದ ಬ್ರಿಯೊ, ಈ ವರೆಗೆ 54,000 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಇದೀಗ ಎರಡರ ಸಂಭ್ರಮದಲ್ಲಿ ಬ್ರಿಯೊ ಪ್ರತ್ಯೇಕ ಆವೃತ್ತಿ ಲಾಂಚ್ ಮಾಡಲಾಗಿದೆ. ಅಷ್ಟಕ್ಕೂ ಹೋಂಡಾ ಬ್ರಿಯೊ ಎಕ್ಸ್‌ಕ್ಲೂಸಿವ್ ಎಡಿಷನ್‌ನಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಹೋಂಡಾ ಬ್ರಿಯೊ ಸಣ್ಣ ಹ್ಯಾಚ್‌ಬ್ಯಾಕ್ ಕಾರು 1.2 ಲೀಟರ್ i-VTEC ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 88 ಪಿಎಸ್ ಪವರ್ (109 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

ವೈಶಿಷ್ಟ್ಯಗಳು
ಬ್ಲ್ಯಾಕ್ ಇಂಟಿರಿಯರ್ ಥೀಮ್,
ಬ್ಲ್ಯಾಕ್ ಡ್ಯಾಶ್‌ಬೋರ್ಡ್,
ಪ್ರೀಮಿಯಂ ಫ್ಯಾಬ್ರಿಕ್ ಅಪ್‌ಹಾಲ್‌ಸ್ಟ್ರೇ,
ದೇಹ ಬಣ್ಣದ ರೂಫ್ ಸ್ಪಾಯ್ಲರ್

ವೈಶಿಷ್ಟ್ಯಗಳು
ಪ್ರತ್ಯೇಕ ಲಾಂಛನ,
ಡೋರ್ ವೈಸರ್,
ಕ್ರೋಮ್ ಎಕ್ಸ್‌ಹಾಸ್ಟ್ ಟಿಪ್,
ರಿವರ್ಸ್ ಪಾರ್ಕಿಂಗ್ ಸೆನ್ಸಾರ್

ದರ ಮಾಹಿತಿ
ನೂತನ ಬ್ರಿಯೊ ಪ್ರತ್ಯೇಕ ಆವೃತ್ತಿ ಎಸ್ ಮ್ಯಾನುವಲ್ ಟ್ರಾನ್‌ಮಿಷನ್‌ನಲ್ಲಿ ಲಭ್ಯವಿರಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 4.92 ಲಕ್ಷ ರು.ಗಳಾಗಿವೆ.

ಅಂದರೆ ಹೋಂಡಾ ಬ್ರಿಯೊ ಸ್ಪೆಷಲ್ ಎಡಿಷನ್ ಆಟೋಮ್ಯಾಟಿಕ್ ವೆರಿಯಂಟ್‌ನ ಕೊರತೆ ಅನುಭವಿಸಲಿದೆ. ಇದಕ್ಕಾಗಿ ನೀವು ಸಾಮಾನ್ಯ ಬ್ರಿಯೊ ಆಯ್ಕೆಮಾಡಿಕೊಳ್ಳಬೇಕಾಗುತ್ತದೆ.

ಕಲರ್ ವೆರಿಯಂಟ್
ಹಾಗೆಯೇ ಒಟ್ಟು ಮೂರು ಬಣ್ಣಗಳಲ್ಲಿ ಹೋಂಡಾ ಬ್ರಿಯೊ ಪ್ರತ್ಯೇಕ ಎಡಿಷನ್ ಆಗಮನವಾಗುತ್ತಿದೆ. ಅವುಗಳೆಂದರೆ
Tafeta White,
Alabaster Silver,
Rally Red.

ಒಟ್ಟಾರೆಯಾಗಿ ಹೋಂಡಾ ಬ್ರಿಯೊ ಪ್ರಮುಖವಾಗಿಯೂ ನಿಸ್ಸಾನ್ ಮೈಕ್ರಾ, ಮಾರುತಿ ವ್ಯಾಗನಾರ್, ಸ್ವಿಫ್ಟ್, ಗ್ರಾಂಡ್ ಐ10 ಹಾಗೂ ಟಾಟಾ ವಿಸ್ಟಾ ಕಾರುಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಿದೆ.

ದೇಶದಲ್ಲಿ ಬ್ರಿಯೊ ಹೋಂಡಾ ಪಾಲಿಗೆ ಮಹತ್ವದ ತಿರುವನ್ನು ನೀಡಿತ್ತು. ಯಾಕೆಂದರೆ ಬಳಿಕ ಇದೇ ಫ್ಲಾಟ್‌ಫಾರ್ಮ್‌ನಿಂದಲೇ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರಿನ ಎಂಟ್ರಿಯಾಗಿತ್ತು. ಇದು ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತ ಸೇರಿದಂತೆ ಏಷ್ಯಾದಲ್ಲಿ ಅತಿಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಅಷ್ಟೇ ಯಾಕೆ ಬ್ರಿಯೊ ತಲಹದಿಯಲ್ಲಿಯೇ ನೂತನ ಮೊಬಿಲಿಯೊ ಮಲ್ಟಿ ಪರ್ಪಸ್ ವೆಹಿಕಲ್ ಕೂಡಾ ಲಾಂಚ್ ಮಾಡಲು ಹೋಂಡಾ ಸಿದ್ಧತೆಯಲ್ಲಿದೆ. ಪ್ರಸ್ತುತ ಕಾರನ್ನು ಸಹ ದೇಶದ ಗ್ರಾಹಕರು ಅತೀವ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.


Click it and Unblock the Notifications








