ಹೋಂಡಾ ಬ್ರಿಯೊ ಸಣ್ಣ ಕಾರಿನ ಹೊಸ ಸ್ವರೂಪ
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾಗೆ ದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಇತ್ತೇಚೆಗಷ್ಟೇ ಬಿಡುಗಡೆಯಾಗಿರುವ ಸಿಟಿ ಸೆಡಾನ್ ಹಾಗೂ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರುಗಳು ಈಗಾಗಲೇ ಕಾರು ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ.
ಈ ನಡುವೆ ತನ್ನ ಮಾದರಿಗಳ ಪೈಕಿ ಅತಿ ಚೊಕ್ಕದಾಗಿರುವ ಬ್ರಿಯೊ ಹ್ಯಾಚ್‌ಬ್ಯಾಕ್ ಕಾರನ್ನು ಹೊಸ ರೂಪದಲ್ಲಿ ಪ್ರದರ್ಶಿಸಲು ಸಂಸ್ಥೆ ಸಿದ್ಧತೆ ನಡೆಸುತ್ತಿದೆ. ಇದುವರೆಗೆ ಹೋಂಡಾ ಬ್ರಿಯೊ ದೇಶದಲ್ಲಿ ಅಷ್ಟೇನೂ ಪ್ರಭಾವ ಬೀರಿಲ್ಲ. ಆದರೆ ಇದೀಗ ಆಗಮನವಾಗಲಿರುವ ನೂತನ ಫೇಸ್‌ಲಿಫ್ಟ್ ಬ್ರಿಯೊ ಈ ಕೊರತೆಯನ್ನು ನೀಗಿಸುವ ನಿರೀಕ್ಷೆಯಲ್ಲಿದೆ.

ವರದಿಗಳ ಪ್ರಕಾರ ನೂತನ ಹೋಂಡಾ ಬ್ರಿಯೊ ಫೇಸ್‌ಲಿಫ್ಟ್, ಸಂಸ್ಥೆಯ ಟ್ರೇಡ್ ಮಾರ್ಕ್ ಆಗಿರುವ ಹೊಸತಾದ ಫ್ರಂಟ್ ಗ್ರಿಲ್ ಪಡೆದುಕೊಂಡಿದೆ.

ಎರಡು ವರ್ಷಗಳ ಹಿಂದೆ ಮೊದಲ ಬಾರಿಗೆ ಲಾಂಚ್ ಆಗಿರುವ ಬ್ರಿಯೊ, ಫೇಸ್‌ಲಿಫ್ಟ್ ವರ್ಷನ್ ಗಿಟ್ಟಿಸಿಕೊಳ್ಳುವುದು ಖಚಿತವಾಗಿದ್ದು, ಆದರೆ ಯಾವಾಗ ನೂತನ ಮಾದರಿ ಆಗಮನವಾಗಲಿದೆ ಎಂಬುದು ತಿಳಿದು ಬಂದಿಲ್ಲ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ನೂತನ ಬ್ರಿಯೊ, ಹೊಸತಾದ ಬಂಪರ್ ಹಾಗೂ ಗ್ರಿಲ್ ಜತೆಗೆ ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ಪಡೆದುಕೊಳ್ಳಲಿದೆ.

ಆದರೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದು 1.2 ಲೀಟರ್ ಫೋರ್ ಸಿಲಿಂಡರ್ ಐ-ವಿಟೆಕ್ (i-VTEC) ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 88 ಪಿಎಸ್ ಪವರ್ (109 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಇನ್ನು ಹೋಂಡಾ ಮಾದರಿಗಳ ಬಗ್ಗೆ ಗಮನ ಹರಿಸಿದಾಗ ಈಗಾಗಲೇ ಸಿಟಿ ಲಾಂಚ್ ಆಗಿದ್ದು, ಹೊಸತಾದ ಮೊಬಿಲಿಯೊ ಎಂಪಿವಿ ಹಾಗೂ ಜಾಝ್ ಹ್ಯಾಚ್‌ಬ್ಯಾಕ್ ಹಿಂಬಾಲಿಸಲಿದೆ.

ಈ ಪೈಕಿ ಮೊಬಲಿಯೊ ಇನ್ನೇನು ಒಂದು ತಿಂಗಳೊಳಗೆ ಬಿಡುಗಡೆಯಾಗಲಿದೆ. ಸದ್ಯ ರಾಜಸ್ತಾನ ಹಾಗೂ ಗ್ರೇಟರ್ ನೋಯ್ಡಾದಲ್ಲಿರುವ ಘಟಕಗಳ ಮೂಲಕ ವಾರ್ಷಿಕವಾಗಿ 240000 ಯುನಿಟ್‌ಗಳನ್ನು ಉತ್ಪಾದಿಸುತ್ತಿರುವ ಸಾಮರ್ಥ್ಯವನ್ನು ಸಂಸ್ಥೆ ಹೊಂದಿದ್ದು, ಗುಜರಾತ್‌ನಲ್ಲಿ ಹೊಸತಾದ ಘಟನ ನಿರ್ಮಿಸುವ ಯೋಜನೆ ಹೊಂದಿದೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








