ನಿಕಟ ಭವಿಷ್ಯದಲ್ಲಿ ಹೋಂಡಾ ಬ್ರಿಯೊ ಎಂಪಿವಿ ಎಂಟ್ರಿ
ಹೋಂಡಾ ಬ್ರಿಯೊ ಮಲ್ಟಿ ಪರ್ಪಸ್ ವೆಹಿಕಲ್‌ನ (ಎಂಪಿವಿ) ಮೊದಲ ಅಧಿಕೃತ ರೇಖಾಚಿತ್ರ ಬಿಡುಗಡೆಗೊಂಡಿದೆ. ಇದರಂತೆ ಹೋಂಡಾ ನೆಚ್ಚಿನ ಗ್ರಾಹಕರು ಈ ಕಾರಿನ ಬಗ್ಗೆ ಹತ್ತು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ನಿಕಟ ಭವಿಷ್ಯದಲ್ಲಿ ಆಗಮನವಾಗಲಿರುವ ಹೋಂಡಾ ಬ್ರಿಯೊ ಎಂಪಿವಿ 2ಎನ್‌ಎಚ್ ಕೋಡ್ ನೇಮ್ ಪಡೆದುಕೊಂಡಿದೆ. ಅಂದರೆ ಮುಂದಿನ ಒಂದೆರಡು ತಿಂಗಳೊಳಗೆ ದಕ್ಷಿಣ ಕೊರಿಯಾ ಮಾರುಕಟ್ಟೆ ಪ್ರವೇಶಸಲಿದ್ದು, ಬೆನ್ನಲ್ಲೇ ಭಾರತ ಪ್ರವೇಶ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿದೆ.
ಇಂಡೋನೇಷ್ಯಾ ಗ್ರಾಹಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹೋಂಡಾ ಎಂಪಿವಿ ರೂಪಿಸಲಾಗಿದೆ. ಇದರಿಂದಾಗಿ ಭಾರತಕ್ಕೆ ಆಗಮನವಾಗುವ ಆವೃತ್ತಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಕಂಡುಬರಲಿದೆ. ಇಂಡೋನೇಷ್ಯಾದಲ್ಲಿ ಸ್ಥಳೀಯವಾಗಿ ಹೋಂಡಾ ಬ್ರಿಯೊ ಎಂಪಿವಿ ಉತ್ಪಾದನೆ ನಡೆಯಲಿದೆ.

ಹೋಂಡಾ ಬ್ರಿಯೊ ಎಂಪಿವಿ
ಹೋಂಡಾ ಬ್ರಿಯೊ ಎಂಪಿವಿ ಇಂಡೋನೇಷ್ಯಾ ಮಾರುಕಟ್ಟೆಗೆ ಹೋಂಡಾ ಪರಿಚಯಿಸುತ್ತಿರುವ ಮೊದಲ ಎಂಪಿವಿ ಕಾರಾಗಿರಲಿದೆ. ಜಾಗತಿಕ ಎಂಪಿವಿಗಳ ಅನಧಿಕೃತ ರಾಜಧಾನಿ ಎನಿಸಿಕೊಂಡಿರುವ ಇಂಡೋನೇಷ್ಯಾದಲ್ಲಿ ಬ್ರಿಯೊ ಎಂಪಿವಿ ಪ್ರಮುಖ ಸ್ಪರ್ಧಾಳುವಾಗಲಿದೆ.

ಹೋಂಡಾ ಬ್ರಿಯೊ ಎಂಪಿವಿ
ಅಂದರೆ ಬ್ರಿಯೊ ಎಂಪಿವಿ ಮಾರುತಿ ಸುಜುಕಿ ಎರ್ಟಿಗಾ ಆವೃತ್ತಿಗೆ ನೇರ ಪ್ರತಿಸ್ಪರ್ಧಿ ಎನಿಸಲಿದೆ. ಇಂಡೋನೇಷ್ಯಾದ ಹಾಗೆ ಭಾರತದಲ್ಲೂ ಸಮಾನ ಪರಿಸ್ಥಿತಿ ನಿರ್ಮಾಣವಾಗಲಿದೆ.

ಹೋಂಡಾ ಬ್ರಿಯೊ ಎಂಪಿವಿ
ಇನ್ನು ಚಿತ್ರವನ್ನು ಗಮನಿಸಿದಾಗ ಬ್ರಿಯೊ ಎಂಪಿವಿ ಆಕ್ರಮಣಕಾರಿ ವಿನ್ಯಾಸ ಪಡೆದುಕೊಂಡಿದೆ. ಅಂದರೆ ಕೆಲವು ವಿಚಾರಗಳಲ್ಲಿ ಎರ್ಟಿಗಾವನ್ನು ಮೀರಿ ನಿಂತಿದೆ.

ಹೋಂಡಾ ಬ್ರಿಯೊ ಎಂಪಿವಿ
ಮೂರು ಸಾಲುಗಳ ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವ ಹೋಂಡಾ ಬ್ರಿಯೊ ಎಂಪಿವಿ ಏಳು ಆಸನಗಳನ್ನು ಹೊಂದಿರಲಿದೆ.

ಹೋಂಡಾ ಬ್ರಿಯೊ ಎಂಪಿವಿ
ಇಂಡೋನೇಷ್ಯಾ ಬ್ರಿಯೊ ಎಂಪಿವಿ 1.5 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅಂದರೆ ಭಾರತದ ವರ್ಷನ್ ಡೀಸೆಲ್ ಎಂಜಿನ್ ಕೂಡಾ ಪಡೆಯಲಿದೆ. ಪ್ರಸ್ತುತ ಎರ್ಟಿಗಾ 1.2 ಲೀಟರ್ ಎಂಜಿನ್ ಪಡೆದುಕೊಂಡಿದೆ.

ಹೋಂಡಾ ಬ್ರಿಯೊ ಎಂಪಿವಿ
ಸೆಪ್ಟೆಂಬರ್ ತಿಂಗಳಲ್ಲಿ ಇಂಡೋನೇಷ್ಯಾ ಮಾರುಕಟ್ಟೆಗೆ ಹೋಂಡಾ ಬ್ರಿಯೊ ಎಂಪಿವಿ ಎಂಟ್ರಿ ಕೊಡುವ ನಿರೀಕ್ಷೆಯಿದೆ. ಬಳಿಕ ಮುಂದಿನ ವರ್ಷಾರಂಭದಲ್ಲಿ ಸಾಗಲಿರುವ ದೆಹಲಿ ಆಟೋ ಶೋದಲ್ಲಿ ಪ್ರದರ್ಶನ ಕಾಣಲಿರುವ ಪ್ರಸ್ತುತ ಕಾರು 2014 ಮಧ್ಯಂತರ ಅವಧಿಯಲ್ಲಿ ಭಾರತ ಪ್ರವೇಶಿಸುವ ಸಾಧ್ಯತೆಗಳಿವೆ.


Click it and Unblock the Notifications








