ನಿರೀಕ್ಷಿಸಿ ವೆಜೆಲ್ ಸ್ಥಾನಕ್ಕೆ ಬ್ರಿಯೊ ಎಸ್‌ಯುವಿ
ಹೋಂಡಾ ಸಿಆರ್-ವಿ ಮತ್ತು ಸಿಟಿ ನಡುವಣ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನೂತನ ವೆಜೆಲ್ ಕಾರನ್ನು ಬಿಡುಗಡೆ ಮಾಡುವ ಬಗ್ಗೆ ಮಾಹಿತಿಗಳಿದ್ದವು. ಪ್ರಸ್ತುತ ಕಾರು 2015ರ ವೇಳೆಗೆ ಭಾರತ ಪ್ರವೇಶಿಸುವ ನಿರೀಕ್ಷೆಯೂ ಇತ್ತು.
ಹೋಂಡಾ ಸುದ್ದಿಗಾಗಿ ಮುಂದೆ ಓದಿರಿ..
ಆದರೆ ದುರದೃಷ್ಟವಶಾತ್ ಭಾರತದ ರುಪಾಯಿ ದರ ಮೌಲ್ಯ ಕುಸಿಯುತ್ತಿರುವುದು ಹಾಗೂ ಸ್ಥಳೀಯಗೊಳಿಸುವುದರಲ್ಲಿ ಎದುರಾಗಿರುವ ಸಮಸ್ಯೆ ಅರಿತುಕೊಂಡಿರುವ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, 2015 ವೆಜೆಲ್ ಯೋಜನೆಯನ್ನು ಕೈಬಿಡಲು ಮುಂದಾಗುತ್ತಿದೆ. ಹಾಗಿದ್ದರೂ ವೆಜೆಲ್ ಜಾಗದಲ್ಲಿ ನೂತನ ಕಾರೊಂದು ಪ್ರತ್ಯಕ್ಷವಾಗಲಿದೆ. ಬಲ್ಲ ಮೂಲಗಳ ಪ್ರಕಾರ ವೆಜೆಲ್ ಜಾಗದಲ್ಲಿ ಬ್ರಿಯೊ ತಲಹದಿಯ ಎಸ್‌ಯುವಿ ಕಾಣಿಸಿಕೊಳ್ಳಲಿದೆ.

ಇದು ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ಜಾಝ್ ತಲಹದಿಯಲ್ಲಿನ ವೆಜೆಲ್ ಕಾಂಪಾಕ್ಟ್ ಎಸ್‌ಯುವಿ ಕಾರು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ ದೇಶದಲ್ಲಿ ಲಭ್ಯವಿರುವ ಹೋಂಡಾ ಕಾರಿಗಿಂತಲೂ ಹೆಚ್ಚಿನ ಫೀಚರ್‌ಗಳು ಇದರಲ್ಲಿದೆ.

ಉದಾಹರಣೆಗೆ ಇದರ ವಿದ್ಯುತ್ ಚಾಲಿತ ಹ್ಯಾಂಡ್ ಬ್ರೇಕ್. ಇದನ್ನು ಭಾರತದಲ್ಲಿ ನಿರ್ಮಿಸುವುವುದಕ್ಕಾಗಿ ಹೆಚ್ಚುವರಿ ಹೂಡಿಕೆಯ ಅಗತ್ಯವಿದೆ. ಇದು ಹೋಂಡಾ ವೆಜೆಲ್ ಕಾರನ್ನು ಇನ್ನಷ್ಟು ದುಬಾರಿ ಮಾಡಲಿದೆ. ಹಾಗೆಯೇ ದೇಶದಲ್ಲಿ ಇನ್ನಿತರ ಕಾಂಪಾಕ್ಟ್ ಎಸ್‌ಯುವಿಗಳಿಗೆ ಪರಿಗಣಿಸಿದರೆ ಹೋಂಡಾ ವೆಜೆಲ್ ಐಷಾರಾಮಿ ಇಂಟಿರಿಯರ್ ಫೀಚರುಗಳನ್ನು ಹೊಂದಿದೆ.

ಈ ಎಲ್ಲ ವಿಚಾರಗಳನ್ನು ಮನಗೊಂಡಿರುವ ಹೋಂಡಾ, ಬ್ರಿಯೊ ತಲಹದಿಯಲ್ಲಿ ನೂತನ ಎಸ್‌ಯುವಿ ನಿರ್ಮಿಸಲು ಹೊರಟಿದೆ. ನಾವು ಈಗಾಗಲೇ ನೋಡಿರುವಂತೆಯೇ ಬ್ರಿಯೊ ಫ್ಲಾಟ್‌ಫಾರ್ಮ್‌ನಲ್ಲಿ ಆಗಮನವಾಗಿರುವ ಅಮೇಜ್ ಭಾರಿ ಯಶ ಸಾಧಿಸಿತ್ತು.

ಅಲ್ಲದೆ ಇದೇ ತಲಹದಿಯಲ್ಲಿ ಹೋಂಡಾ ಮೊಬಿಲಿಯೊ ಎಂಪಿವಿ ಸಹ ಮಾರುಕಟ್ಟೆಗೆ ಅಪ್ಪಳಿಸಲು ತಯಾರಾಗಿ ನಿಂತಿದೆ. ಇದೀಗ ಹೋಂಡಾ ಎಂಜಿನ್ ನೂತನ ಎಸ್‌ಯುವಿ ದೇಹ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ನೂತನ ಉತ್ಪನ್ನ ಮಾರುಕಟ್ಟೆ ಪ್ರವೇಶಿಸಲು ಎಷ್ಟು ಸಮಯ ತಗುಲಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.


Click it and Unblock the Notifications








