ಹೋಂಡಾ 'ಉತ್ತೇಜಕ ಎಚ್ ಡಿಸೈನ್'
ಕೆಲವು ದಿನಗಳ ಹಿಂದೆಯಷ್ಟೇ 2014 ಹೋಂಡಾ ಜಾಝ್ ಜಪಾನ್‌ನಲ್ಲಿ ಲಾಂಚ್ ಆಗಿತ್ತು. ಇದರ ಬೆನ್ನಲ್ಲೇ ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ಹೋಂಡಾ, ನೂತನ 'ಉತ್ತೇಜಕ ಎಚ್ ವಿನ್ಯಾಸ' (Exciting H Design) ಕಾನ್ಸೆಪ್ಟ್ ಪ್ರಸ್ತುತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಂಡಾ, ಭವಿಷ್ಯದಲ್ಲಿ ತನ್ನೆಲ್ಲ ಆವೃತ್ತಿಗಳಿಗೂ ಎಕ್ಸೈಟಿಂಗ್ ಎಚ್ ಡಿಸೈನ್ ಆಳವಡಿಸುವುದಾಗಿ ತಿಳಿಸಿದೆ. ಇದು ಜಾಗತಿಕವಾಗಿ ಹೋಂಡಾ ಸಾನಿಧ್ಯವನ್ನು ಇನ್ನಷ್ಟು ಬಲಪಡಿಸಲು ನೆರವಾಗಲಿದೆ.
ಅಂದ ಹಾಗೆ ಭವಿಷ್ಯದಲ್ಲಿ ಆಗಮನವಾಗಲಿರುವ ಎಲ್ಲ ಹೋಂಡಾ ಕಾರುಗಳು ಎಚ್ ವಿನ್ಯಾಸದ ಸ್ಫೂರ್ತಿ ಪಡೆದುಕೊಳ್ಳಲಿದೆ. ಇದು ಇತರ ಸ್ಪರ್ಧಿಗಿಂತ ವಿಭಿನ್ನವೆನಿಸಿಕೊಳ್ಳಲು ಹೋಂಡಾಗೆ ನೆರವಾಗಲಿದೆ.

ಎಕ್ಸ್‌ಟೀರಿಯರ್ ವಿನ್ಯಾಸ
'ಹೈ ಟೆಕ್', 'ಹೈ ಟೆಂಕ್ಷನ್' ಎಂಬ 'ಹೈ ಟಚ್'ಗಳೆಂಬ ಮೂರು ತಂತ್ರಗಾರಿಕೆ ನೂತನ ಉತ್ತೇಜಕ ಎಚ್ ವಿನ್ಯಾಸವನ್ನು ರೂಪಿಸಲಿದೆ.

ಈ ಪೈಕಿ 'ಹೈ ಟೆಕ್' ಎಂಬುದು ನವೀನತೆಯ ಉತ್ಸಾಹ, 'ಹೈ ಟೆಂಕ್ಷನ್' ಎಂಬುದು ಸುಂದರ ದೇಹ ರಚನೆ ಹಾಗೂ ಆಕಾರ ಮತ್ತು 'ಹೈ ಟಚ್' ಎಂಬುದು ಹೋಂಡಾ ಮೇಲ್ಮೈ ಗುಣವನ್ನು ಪ್ರತಿನಿಧಿಸಲಿದೆ.

ಗರಿಷ್ಠ ತಂತ್ರಗಾರಿಕೆ
ಚಿತ್ರದಲ್ಲಿ ತೋರಿಸಿರುವಂತೆ ದೃಢವಾದ ವಿಂಗ್ ಮುಖವಾಡವನ್ನು (solid wing face) ಪೆಡೆದುಕೊಳ್ಳಲಿದೆ. ಇದರ ಮಧ್ಯದಲ್ಲಿ ಹೋಂಡಾ ಲೊಗೊ ಎಚ್ ಆಕರ್ಷಣೀಯವಾಗಿ ಪ್ರತಿಬಿಂಬಿಸಲಿದೆ. ಅದೇ ರೀತಿ ಫ್ರಂಟ್ ಗ್ರಿಲ್ ಮತ್ತು ಹೆಡ್ ಲೈಟ್‌ಗಳನ್ನು ಆಧುನಿಕ ತಂತ್ರಗಾರಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಇಂಟಿರಿಯರ್ ವಿನ್ಯಾಸ
ಇನ್ನು ಕಾರಿನ ಆಂತರಿಕ ಭಾಗಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲಾಗುವುದು.

2014 ಹೋಂಡಾ ಜಾಝ್/ಫಿಟ್
ಸದಾ ಆಸಕ್ತಿದಾಯಕ ವಿನ್ಯಾಸ ರೂಪಿಸುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಹೋಂಡಾ, ಭಾರತಕ್ಕೆ ಪರಿಚಯಿಸಲಿರುವ 2014 ಹೋಂಡಾ ಜಾಝ್ ಆವೃತ್ತಿಯಲ್ಲಿ ಈ ನೂತನ ತಂತ್ರಜ್ಞಾನ ಆಳವಡಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








