ಎರ್ಟಿಗಾ ಹಿಮ್ಮೆಟ್ಟಿಸಲು ಹೋಂಡಾ ನ್ಯೂ ಎಂಪಿವಿ ಸಿದ್ಧ

ಸದ್ಯ ಭಾರತೀಯ ಗ್ರಾಹಕರು ಅತೀವ ಕುತೂಹಲದಿಂದ ಎದುರು ನೋಡುತ್ತಿರುವ ವಾಹನವೆಂದರೆ ಅದುವೇ ಹೋಂಡಾದಿಂದ ಆಗಮನವಾಗಲಿರುವ ನೂತನ ಮಲ್ಟಿ ಪರ್ಪಸ್ ವೆಹಿಕಲ್.

ಪ್ರಮುಖವಾಗಿಯೂ ಸೆಗ್ಮೆಂಟ್ ತಲಹದಿಯಲ್ಲಿ ಮಾರುತಿ ಎರ್ಟಿಗಾ ಹಾಗೂ ಟೊಯೊಟಾ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿರುವ ಈ ನೂತನ ಎಂಪಿವಿ, ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳಿವೆ.

ಇದರಂತೆ ಹೋಂಡಾ ಮೊಬಿಲಿಯೊ ಎಂದು ಗುರುತಿಸಿಕೊಂಡಿರುವ ಈ ಎಂಪಿವಿ ಕಾರಿನ ಮೊದಲ ಮಾದರಿ ಇಂಡೋನೇಷ್ಯಾದಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ. ನಿಮ್ಮ ಮಾಹಿತಿಗಾಗಿ ಕಳೆದ ದಿನವಷ್ಟೇ ನಿಸ್ಸಾನ್ ಬ್ರಾಂಡ್ ಆಗಿರುವ ದಟ್ಸನ್, ತನ್ನ ನೂತನ ಗೊ ಪ್ಲಸ್ ಎಂಪಿವಿ ಕಾರನ್ನು ಇಂಡೋನೇಷ್ಯಾದಲ್ಲಿ ಅನಾವರಣಗೊಳಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕಾರು ತಯಾರಕ ಸಂಸ್ಥೆಯಾಗಿರುವ ಹೋಂಡಾ ಕೂಡಾ ತನ್ನ ಮೊಬಿಲಿಯೊ ಎಂಪಿವಿ ಮೂಲಕ ತನ್ನ ಅಸ್ತ್ರವನ್ನು ಪ್ರಯೋಗಿಸಿದೆ.

ಒಟ್ಟಿನಲ್ಲಿ ಕಾರು ಮಾರುಕಟ್ಟೆ ದೃಷ್ಟಿಕೋನದಲ್ಲಿ ಮುಂಬರುವ ದಿನಗಳಲ್ಲಿ ಎಂಪಿವಿ ಸೆಗ್ಮೆಂಟ್ ನಿಕಟ ಪೈಪೋಟಿಗೆ ಆಣಿಯಾಗಲಿದ್ದು, ಇದು ಈಗಾಗಲೆ ನೆಲೆಯೂರಿರುವ ಇನ್ನೋವಾ ಹಾಗೂ ಎರ್ಟಿಗಾ ಕಾರುಗಳಿಗೆ ನೂತನ ಹೋಂಡಾ ಮೊಬಿಲಿಯೊ ಹಾಗೂ ದಟ್ಸನ್ ಗೊ ಪ್ಲಸ್ ಹೇಗೆ ಸವಾಲಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರೀಮಿಯಂ

ಪ್ರೀಮಿಯಂ

ದಟ್ಸನ್‌ ಗೊ ಪ್ಲಸ್ ಆವೃತ್ತಿಗೆ ಹೋಲಿಸಿದರೆ ಹೋಂಡಾ ಮೊಬಿಲಿಯೊ ಮೊದಲ ನೋಟದಲ್ಲೇ ಪ್ರೀಮಿಯಂ ಎಂಪಿವಿ ಲುಕ್ ಪಡೆದುಕೊಂಡಿದೆ. ಇದು ಎಲ್‌ಎಂಪಿವಿ ಅಂದರೆ ಲೈಟ್ ಮಲ್ಟಿ ಪರ್ಪಸ್ ವೆಹಿಕಲ್ ಎಂದು ಅರಿಯಲ್ಪಡಲಿದೆ.

ಆಯಾಮ

ಆಯಾಮ

ಭಾರತದಲ್ಲಿ ನಾಲ್ಕು ಮೀಟರ್ ಉದ್ದ ಪರಿಮಿತಿಯೊಳಗೆ ಬಂದರೆ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗುತ್ತದೆ. ಆದರೆ 4,390 ಎಂಎಂ ಉದ್ದವನ್ನು ಹೊಂದಿರುವ ಹೋಂಡಾ ಮೊಬಿಲಿಯೊ ಸಬ್ ಫೋರ್ ಮೀಟರ್ ಪರಿಧಿಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ.

ಅಗಲ: 1,680 ಎಂಎಂ

ಎತ್ತರ: 1610 ಎಂಎಂ

ವೀಲ್ ಬೇಸ್: 2,650 ಎಂಎಂ

ಗ್ರೌಂಡ್ ಕ್ಲಿಯರನ್ಸ್: 185 ಎಂಎಂ

ಟರ್ನಿಂಗ್ ರೇಡಿಯಸ್: 5.2 ಮೀಟರ್

ವಿನ್ಯಾಸ

ವಿನ್ಯಾಸ

ಹೋಂಡಾ ಬ್ರಿಯೊ ಹಾಗೂ ಅಮೇಜ್ ಜತೆ ಫ್ಲಾಟ್‌ಫಾರ್ಮ್ ಹಂಚಿಕೊಂಡಿರುವ ಹೋಂಡಾ ಮೊಬಿಲಿಯೊ, ಅಮೇಜ್‌ಗಿಂತ ಉತ್ತಮ ಗ್ರೌಂಡ್ ಕ್ಲಿಯರನ್ಸ್ ಹಾಗೂ ಹೆಚ್ಚಿನ ವೀಲ್ ಬೇಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಬ್ರಿಯೊ ಜತೆ ಮುಂಭಾಗದ ವಿನ್ಯಾಸವನ್ನು ಹಂಚಿಕೊಂಡಿದೆ. ಇನ್ನು ಕಾರಿನ ಹಿಂಭಾಗ ಹಾಗೂ ಮೇಲ್ಭಾಗದಲ್ಲೂ ಆಕ್ರಣಮಕಾರಿ ವಿನ್ಯಾಸ ಕಲ್ಪಿಸಲಾಗಿದೆ. ಇದು ಇತರ ಸೆಡಾನ್ ಅಥವಾ ಹ್ಯಾಚ್‌ಬ್ಯಾಕ್ ಕಾರುಗಳಿಂದ ಎಂಪಿವಿಗೆ ಸ್ಥಳಾಂತರಗೊಳ್ಳುವಾಗ ಉಂಟಾಗುವ ಕೊರತೆ ನೀಗಿಸುವಲ್ಲಿ ಯಶಸ್ವಿಯಾಗಿದೆ.

ಎಂಜಿನ್

ಎಂಜಿನ್

ನೂತನ ಹೋಂಡಾ ಮೊಬಿಲಿಯೊ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಆಗಮನವಾಗುವುದು ಖಚಿತವಾಗಿದೆ. ಇದು ಐ-ವಿಟೆಕ್ ಜತೆ 1.5 ಲೀಟರ್ ಎಸ್‌ಒಎಚ್‌ಸಿ, 16 ವಾಲ್ವೆ, 4 ಸಿಲಿಂಡರ್ ಎಂಜಿನ್ ಹೊಂದಿರಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಸುರಕ್ಷತೆ

ಸುರಕ್ಷತೆ

ಇನ್ನು ನೂತನ ಹೋಂಡಾ ಮೊಬಿಲಿಯೊದಲ್ಲಿ ಗರಿಷ್ಠ ಸುರಕ್ಷಾ ಮಾನದಂಡಗಳಿಗೆ ಪ್ರಾಮುಖ್ಯತೆ ಕೊಡಲಾಗಿದ್ದು, G-CON (ಜಿ-ಫೋರ್ಸ್ ಕಂಟ್ರೋಲ್ ತಂತ್ರಗಾರಿಕೆ) ಜತೆ ಎಸಿಇಟಿಎಂ, ಎಬಿಎಸ್, ಇಬಿಡಿ ಬ್ರೇಕಿಂಗ್ ಸಿಸ್ಟಂ (ಇ ಆಂಡ್ ಎಸ್ ಸಿವಿಟಿ), ಡ್ಯುಯಲ್ ಫ್ರಂಟ್ ಎಸ್‌ಆರ್‌ಎಸ್ ಏರ್ ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ದರ ಮಾಹಿತಿ

ದರ ಮಾಹಿತಿ

ಪ್ರಸ್ತುತ ಇಂಡೋನೇಷ್ಯಾದ ಮೊಬಿಲಿಯೊ ಆವೃತ್ತಿಯು 8.41 ಲಕ್ಷ ರು.ಗಳಿಂದ 10.09 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮನವಾಗಲಿದೆ. ಆದರೆ ಭಾರತ ಮಾರುಕಟ್ಟೆ ಪ್ರವೇಶಿಸುವಾಗ ಇನ್ನೂ ದರ ಸ್ವಲ್ಪ ಅಗ್ಗವಾಗುವ ಸಾಧ್ಯತೆಯಿದೆ.

ದೆಹಲಿ ಆಟೋ ಎಕ್ಸ್‌ಪೋ 2013

ದೆಹಲಿ ಆಟೋ ಎಕ್ಸ್‌ಪೋ 2013

ಇನ್ನು ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿರುವ ಮೊಬಿಲಿಯೊ ಕಾನ್ಸೆಪ್ಟ್ ಆಬಳಿಕ ಭಾರತ ಮಾರುಕಟ್ಟೆಗೆ ಪ್ರವೇಶಿಸಲಿದೆ.

Article Published On: Thursday, September 19, 2013, 16:02 [IST]
English summary
In quick succession two automakers have unveiled their respective MPVs in Indonesia. While Nissan revealed the Datsun GO+ just ahead of the auto show in Jakarta, Honda decided to wait till the auto show to unveil its Brio based MPV concept - Honda Mobilio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+