ನಿರೀಕ್ಷಿಸಿ, ಹೋಂಡಾದಿಂದ ಬರುತ್ತಿದೆ ಇನ್ನೊಂದು ಆಕರ್ಷಕ ಕಾರು
ಇತ್ತೀಚೆಗಷ್ಟೇ ಭಾರತಕ್ಕೆ ತನ್ನ ಮೊದಲ ಡೀಸೆಲ್ ಕಾರು ಪರಚಯಿಸಿರುವ ಜಪಾನ್ ವಾಹನ ತಯಾರಕ ಕಂಪನಿಯಾದ ಹೋಂಡಾ, ಸದ್ಯದಲ್ಲೇ ಇನ್ನೊಂದು ಕಾರನ್ನು ಪರಿಚಯಿಸಲಿದೆ.
ಹೋಂಡಾ ಅಮೇಜ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವಂತೆಯೇ ಹೊಸ ಸೆಡಾನ್ ಆವೃತ್ತಿ ಕೂಡಾ ಇದೇ ಯಶಸ್ಸನ್ನು ಮುಂದುವರಿಸುವ ಸಾಧ್ಯತೆಯಿದೆ. ಈಗಾಗಲೇ ಶಾಂಘೈ ಮೋಟಾರ್ ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಹೋಂಡಾ 'ಕ್ರೈಡರ್' ಬೆಳೆದು ಬರುತ್ತಿರುವ ದೇಶದ ದೊಡ್ಡ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಳ್ಳುತ್ತಿದೆ.
ನೂತನ ಆವೃತ್ತಿಯು ಹೋಂಡಾ ಸಿಟಿ ಹಾಗೂ ಸಿವಿಕ್ ನಡುವೆ ಕಾಣಿಸಿಕೊಳ್ಳಲಿದೆ. ಪ್ರಮುಖವಾಗಿಯೂ ಮೇಲುದರ್ಜೆಯ ಮಧ್ಯಮ ವರ್ಗವನ್ನು ಗುರಿಯಾಗಿರಿಸಿಕೊಳ್ಳುತ್ತಿದೆ.

ಏತನ್ಮಧ್ಯೆಹೋಂಡಾ ಕ್ರೈಡರ್ ಬಿಡುಗಡೆ ಮೊದಲೇ ಕೆಲವೊಂದು ಟೀಕೆಗಳನ್ನು ಎದುರಿಸುತ್ತಿವೆ. ಕಾರು ಹೆಚ್ಚು ಸ್ಥಳಾವಕಾಶವನ್ನು ಹೊಂದಿಲ್ಲವೆಂಬ ಅಪವಾದವಿದೆ. ಆದರೆ ಕಂಪನಿ ಇವೆಲ್ಲವನ್ನು ನಿರಾಕರಿಸುತ್ತಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಹೋಂಡಾ ಕ್ರೈಡರ್ 1.8 ಲೀಟರ್ ಎಂಜಿನ್ ಪಡೆದುಕೊಳ್ಳಲಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ. ಇನ್ನು 4650 ಎಂಎಂ ಉದ್ದ, 1750 ಎಂಎಂ ಅಗಲ ಇರಲಿದೆ.

ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್ ದೇಶಕ್ಕೆ ಪರಿಚಯಿಸುವ ಇರಾದೆಯನ್ನು ಕಂಪನಿ ಹೊಂದಿದೆ. ಹೋಂಡಾ ಅಮೇಜ್ ಯಶಸ್ಸನ್ನು ಇದು ಮುಂದುವರಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗಿದ್ದರೂ ದರದ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ.

ಇನ್ನು ವಿನ್ಯಾಸದತ್ತ ಗಮನ ಹರಿಸಿದರೆ ದೊಡ್ಡದಾದ ಕ್ರೋಮ್ ಫ್ರಂಟ್ ಗ್ರಿಲ್, ದೊಡ್ಡದಾದ ಹೆಡ್‌ಲೈಟ್, ಇದಕ್ಕೆ ಸಮಾನವಾದ ಟೈಲ್ ಲೈಟ್ ಹಾಗೂ ಹಿಂದುಗಡೆ ಕ್ರೋಮ್ ಸ್ಟ್ರಿಪ್ ಪಡೆದುಕೊಳ್ಳಲಿದೆ.

ಕ್ರೈಡರ್ ಜತೆಗೆ ಎರಡು ನೂತನ ಮಾದರಿಗಳನ್ನು ಹೋಂಡಾ ಶಾಂಘೈ ಮೋಟಾರ್ ಶೋದಲ್ಲಿ ಪ್ರಸ್ತುತಪಡಿಸಿದೆ. ಇದರಲ್ಲಿ ಎಂ ಕಾನ್ಸೆಪ್ಟ್ ಪ್ರಮುಖವಾಗಿದೆ. ಈ ಬಗ್ಗೆ ಹಿಂದೆಯೂ ವರದಿಯೊಂದನ್ನು ನಾವು ಪ್ರಕಟಿಸಿದ್ದೆವು. ಇಲ್ಲಿದೆ ನೋಡಿ. ಇನ್ನು ಎಂ-01 ಅಭಿವೃದ್ಧಿ ಹಂತದಲ್ಲಿದೆ.

Honda Crider
ಹೋಂಡಾ ಕ್ರೈಡರ್

Honda Crider
ಹೋಂಡಾ ಕ್ರೈಡರ್

Honda Crider
ಹೋಂಡಾ ಕ್ರೈಡರ್

Honda Crider
ಹೋಂಡಾ ಕ್ರೈಡರ್

Honda Crider
ಹೋಂಡಾ ಕ್ರೈಡರ್

Honda Crider
ಹೋಂಡಾ ಕ್ರೈಡರ್

Honda Crider
ಹೋಂಡಾ ಕ್ರೈಡರ್

Honda Crider
ಹೋಂಡಾ ಕ್ರೈಡರ್

Honda Crider
ಹೋಂಡಾ ಕ್ರೈಡರ್


Click it and Unblock the Notifications








