2016ರಲ್ಲಿ ಹ್ಯುಂಡೈನಿಂದ ಚೊಚ್ಚಲ ಬ್ಯಾಟರಿ ಚಾಲಿತ ಕಾರು
ಹೌದು, ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ವಾಹನ ತಯಾರಕ ಸಂಸ್ಥೆಯ ಚೊಚ್ಚಲ ಬ್ಯಾಟರಿ ಚಾಲಿತ ಕಾರು 2016ನೇ ಸಾಲಿನಲ್ಲಿ ಲೋಕಾರ್ಪಣೆಯಾಗಲಿದೆ.
ಸೋದರಿ ಸಂಸ್ಥೆ ಕಿಯಾ ಸೋಲ್ ಕಾಂಪಾಕ್ಟ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಸಮಾರಂಭದಲ್ಲಿ ಸಂಸ್ಥೆಯ ಹಿರಿಯಾ ಉಪಾಧ್ಯಕ್ಷ ಲೀ ಕಿ-ಸ್ಯಾಂಗ್ ಇದನ್ನು ಖಚಿತಪಡಿಸಿದ್ದಾರೆ.

ಹ್ಯುಂಡೈ ಹಾಗೂ ಹೋಂಡಾ ಸಂಸ್ಥೆಗಳು ಭವಿಷ್ಯದ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳನ್ನು ನಿರ್ಮಿಸುವುದರಲ್ಲಿ ಅತೀವ ಗಮನ ಕೇಂದ್ರಿತವಾಗಿದೆ.

ಹ್ಯುಂಡೈನ ರಸ್ತೆ ಯೋಗ್ಯವಾದ ಫ್ಯೂಯಲ್ ಸೆಲ್ ವಾಹನ ವಾಗಿರುವ ಐಎಕ್ಸ್35 ಪ್ರಸ್ತುತ ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟವಾಗುತ್ತಿದೆ.

ಇನ್ನೊಂದೆಡೆ ಹ್ಯುಂಡೈ ಸೋದರಿ ಸಂಸ್ಥೆಯಾಗಿರುವ ಕಿಯಾ, ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಮಗ್ನವಾಗಿದೆ.

ಯಾವ ಪರಿಸರ ಸ್ನೇಹಿ ಕಾರುಗಳು ಯಶಸ್ಸನ್ನು ಪಡೆಯಲಿದೆ ಎಂಬುದರ ಬಗ್ಗೆ ಭವಿಷ್ಯ ನುಡಿಯುವುದು ಕಷ್ಟಕರ. ಹೀಗಾಗಿ ಹ್ಯುಂಡೈ ಹಾಗೂ ಕಿಯಾ ನಡುವೆ ಜವಾಬ್ದಾರಿಯನ್ನು ಹಂಚಿಕೊಳ್ಳಲಾಗಿದೆ.

ಅಂದರೆ ಹ್ಯುಂಡೈ ಫ್ಯೂಯಲ್ ಸೆಲ್ ಕಾರುಗಳನ್ನು ಲಾಂಚ್ ಮಾಡಲಿದ್ದು, ಅದೇ ಹೊತ್ತಿಗೆ ಕಿಯಾ ಎಲೆಕ್ಟ್ರಿಕ್ ಕಾರುಗಳತ್ತ ಗಮನ ಹರಿಸಲಿದೆ.

ಇದರರ್ಥ ಕಿಯಾ ಫ್ಯೂಯಲ್ ಸೆಲ್ ಕಾರುಗಳನ್ನು ನಿರ್ಮಿಸುವುದಿಲ್ಲ ಎಂಬುದಲ್ಲ. ಇದರಂತೆ ಹ್ಯುಂಡೈ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕಾರು 2016ನೇ ಸಾಲಿನಲ್ಲಿ ಲಾಂಚ್ ಆಗಲಿದೆ ಎಂದು ಹ್ಯುಂಡೈ ಹಿರಿಯ ಉಪಾಧ್ಯಕ್ಷ ಲಿ ಕಿ ಸ್ಯಾಂಗ್ ತಿಳಿಸಿದ್ದಾರೆ.

ಕಿಯಾ ಸೋಲ್ ಎಲೆಕ್ಟ್ರಿಕ್ ವೆಹಿಕಲ್ ಸಂಸ್ಥೆಯ ಮೊದಲ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕಾರಾಗಿದೆ. ಇದು ಮುಂದಿನ ದಿನಗಳಲ್ಲಿ ಅಮೆರಿಕ ಹಾಗೂ ಯುರೋಪ್ ಖಂಡಗಳಿಗೆ ರಫ್ತಾಗಲಿದೆ.


Click it and Unblock the Notifications