ತ್ವರಿ ಮಾಡಿರಿ; ಹ್ಯುಂಡೈ ಡಿಸೆಂಬರ್ ಡಿಲೈಟ್ ಆಫರ್

By Nagaraja

ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಮಾರಾಟವು ಕುಂಠಿತವಾಗಿರುತ್ತದೆ. ಈ ಸಂದರ್ಭದಲ್ಲಿ ಹಲವಾರು ಆಕರ್ಷಕ ಆಫರುಗಳನ್ನು ಘೋಷಿಸುತ್ತಿರುವ ಕಾರು ಕಂಪನಿಗಳು ಹೆಚ್ಚೆಚ್ಚು ಗ್ರಾಹಕರು ತನ್ನತ್ತ ಸೆಳೆಯಲು ಗಮನ ಕೇಂದ್ರಿತವಾಗಿರುತ್ತದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಭೇಟಿ ಕೊಡುತ್ತಿರಿ

ಇದರಿಂದ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಸಹ ಹೊರತಾಗಿಲ್ಲ. ಹೌದು ಈ ಕ್ರಿಸ್ಮಸ್ ಹಾಗೂ ಹೊಸವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿರುವ ದೇಶದ ಎಲ್ಲ ಗ್ರಾಹಕರಿಗೆ ಹ್ಯುಂಡೈ ಡಿಸೆಂಬರ್ ಡಿಲೈಟ್ ಆಫರ್ ಮುಂದಿಡುತ್ತಿದೆ.

ಫಾರ್ಚುನರ್ ಹಿಂದಿಕ್ಕಿತೇ ಹ್ಯುಂಡೈ ಸಾಂಟಾಫೆ

ಅಗ್ಗದ ಇಯಾನ್ ಕಾರಿನಿಂದ ಹಿಡಿದು ದುಬಾರಿ ಸಾಂಟಾಫೆ ಆವೃತ್ತಿಯ ವರೆಗೂ ದೇಶದಲ್ಲಿ ಲಭ್ಯವಿರುವ ಎಲ್ಲ ಹ್ಯುಂಡೈ ಕಾರುಗಳಿಗೂ ಆಫರ್ ಅನ್ವಯವಾಗಲಿದೆ. ಹಾಗಿದ್ದರೆ ಇನ್ಯಾಕೆ ತಡ ಸ್ಲೈಡರ್‌ನಲ್ಲಿ ಕೊಟ್ಟಿರುವ ಆಫರುಗಳ ಪಟ್ಟಿಯನ್ನು ತಿಳಿದುಕೊಂಡು ನೆಚ್ಚಿನ ಹ್ಯುಂಡೈ ಕಾರು ನಿಮ್ಮದಾಗಿಸಿ...

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

ಇಲ್ಲಿ ಕೊಡಲಾಗಿರುವ ಎಲ್ಲ ಕಾರುಗಳ ದರಗಳ ಮೇಲಿನ ಆಫರುಗಳು ದೆಹಲಿ ಎಕ್ಸ್ ಶೋ ರೂಂ ದರಗಳ ಆಧಾರದಲ್ಲಿ ಕೊಡಲಾಗಿದೆ. ಅಂದ ಹಾಗೆ ಹ್ಯುಂಡೈ ಇಯಾನ್ ಹ್ಯಾಚ್‌ಬ್ಯಾಕ್ ಖರೀದಿ ವೇಳೆ ರು. 43,250 ವರೆಗೂ ಉಳಿತಾಯ ಮಾಡಬಹುದಾಗಿದೆ.

ಹ್ಯುಂಡೈ ಐ10

ಹ್ಯುಂಡೈ ಐ10

ಇನ್ನು ಹ್ಯುಂಡೈ ಐ10 ಹ್ಯಾಚ್‌ಬ್ಯಾಕ್ ಖರೀದಿಯಲ್ಲಿ 66,000 ರು. ವರೆಗೂ ಸೇವಿಂಗ್ಸ್ ಮಾಡಬಹುದಾಗಿದೆ.

ಹ್ಯುಂಡೈ ವರ್ನಾ

ಹ್ಯುಂಡೈ ವರ್ನಾ

ಅದೇ ರೀತಿ ಹ್ಯುಂಡೈ ವರ್ನಾ ಡೀಸೆಲ್ ಕಾರು ಖರೀದಿಯಲ್ಲಿ ರು. 54,000 ಹಾಗೂ ಪೆಟ್ರೋಲ್ ವರ್ಷನ್ ಖರೀದಿಯಲ್ಲಿ ರು. 30,000 ವರೆಗೂ ಉಳಿತಾಯ ಮಾಡಬಹುದಾಗಿದೆ.

ಸ್ಯಾಂಟ್ರೊ

ಸ್ಯಾಂಟ್ರೊ

ಹ್ಯುಂಡೈ ಆಫರ್‌ನಿಂದ ಸ್ಯಾಂಟೊ ಕೂಡಾ ಮಿಸ್ ಆಗಿಲ್ಲ. ಇಲ್ಲೂ ರು. 56,000 ವರೆಗೆ ಸೇವಿಂಗ್ಸ್ ಮಾಡಬಹುದಾಗಿದೆ.

ಐ20

ಐ20

ಜನಪ್ರಿಯ ಐ20 ಡೀಸೆಲ್ ಆವೃತ್ತಿಯಲ್ಲಿ ರು. 48.500 ಹಾಗೂ ಪೆಟ್ರೋಲ್ ವರ್ಷನ್‌ನಲ್ಲಿ ರು. 38,000 ವರೆಗೂ ಉಳಿತಾಯ ಮಾಡಬಹುದು.

ಹ್ಯುಂಡೈ ಎಲಂಟ್ರಾ

ಹ್ಯುಂಡೈ ಎಲಂಟ್ರಾ

ಹಾಗೆಯೇ ಹ್ಯುಂಡೈ ಎಲಂಟ್ರಾ ಖರೀದಿಯಲ್ಲೂ ರು. 75,000 ವರೆಗೆ ಸೇವಿಂಗ್ಸ್ ಗ್ಯಾರಂಟಿಯಾಗಿರಲಿದೆ.

ಸೊನಾಟಾ

ಸೊನಾಟಾ

ಅಷ್ಟೇ ಯಾಕೆ ಹ್ಯುಂಡೈ ಸೊನಾಟಾ ಖರೀದಿಯಲ್ಲಿ ಬರೋಬ್ಬರಿ 1,39,000 ರು. ಉಳಿತಾಯ ಮಾಡಬಹುದಾಗಿದೆ.

ಸಾಂಟಾಫೆ

ಸಾಂಟಾಫೆ

ಲಾಸ್ಟ್ ಬಟ್ ಲೀಸ್ಟ್ ಎಂಬಂತೆ ಹ್ಯುಂಡೈ ಸಾಂಟಾಫೆ ಎಸ್‌ಯುವಿ ಖರೀದಿಯಲ್ಲಿ ರು. 145000 ವರೆಗೆ ಉಳಿತಾಯ ಮಾಡಬಹುದಾಗಿದೆ.

ಸ್ಪೆಷಲ್ ಎಕ್ಸ್‌ಚೇಂಜ್ ಆಫರ್

ಸ್ಪೆಷಲ್ ಎಕ್ಸ್‌ಚೇಂಜ್ ಆಫರ್

ಮೇಲೆ ತಿಳಿಸಿದ ಎಲ್ಲ ಸೇವಿಂಗ್ಸ್ ಆಫರುಗಳ ಜತೆಗೆ ವಿಶೇಷ ಎಕ್ಸ್‌ಚೇಂಜ್ ಆಫರ್ ಕೂಡಾ ಲಭ್ಯವಿರಲಿದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಕೆಲವು ತಿಂಗಳುಗಳ ಹಿಂದೆಯಷ್ಟೇ ಲಾಂಚ್ ಆಗಿರುವ ಹ್ಯುಂಡೈ ಗ್ರಾಂಡ್ ಐ10 ಕಾರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ನಿರಾಸೆಗೆ ಕಾರಣವಾಗಿದೆ.

Most Read Articles

Kannada
English summary
Hyundai Motor India has has come up with December delight offer again. Hyundai is offering discounts on Diesel i20 and Verna also for petrol models like Santro, i10 and Eon. The discounts are ranging from Rs 30,000 to Rs 1,45,000
Story first published: Saturday, December 7, 2013, 15:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X