ಹ್ಯುಂಡೈ ಎಲಂಟ್ರಾಗೆ ಡಿಸಿ ಡಿಸೈನ್ ಐಷಾರಾಮಿ ಟಚ್
ಕಸ್ಟಮೈಸ್ಡ್ ಕಾರು ತಯಾರಿಸುವುದರಲ್ಲಿ ಅಗ್ರಗಣ್ಯವಾಗಿರುವ ದಿಲೀಪ್ ಚಾಬ್ರಿಯಾ ನೇತೃತ್ವದ ಡಿಸಿ ಡಿಸೈನ್, ಇದೀಗ ಮತ್ತೊಂದು ಕಾರಿಗೆ ಐಷಾರಾಮಿ ಟಟ್ ನೀಡುವಲ್ಲಿ ಯಶಸ್ವಿಯಾಗಿದೆ.
ನಿಮಗೆಲ್ಲರಿಗೂ ಹ್ಯುಂಡೈ ಎಲಂಟ್ರಾ ಕಾರು ಚಿರಪರಿಚಿತ. ಆದರೆ ಕೆಳಗಡೆ ಸ್ಲೈಡರ್‌ನಲ್ಲಿ ಕೊಟ್ಟಿರುವ ಕಾರನ್ನೊಮ್ಮೆ ನೋಡಿ. ಇದು ಎಲಂಟ್ರಾ ಕಾರೇ ಅಥವಾ ಯಾವುದೋ ಹೊಸದಾಗಿ ಬಂದಿರುವ ಲಗ್ಷುರಿ ಕಾರಾಗಿರಬಹುದೆಂಬ ಶಂಕೆ ಮೂಡಿಸುತ್ತಿದೆ.
ಹೌದು, ಎಲಂಟ್ರಾಗೆ ಲಗ್ಷುರಿ ಟಚ್ ನೀಡುವಲ್ಲಿ ಡಿಸಿ ಡಿಸೈನ್ ಯಶಸ್ಸನ್ನು ಕಂಡಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಹ್ಯುಂಡೈ ಎಲಂಟ್ರಾ ಆಕರ್ಷಕ ಫೋಟೋಸ್‌ಗಳನ್ನು ನೋಡೋಣವೇ...

ಹ್ಯುಂಡೈ ಸಾಂಪ್ರದಾಯಿಕ ವಿನ್ಯಾಸವನ್ನು ಉಳಿಸಿಕೊಂಡು ಆಧುನಿಕ ಟಚ್ ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಹೊರಭಾಗದಿಂದ ಕಾಣುವ ರೀತಿಯಲ್ಲೇ ಒಳಭಾಗದಿಂದಲೂ ಐಷಾರಾಮಿ ವಿನ್ಯಾಸವನ್ನು ಕೊಡಲಾಗಿದೆ.

ಹಾಗೆಯೇ ಡ್ರೈವರ್ ಸ್ನೇಹಿ ಹಲವು ವೈಶಿಷ್ಟ್ಯಗಳನ್ನು ಕಾರಿಗೆ ಆಳವಡಿಸಲಾಗಿದೆ.

ದೇಶದ ಮೊದಲ ಸೂಪರ್ ಕಾರು ಉತ್ಪಾದಕ ಎಂಬ ಖ್ಯಾತಿ ಪಡೆದಿರುವ ಡಿಸಿ ಡಿಸೈನ್ ಈ ಮೂಲಕ ಕಾರು ಪ್ರಿಯರಲ್ಲಿ ಇನ್ನಷ್ಟೇ ಕ್ರೇಜ್ ಸೃಷ್ಟಿ ಮಾಡಿದೆ.










Click it and Unblock the Notifications








