ಜಿನೆವಾದಲ್ಲಿ ಹ್ಯುಂಡೈ ಜೆನಿಸಿಸ್ ಅಮೋಘ ಪ್ರದರ್ಶನ
ಇತ್ತೀಚೆಗಷ್ಟೇ 2014 ಜಿನೆವಾ ಮೋಟಾರು ಶೋ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ನಿರೀಕ್ಷೆಯೆಂಬಂತೆ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ವಾಹನ ತಯಾರಕ ಸಂಸ್ಥೆಯು ನೂತನ ಜೆನಿಸಿಸ್ ಆವೃತ್ತಿಯನ್ನು ಪರಿಚಯಿಸಿದೆ.
ಈ ಸೆಡಾನ್ ಕಾರು ಸೀಮಿತ ಸಂಖ್ಯೆಯಲ್ಲಿ ಮಾತ್ರ ನಿರ್ಮಾಣವಾಗಲಿದ್ದು, ಬ್ರಿಟನ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಇದರಲ್ಲಿ 3.8 ಲೀಟರ್ ಪೆಟ್ರೋಲ್ ವಿ6 ಜಿಡಿಐ ಎಂಜಿನ್ ಆಳವಡಿಸಲಾಗಿದೆ. ಅಲ್ಲದೆ 8 ಸ್ಪೀಡ್ ಆಟೋ ಗೇರ್ ಬಾಕ್ಸ್ ಸಹ ಪಡೆದುಕೊಂಡಿದೆ.

ಆಲ್ ನ್ಯೂ ಹ್ಯುಂಡೈ ಜೆನಿಸಿಸ್ ಯುರೋಪ್ ಮಾರುಕಟ್ಟೆಯಲ್ಲಿ ಗುರಿಯಾಗಿರಿಸಿಕೊಂಡು ತಯಾರಿಸಲಾಗಿದೆ. ಹಾಗಾಗಿ ಸದ್ಯದಲ್ಲಂತೂ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗಿದೆ.

ಇಲ್ಲಿ ಗಮನಾರ್ಹ ವಿಷಯವೆಂದರೆ ಆಡಿ ಕಾರುಗಳಲ್ಲಿ ಕಂಡುಬರುವುದಕ್ಕೆ ಸಮಾನವಾದ ಫ್ರಂಟ್ ಗ್ರಿಲ್‌ಗಳನ್ನು ಹ್ಯುಂಡೈ ಜೆನಿಸಿಸ್ ಪಡೆದುಕೊಂಡಿದೆ. ಇನ್ನು ಹ್ಯುಂಡೈ ಲಾಂಛನವು ಆಸ್ಟನ್ ಮಾರ್ಟಿನ್ ಲೆನೊ ವಿನ್ಯಾಸಕ್ಕೆ ಸಾಮತ್ಯೆಯನ್ನು ಪಡೆದುಕೊಂಡಿದೆ. ಇನ್ನು ಡೇ ಟೈಮ್ ರನ್ನಿಂಗ್ ಲೈಟ್ಸ್ ಸಿ ಆಕಾರವನ್ನು ಪಡೆದುಕೊಂಡಿದೆ.

ಇನ್ನು ಬದಿಭಾಗದಿಂದ ಗಮನಿಸಿದರೆ ಮರ್ಡಿಡಿಸ್ ಬೆಂಝ್ ಸಿಎಲ್‌ಎಸ್ ಆವೃತ್ತಿಗೆ ಸಮಾನವಾಗಿದೆ. ಇದು ಸ್ಪೋರ್ಟಿ ಅಲಾಯ್ ವೀಲ್ ಗಿಟ್ಟಿಸಿಕೊಂಡಿದೆ. ಹಾಗೆಯೇ ಡೋರ್ ಕೆಳಗಡೆ ಕ್ರೋಮ್ ಟಚ್ ಪಡೆದುಕೊಂಡಿದೆ.

ಆನ್ ನ್ಯೂ ಜೆನಿಸಿಸ್ ಹಿಂದುಗಡೆ ಎರಡು ಎಕ್ಸಾಸ್ಟ್ ಔಟ್ಲೆಟ್‌ಗಳು ಇರಲಿದೆ. ಇದರ ಟೈಲ್ ಲ್ಯಾಂಪ್ ತನ್ನದೇ ಆದ ವಿಶಿಷ್ಟ ಲುಕ್ ಪಡೆದುಕೊಂಡಿದೆ.

ಕಾರಿನೊಳಗೆ ಸಿಒ2 ಸೆನ್ಸಾರ್ ಕ್ಯಾಬಿನ್ ಲಗತ್ತಿಸಲಾಗಿದೆ. ಇದು ಕಾರಿನೊಳಗೆ ಗ್ಯಾಸ್ ಮಟ್ಟದ ಬಗ್ಗೆ ನಿಗಾವಹಿಸಲಿದೆ. ಅಲ್ಲದೆ ಆಟೋ ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಂ ಕೂಡಾ ಲಭ್ಯವಿರುತ್ತದೆ. ಇದರ ಸ್ಟೀರಿಂಗ್ ವೀಲ್‌ನಲ್ಲೂ ಆಸ್ಟನ್ ಮಾರ್ಟಿನ್ ಸಾಮತ್ಯೆ ಪಡೆದ ಹ್ಯುಂಡೈ ಲೊಗೊ ಕಂಡುಬರಲಿದೆ.


Click it and Unblock the Notifications








