ಶೀಘ್ರದಲ್ಲೇ ಗ್ರಾಂಡ್ ಐ10 ಡೀಸೆಲ್ ಆಟೋಮ್ಯಾಟಿಕ್ ಲಾಂಚ್

By Nagaraja

ಕಾರಿನ ಚಾಲನೆಯನ್ನು ಇನ್ನಷ್ಟು ಸುಲಭಗೊಳಿಸಲು ಆಟೋಮ್ಯಾಟಿಕ್ ತಂತ್ರಜ್ಞಾನ ಆಳವಡಿಸಲಾಗುತ್ತದೆ. ಆದರೆ ಕೆಲವರು ಇದನ್ನು ಇಷ್ಟಪಡುವುದಿಲ್ಲ. ಇದಕ್ಕಾಗಿ ಮ್ಯಾನುವಲ್ ಕಾರುಗಳನ್ನೇ ಡ್ರೈವ್ ಮಾಡಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

ಅದು ಏನೇ ಆಗಿರಲಿ, ಅವೆಲ್ಲವೂ ಚಾಲಕರ ಆಸಕ್ತಿಗೆ ಬಿಟ್ಟ ವಿಚಾರ. ಇಂದಿನ ಹೊಸ ಸುದ್ದಿಯೆಂದರೆ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಇತ್ತೀಚೆಗಷ್ಟೇ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರನ್ನು ಲಾಂಚ್ ಮಾಡಿತ್ತು.

ಇದರ ಬೆನ್ನಲ್ಲೇ ಆಟೋಮ್ಯಾಟಿಕ್ ತಂತ್ರಗಾರಿಕೆಯನ್ನು ಹೊಂದಿರುವ ಹ್ಯುಂಡೈ ಗ್ರಾಂಡ್ ಐ10 ಡೀಸೆಲ್ ಆವೃತ್ತಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬುದನ್ನು ಘೋಷಿಸಿದೆ.

ಶೀಘ್ರದಲ್ಲೇ ಹ್ಯುಂಡೈ ಗ್ರಾಂಡ್ ಐ10 ಡೀಸೆಲ್ ಆಟೋಮ್ಯಾಟಿಕ್ ಲಾಂಚ್

ನೂತನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಗ್ರಾಂಡ್ ಐ10 ಡೀಸೆಲ್ ಕಾರಿನ ದರ 10 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಶೀಘ್ರದಲ್ಲೇ ಹ್ಯುಂಡೈ ಗ್ರಾಂಡ್ ಐ10 ಡೀಸೆಲ್ ಆಟೋಮ್ಯಾಟಿಕ್ ಲಾಂಚ್

ಪ್ರಸ್ತುತ ಬಂದಿರುವ ಮಾಹಿತಿಗಳ ಪ್ರಕಾರ ನವೆಂಬರ್ ಮಾಸಂತ್ಯದಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಹ್ಯುಂಡೈ ನೂತನ ವರ್ಷನ್ ಆಗಮನವಾಗಲಿದೆ.

ಶೀಘ್ರದಲ್ಲೇ ಹ್ಯುಂಡೈ ಗ್ರಾಂಡ್ ಐ10 ಡೀಸೆಲ್ ಆಟೋಮ್ಯಾಟಿಕ್ ಲಾಂಚ್

ನಿಮ್ಮ ಮಾಹಿತಿಗಾಗಿ ಹ್ಯುಂಡೈ ಗ್ರಾಂಡ್ ಐ10 ಪೆಟ್ರೋಲ್ ಆಟೋಮ್ಯಾಟಿಕ್ ವರ್ಷನ್ ಇನ್ನಷ್ಟೇ ಲಾಂಚ್ ಆಗಬೇಕಾಗಿದೆ. ಈ ನಡುವೆ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಗಮನವಾಗುತ್ತಿದೆ.

ಶೀಘ್ರದಲ್ಲೇ ಹ್ಯುಂಡೈ ಗ್ರಾಂಡ್ ಐ10 ಡೀಸೆಲ್ ಆಟೋಮ್ಯಾಟಿಕ್ ಲಾಂಚ್

ಸೆಪ್ಟೆಂಬರ್ 3ರಂದು ಲಾಂಚ್ ಆಗಿದ್ದ ಹ್ಯುಂಡೈ ಗ್ರಾಂಡ್ ಐ10 ಕಾರು ಬಿಡುಗಡೆಯಾದ ಕೇವಲ 20 ದಿನಗಳೊಳಗೆ 10,000 ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತು.

ಶೀಘ್ರದಲ್ಲೇ ಹ್ಯುಂಡೈ ಗ್ರಾಂಡ್ ಐ10 ಡೀಸೆಲ್ ಆಟೋಮ್ಯಾಟಿಕ್ ಲಾಂಚ್

ಅಂದ ಹಾಗೆ ಹ್ಯುಂಡೈ ಗ್ರಾಂಡ್ ಐ10 1.1 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 69 ಅಶ್ವಶಕ್ತಿ (153 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಶೀಘ್ರದಲ್ಲೇ ಹ್ಯುಂಡೈ ಗ್ರಾಂಡ್ ಐ10 ಡೀಸೆಲ್ ಆಟೋಮ್ಯಾಟಿಕ್ ಲಾಂಚ್

ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ದೊರಕುವ ಅಗ್ಗದ ಡೀಸೆಲ್ ಆಟೋಮ್ಯಾಟಿಕ್ ಕಾರೆಂದರೆ ಅದು ಹ್ಯುಂಡೈ ವರ್ನಾ ಆಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 10.34 ಲಕ್ಷ ರು.ಗಳಾಗಿವೆ. ಅಂದರೆ ಇದೀಗ ಆಗಮನವಾಗಿರುವ ಹ್ಯುಂಡೈ ಐ10 ನೆಕ್ಸ್ಟ್ ಜನರೇಷನ್ ಗ್ರಾಂಡ್ ಐ10 ಕಾರು ಇದಕ್ಕಿಂತಲೂ ಕಡಿಮೆ ದರದಲ್ಲಿ ಅಂದರೆ 7.5ರಿಂದ 9.5 ಲಕ್ಷ ರು.ಗಳ ಅಸುಪಾಸಿನಲ್ಲಿ ದೊರಕಲಿದೆ.

More from DriveSpark

Article Published On: Tuesday, October 29, 2013, 11:22 [IST]
English summary
This is one news that is going to get a lot of attention. Hyundai India, the second largest automaker in the country will introduce an automatic transmission version of its diesel Grand i10 before the end of this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+