ಜನಮನ ಗೆದ್ದ ಹ್ಯುಂಡೈ ಇಂಟ್ರಡೊ ಕಾನ್ಸೆಪ್ಟ್
ಬಹುನಿರೀಕ್ಷಿತ 2014 ಜಿನೆವಾ ಮೋಟಾರು ಶೋ ಆರಂಭಕ್ಕೂ ಮುನ್ನುಡಿಯಾಗಿ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ನೂತನ ಇಂಟ್ರಡೊ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.
2014 ಆಟೋ ಎಕ್ಸ್ ಪೋ
ಇದು ಇನ್ನಷ್ಟೇ ಆಗಮನವಾಗಲಿರುವ ಸಂಸ್ಥೆಯ ಎರಡನೇ ಜನಾಂಗದ ಫ್ಯೂಯಿಡಿಕ್ ವಿನ್ಯಾಸ ತತ್ವಶಾಸ್ತ್ರವಾದ ಫ್ಯೂಯಿಡಿಕ್ ಸ್ಕಲ್ಫ್ಚರ್ 2.0 ಅಡಿಯಲ್ಲಿ ನಿರ್ಮಾಣವಾಗಿರುವ 2015 ಜೆನಿಸಿಸ್ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ಕೆಳಗಡೆ ಕೊಟ್ಟಿರುವಂತೆಯೇ ಆಕ್ರಮಣಕಾರಿ ಲುಕ್ ಪಡೆಯುವಲ್ಲಿ ಹ್ಯುಂಡೈ ಇಂಟ್ರಡೊ ಯಶಸ್ಸನ್ನು ಕಂಡಿದೆ. ಪ್ರಮುಖವಾಗಿಯೂ ಇದು ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿದೆ.

ಹ್ಯುಂಡೈನ ಯುರೋಪಿಯನ್ ಟೆಕ್ನಿಕಲ್ ಸೆಂಟರ್‌ನಲ್ಲಿ ಇದರ ಅಭಿವೃದ್ಧಿ ಹಾಗೂ ವಿನ್ಯಾಸ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಯುದ್ಧ ವಿಮಾನದ ವಿನ್ಯಾಸದಿಂದ ಸ್ಫೂರ್ತಿ ಪಡೆದು ಹ್ಯುಂಡೈ ಇಂಟ್ರಡೊ ಕಾನ್ಸೆಪ್ಟ್ ತಯಾರಿಸಲಾಗಿದೆ. ಹಾಗೆಯೇ ಭಾರ ಕಡಿಮೆಗೊಳಿಸಲು ಹಗುರ ಭಾರದ ಪರಿಕರಗಳನ್ನು ಬಳಕೆ ಮಾಡಲಾಗಿದೆ.

ಇದು ಸ್ಟೀಲ್ ಬಳಕೆಗಿಂತಲೂ ಶೇಕಡಾ 70ರಷ್ಟು ಹಗುರವಾಗಿರಲಿದೆ. ಹಾಗೆಯೇ ಹಿಂದುಗಡೆ ವಿಶಿಷ್ಟ ರೀತಿಯ ಟೈಲ್ ಲ್ಯಾಂಪ್ ಅದೇ ರೀತಿ ಅಲಾಯ್ ವೀಲ್ ನೀಡಲಾಗಿದೆ.

ಅಂದ ಹಾಗೆ ಹ್ಯುಂಡೈ ಇಂಟ್ರಡೊ ನೆಕ್ಸ್ಟ್ ಜನರೇಷನ್ ಹೈಡ್ರೋಜನ್ ಫ್ಯೂಯಲ್ ಸೆಲ್ ತಂತ್ರಾಂಶವನ್ನು ಹೊಂದಿರಲಿದೆ. ಹಾಗಿದ್ದರೂ ಕಾರಿನ ನಿರ್ವಹಣೆ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ 36 ಕೆಡಬ್ಲ್ಯುಎಚ್ ಲಿಥಿಯಂ ಬ್ಯಾಟರಿ ಆಳವಡಿಕೆಯಾಗುವ ಸಾಧ್ಯತೆಯಿದೆ.


Click it and Unblock the Notifications








