ಭಾರತಕ್ಕೆ ಬರುತ್ತಾ ಏಳು ಸೀಟಿನ ಹ್ಯುಂಡೈ ಸಾಂತಾ ಫೆ?

By Nagaraja

ಐದು ಸೀಟಿನ ಸಾಂತಾ ಫೆ ಸ್ಪೋರ್ಟ್ಸ್ ಯಶಸ್ಸಿನ ಬೆನ್ನಲ್ಲೇ ಅಮೆರಿಕದಲ್ಲಿ ಏಳು ಸೀಟಿನ ಸಾಂಟಾ ಫೆ ಕಾರನ್ನು ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ ಬಿಡುಗಡೆಗೊಳಿಸಿದೆ.

2012 ನ್ಯೂಯಾರ್ಕ್ ಆಟೋ ಶೋದಲ್ಲಿ ಮೊದಲ ಬಾರಿಗೆ ಏಳು ಸೀಟಿನ ಸಾಂತಾ ಫೆ ಕಾರನ್ನು ಅನಾವರಣಗೊಳಿಸಲಾಗಿತ್ತು. ಇದೀಗ ಈ ಪ್ರೀಮಿಯಂ ಎಸ್‌ಯುವಿ ಕಾರು ಅಮೆರಿಕದಲ್ಲಿ ಯಾವ ರೀತಿ ಗಮನ ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಏಳು ಸೀಟಿನ ಸಾಂತಾ ಫೆ ಕಾರಿನ ದರ 28,350 ಅಮೆರಿಕನ್ ಡಾಲರ್ ಆಗಿದೆ. ಅಂದರೆ ಇದು ಭಾರತೀಯ ರುಪಾಯಿ ಪ್ರಕಾರ 15.08 ಲಕ್ಷ ಅಸುಪಾಸಿನಲ್ಲಿರಲಿದೆ.

ಅಂದ ಹಾಗೆ ನೂತನ ಸೆವೆನ್ ಸೀಟರ್ ಹ್ಯುಂಡೈ ಸಾಂತಾ ಫೆ ಮುಂದಿನ ದಿನಗಳಲ್ಲಿ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಪ್ರಸ್ತುತ ಎಡ ಬದಿಯಲ್ಲಿ ಮಾತ್ರ ಡ್ರೈವಿಂಗ್ ವ್ಯವಸ್ಥೆ ಆಳವಡಿಸಲಾಗಿದ್ದು, ಪ್ರಮುಖವಾಗಿಯೂ ಅಮೆರಿಕ ಹಾಗೂ ಚೀನಾ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಳ್ಳಲಾಗಿದೆ.

ಖಂಡಿತವಾಗಿಯೂ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿದರೆ ಹ್ಯುಂಡೈ ಎಸ್‌ಯುವಿ ದೊಡ್ಡ ಯಶಸ್ಸು ಸಾಧಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವೂ ಬೇಡ.

Hyundai Santa Fe 7-Seater

ಅಮೆರಿಕ ಮಾರುಕಟ್ಟೆ ಗುರಿಯಾಗಿರಿಸಿಕೊಂಡಿರುವ ಹ್ಯುಂಡೈ ನೂತನ ಏಳು ಸೀಟಿನ ಸಾಂತಾ ಫೆ ಪ್ರೀಮಿಯಂ ಎಸ್‌ಯುವಿ ಲಾಂಚ್ ಮಾಡಿದೆ. ಇದರ ದರ 15.08 ಲಕ್ಷ ರು.ಗಳಾಗಿವೆ.

Hyundai Santa Fe 7-Seater

ಐದು ಸೀಟಿನ ಸಾಂತಾ ಫೆ ಹೋಲಿಸಿ ನೋಡಿದಾಗ ನೂತನ ಏಳು ಸೀಟಿನ ಸಾಂತಾ ಫೆ ಹೆಚ್ಚು ಉದ್ದ ಹೊಂದಿರಲಿದೆ. ಹಾಗೆಯೇ ಸೆವೆನ್ ಸೀಟ್ ಸಾಂತಾ ಫೆ 3.3 ಲೀಟರ್ 290 ಬಿಎಚ್‌ಪಿ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕೂಡಾ ಇರಲಿದೆ.

Hyundai Santa Fe 7-Seater

ಹಿಂದಿನ ಸೀಟುಗಳನ್ನು ಮಡಚಲು ಸಾಧ್ಯವಾಗುವುದರಿಂದ ಹೆಚ್ಚಿನ ಲಗ್ಗೇಜ್ ಹೊತ್ತೊಯ್ಯಲು ಸಾಧ್ಯವಾಗಲಿದೆ.

Hyundai Santa Fe 7-Seater

ಎಕ್ಸ್‌ಟೀರಿಯರ್ ವಿನ್ಯಾಸ

Hyundai Santa Fe 7-Seater

ಇಂಟಿರಿಯರ್

Hyundai Santa Fe 7-Seater

ರಿಯರ್ ವ್ಯೂ

Hyundai Santa Fe 7-Seater

ರೆಡ್ ಹಾಟಿ ಹ್ಯುಂಡೈ

More from DriveSpark

Article Published On: Monday, February 4, 2013, 14:02 [IST]
English summary
Hyundai has launched a seven seater version of the Santa Fe premium SUV in the US market following the huge success the regular 5-seater Santa Fe (sold as the the Santa Fe Sport). The 7 seater Santa Fe was first unveiled during the 2012 Now York Auto Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+