ಹ್ಯುಂಡೈ ಸಿದ್ಧಪಡಿಸುತ್ತಿದೆ 'ಬೇಬಿ ಎಸ್‌ಯುವಿ'
ನೀವೆಲ್ಲರು ಹ್ಯುಂಡೈ ಸಾಂಟಾಫೆ ಕುರಿತು ಕೇಳಿರುವಿರಿ. ದಕ್ಷಿಣ ಕೊರಿಯಾ ಕಾರು ತಯಾರಕ ಸಂಸ್ಥೆಯಿಂದ ಇದೀಗ ಆಗಮನವಾಗಲಿರುವ ನೂತನ ಕಾರು ಸಾಂಟಾಫೆ ಕೂಸು ಎನಿಸಿಕೊಳ್ಳಲಿದೆ. ಈಗಾಗಲೇ ಯಶಸ್ವಿ ಪರೀಕ್ಷೆ ನಡೆಸಿರುವ ಹೊಸ ಕಾಂಪಾಕ್ಟ್ ಎಸ್‌ಯುವಿ, ಬಹುಬೇಗನೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.
ಭಾರತದಲ್ಲಿ ಕಾಂಪಾಕ್ಟ್ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಮಹೀಂದ್ರ, ಫೋರ್ಡ್ ಹಾಗೂ ರೆನೊ ಯಶಸ್ಸನ್ನು ಹಿಂಬಾಲಿಸುತ್ತಿರುವ ಮಾರುತಿ ಹಾಗೂ ಹ್ಯುಂಡೈ ಸಹ ಬೇಬಿ ಎಸ್‌ಯುವಿ ಸಿದ್ಧಗೊಳಿಸುವ ಗುರಿಯಿರಿಸಿಕೊಂಡಿದೆ.

2014ರಲ್ಲಿ ಆಗಮನ
ಈಗಾಗಲೇ ಯಶಸ್ವಿ ಪರೀಕ್ಷೆ ನಡೆಸಿರುವ ಮುಂಬರುವ ಹ್ಯುಂಡೈ ಮಿನಿ ಎಸ್‌ಯುವಿ 2014ರಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಸಾಂಟಾಫೆ ಸ್ಫೂರ್ತಿ
ಹ್ಯುಂಡೈ ಎಚ್‌ಬಿ20 ತಲಹದಿಯಲ್ಲಿ ನೂತನ ಕಾರು ನಿರ್ಮಾಣಗೊಳ್ಳಲಿದೆ. ಹಾಗೆಯೇ ಹ್ಯುಂಡೈ ಸಾಂಟಾಫೆ ಎಸ್‌ಯುವಿ ಕಾರಿನಿಂದ ಸ್ಪೂರ್ತಿ ಪಡೆದು ನೂತನ ಕಾರು ಸಿದ್ಧಗೊಳ್ಳುತ್ತಿದೆ.

ಸಬ್ 4 ಮೀಟರ್
ಭಾರತ ಮಾರುಕಟ್ಟೆಗೆ ಅನುಗುಣವಾಗಿ ಸಬ್ ಫೋರ್ ಮೀಟರ್ ಪರಿಮಿತಿಯೊಳಗಿನ ಕಾರು ದೇಶದಲ್ಲಿ ಬಿಡುಗಡೆಯಾಗಲಿದೆ. (ಅಧಿಕೃತ ಮಾಹಿತಿ ಬಂದಿಲ್ಲ.)

ವೆರಿಯಂಟ್
ಇನ್ನು ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ಆಗಮನವಾಗುವುದು ಬಹುತೇಕ ಖಚಿತವಾಗಿದೆ.

ಪ್ರತಿಸ್ಪರ್ಧಿ
ಇದು ಫೋರ್ಡ್ ಇಕೊಸ್ಪೋರ್ಟ್ ಸೇರಿದಂತೆ ಸಮಾನ ದರದ ಇತರ ರೇಂಜ್ ಕಾರುಗಳಿಗೂ ನಿಕಟ ಪೈಪೋಟಿ ನೀಡಲಿದೆ.


Click it and Unblock the Notifications








