ಇನ್ನು ಮುಂದೆ ಹ್ಯುಂಡೈ ಐ20 ಹೆಚ್ಚು ಸಮರ್ಥ ಕಾರು

By Nagaraja

ಕುಟುಂಬ ಆಧಾರಿತ ಕಾರುಗಳಿಂದ ಒಂದು ಹೆಜ್ಜೆ ಮುಂದಿಟ್ಟಿರುವ ಜಗತ್ತಿನ ಮುಂಚೂಣಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಹ್ಯುಂಡೈ, ಗರಿಷ್ಠ ನಿರ್ವಹಣೆಯ ಕಾರುಗಳನ್ನು ಉತ್ಪಾದಿಸುದರತ್ತ ಗಮನ ಕೇಂದ್ರಿತವಾಗಿದೆ.

ಈ ಮೂಲಕ ಯುವ ಗ್ರಾಹಕರನ್ನು ತನ್ನತ್ತ ಹೆಚ್ಚು ಸೆಳೆಯುವ ನಿಟ್ಟಿನಲ್ಲಿ ಹೆಚ್ಚು ಆಕ್ರಣಕಾರಿಕಾರಿ ಹಾಗೂ ಕ್ರೀಡಾತ್ಮಕ ವಿನ್ಯಾಸಗಳನ್ನು ಹೊಂದಿರುವ ಕಾರುಗಳನ್ನು ಉತ್ಪಾದಿಸಲು ಹ್ಯುಂಡೈ ಮುಂದೆ ಬಂದಿದೆ.

ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಹ್ಯುಂಡೈ ಇದಕ್ಕಾಗಿಯೇ ವಿಶೇಷವಾದ ನಿರ್ವಹಣಾ ವಿಭಾಗವನ್ನು ರೂಪಿಸಿದೆ. ಇದು ಜನಪ್ರಿಯ ಮರ್ಸಿಡಿಸ್ ಬೆಂಝ್‌ನ ಎಎಂಜಿ ಹಾಗೂ ನಿಸ್ಸಾನ್‌ನ ನಿಸ್ಮೊ, ಹೋಂಡಾದ ಮುಗೆನ್ ಮತ್ತು ಟೊಯೊಟಾದ ಟಿಆರ್‌ಡಿ ವಿಭಾಗದ ಮಾದರಿಯಲ್ಲಿ ಕಾರ್ಯಾಚರಿಸಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಐ20 ಹಾಗೂ ನಿರ್ವಹಣಾ ವಿಭಾಗ

ಇದೇ ಮೊದಲ ಬಾರಿಗೆ ವಿಶ್ವ ರಾಲಿ ಚಾಂಪಿಯನ್‌ಶಿಪ್ (ಡಬ್ಲ್ಯುಆರ್‌ಸಿ) ಮೋಟಾರ್ ಸ್ಪೋರ್ಟ್ ತಂಡಕ್ಕೆ ಚಾಲನೆ ನೀಡಿರುವ ಹ್ಯುಂಡೈನ ನೂತನ ನಿರ್ವಹಣಾ ವಿಭಾಗವು ಫ್ರಾಂಕ್‌ಫರ್ಟ್ ಕೇಂದ್ರಿಕರಿಸಿ ಕಾರ್ಯಾಚರಿಸಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಐ20 ಹಾಗೂ ನಿರ್ವಹಣಾ ವಿಭಾಗ

ಇದರಲ್ಲಿ ಭಾರತದಲ್ಲಿ ನಿರ್ಮಿತ ಐ20 ಆಧಾರಿತ ಕಾರಿನಲ್ಲಿ ವಿಶೇಷವಾದ ರೇಸಿಂಗ್ ಮೆಷಿನ್‌ಗಳನ್ನು ಆಳವಡಿಸಲಾಗುವುದು.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಐ20 ಹಾಗೂ ನಿರ್ವಹಣಾ ವಿಭಾಗ

2014ನೇ ಇಸವಿಯಲ್ಲಿ ಹ್ಯುಂಡೈ ವಿಶ್ವ ರಾಲಿ ಚಾಂಪಿಯನ್‌ಶಿಪ್‌ಗೆ ಪಾದರ್ಪಣೆಗೈಯಲಿದೆ. ಈ ರೇಸಿಂಗ್‌ನಲ್ಲಿ ಪ್ರಸ್ತುತ ಜನಾಂಗದ ರೇಸಿಂಗ್ ಕಾರುಗಳನ್ನು ಟ್ರ್ಯಾಕ್‌ಗಿಳಿಸಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಐ20 ಹಾಗೂ ನಿರ್ವಹಣಾ ವಿಭಾಗ

ನಿಮ್ಮ ಮಾಹಿತಿಗಾಗಿ, ಮುಂದಿನ ಜನಾಂಗದ ಐ20 ಈಗಾಗಲೇ ಅಭಿವೃದ್ಧಿ ಹಂತದಲ್ಲಿದ್ದು, 2015ರಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಐ20 ಹಾಗೂ ನಿರ್ವಹಣಾ ವಿಭಾಗ

ಈ ನಿರ್ವಹಣಾ ಆಧಾರಿತ ಐ20 ಕಾರುಗಳು ಆರಂಭದಲ್ಲಿ ಯುರೋಪ್ ಮಾರುಕಟ್ಟೆಯನ್ನು ಗುರಿಯಾಗಿರಸಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಐ20 ಹಾಗೂ ನಿರ್ವಹಣಾ ವಿಭಾಗ

ಟರ್ಬೊಚಾರ್ಜ್ಡ್ ಎಂಜಿನ್‌ನೊಂದಿಗೆ ಆಗಮನವಾಗಲಿರುವ ನೂತನ ಐ20 ಆಲ್ ವೀಲ್ ಡ್ರೈವಿಂಗ್ ಆಪ್ಷನ್ ಹೊಂದರಿಲಿದೆ. ಮುಂದಿನ ದಿನಗಳಲ್ಲಿ ಇತರ ಹ್ಯುಂಡೈ ಮಾದರಿಗಳು ಸಹ ಇದಕ್ಕೆ ಸೇರ್ಪಡೆಯಾಗಲಿದೆ.

More from DriveSpark

Article Published On: Monday, October 21, 2013, 9:41 [IST]
English summary
Hyundai has set its mind to change its image of a mild, family oriented brand to a modern, aggressive and sporty one that younger buyers will relate to. To achieve this Hyundai will soon have a dedicated performance division of its own. Much like Nissan's Nismo, Honda's Mugen, Toyota's TRD, Mercedes-Benz's AMG and so on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+