2015 ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 94 ಹ್ಯುಂಡೈ ಕಾರುಗಳ ಚಮಕ್
ಮುಂಬರುವ 2015 ಐಸಿಸಿ ಕ್ರಿಕೆಟ್ ವಿಶ್ವಕಪ್‌ನ್ನು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಜಂಟಿಯಾಗಿ ಆಯೋಜಿಸುತ್ತಿದೆ. ಇದರಂತೆ ಅಧಿಕೃತ ಪಾಲುದಾರಿಕೆಯನ್ನು ಹೊಂದಿರುವ ಜಗತ್ತಿನ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ 94 ಕಾರುಗಳನ್ನು ವಿತರಿಸಿದೆ.
ಇದೀಗ ಹ್ಯುಂಡೈ ವಾಹನಗಳನ್ನು ಟೂರ್ನಮೆಂಟ್‌ನಲ್ಲಿ ಐಸಿಸಿ ಅಧಿಕಾರಿಗಳು, ರೆಫರಿ, ಸಿಬ್ಬಂದಿ ವರ್ಗ ಹಾಗೂ ಇತರ ಕಾರ್ಯ ನಿರ್ವಾಹಕ ಅಧಿಕಾರಿಗಳು ತಮ್ಮ ಪಯಣಕ್ಕಾಗಿ ಬಳಕೆ ಮಾಡಲಿದ್ದಾರೆ. ನಿಮ್ಮ ಮಾಹಿತಿಗಾಗಿ ಐಸಿಸಿ ಏಕದಿನ ವಿಶ್ವಕಪ್ ಜೊತೆಗೆ ಐಸಿಸಿ ಟ್ವೆಂಟಿ-20 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಹ್ಯುಂಡೈ ತನ್ನ ಅಧಿಕೃತ ಪಾಲುದಾರಿಕೆಯನ್ನು ಹೊಂದಿರುತ್ತದೆ.

ಹ್ಯುಂಡೈನ ಜನಪ್ರಿಯ ಸಾಂಟಾ ಫೆ, ವಾಗನ್ ಡೀಸೆಲ್ ಕಾರು, ಐಎಕ್ಸ್35, ನ್ಯೂಜಿಲೆಂಡ್‌ನಲ್ಲಿ ಅತಿ ಹೆಚ್ಚು ಮಾರಾಟದಲ್ಲಿರುವ ಎಸ್‌ಯುವಿ ಐಮ್ಯಾಕ್ಸ್ ವ್ಯಾನ್ ಮತ್ತು ಐ40 ವ್ಯಾಗನ್ ಮುಂತಾದ ಕಾರುಗಳನ್ನು ಬಳಕೆ ಮಾಡಲಾಗುವುದು.

2015 ಫೆಬ್ರವರಿ 14ರಿಂದ ಮಾರ್ಚ್ 29ರ ವರೆಗೆ ಆಯೋಜನೆಯಾಗುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನ ತಲಾ ಏಳು ನಗರಗಳಲ್ಲಿ ಆಯೋಜನೆಯಾಗುತ್ತಿದೆ. ಈ ಪೈಕಿ ನ್ಯೂಜಿಲೆಂಡ್‌ನ ಆಕ್ಲೆಂಡ್, ಹ್ಯಾಮಿಲ್ಟನ್, ನೇಪಿಯರ್, ವೆಲ್ಲಿಂಗ್ಟನ್, ನೆಲ್ಸನ್, ಕ್ರೈಸ್ಟ್ ಚರ್ಚ್ ಮತ್ತು ಡ್ಯುನ್‌ಡಿನ್ ತಾಣಗಳಲ್ಲಾಗಿ 23 ಪಂದ್ಯಾಟಗಳು ಆಯೋಜನೆಯಾಗುತ್ತಿದೆ.

ಇತ್ತೀಚೆಗೆ ಫೆಬ್ರವರಿ 7ರಂದು ನ್ಯೂಜಿಲೆಂಡ್‌ನಲ್ಲಿ ನಡೆದ ಸಮಾರಂಭದಲ್ಲಿ ವಾಹನಗಳನ್ನು ವಿತರಿಸಲಾಯಿತು. ಅಂತೆಯೇ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ಪಾಲುದಾರಿಕೆ ಹೊಂದಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಹ್ಯುಂಡೈ, ಟೂರ್ನಿಯುದ್ಧಕ್ಕೂ ತಮ್ಮ ಸಹಕಾರ ನೀಡುವುದಾಗಿ ಘೋಷಿಸಿದೆ.

ಇದಕ್ಕೂ ಮೊದಲು ಐಸಿಸಿ ಕ್ರಿಕೆಟ್ ವಿಶ್ವಕಪ್ ಜೊತೆಗಿನ ಪಾಲುದಾರಿಕೆ ಅನುಸಾರವಾಗಿ ಹ್ಯುಂಡೈ, ನ್ಯೂಜಿಲೆಂಡ್‌ನ ನಾಲ್ಕು ಸಮುದ್ರ ತೀರ ಪ್ರದೇಶದಲ್ಲಿ ಬೀಚ್ ಕ್ರಿಕೆಟ್ ಟೂರ್ನಮೆಂಟ್ ಕೂಡಾ ಆಯೋಜಿಸಿತ್ತು. ಈ ಮೂಲಕ ಹೆಚ್ಚೆಚ್ಚು ಕುಟುಂಬಗಳನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗಿತ್ತು.

ಇದೇ ಸಂದರ್ಭದಲ್ಲಿ ಈ ಫೆಬ್ರವರಿ ತಿಂಗಳಲ್ಲಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಿರುವ ಹ್ಯುಂಡೈ, ಅದೃಷ್ಟಶಾಲಿಗಳಿಗೆ ಆಸ್ಟ್ರೇಲಿಯಾದ ಮೆಲ್ಪರ್ನ್‌ನಲ್ಲಿ ನಡೆಯುವ ಫೈನಲ್ ನೋಡುವ ಅವಕಾಶವನ್ನು ಮುಂದಿಡುತ್ತಿದೆ. ಇದಕ್ಕಾಗಿ ನೀವು ಹ್ಯುಂಡೈ ಕಾರನ್ನು ಟೆಸ್ಟ್ ಡ್ರೈವ್ ಮಾಡಬೇಕಾಗುತ್ತದೆ.


Click it and Unblock the Notifications








