ದೀಪಾವಳಿಗೆ ತಾಜಾ ಲುಕ್ ಪಡೆಯಲಿರುವ ಹ್ಯುಂಡೈ ವರ್ನಾ
ಈ ಬಾರಿಯ ದೀಪಾವಳಿ ಹಬ್ಬ ಹಲವು ಕಾರಣಗಳಿಂದಾಗಿ ಸ್ಮರಣೀಯವೆನಿಸಲಿದೆ. ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಸದ್ಯದಲ್ಲೇ ತನ್ನ ಜನಪ್ರಿಯ ವರ್ನಾ ಆವೃತ್ತಿಗೆ ಹೊಸ ಟಚ್ ನೀಡಲು ಸಜ್ಜಾಗುತ್ತಿದೆ.
ಮೂಲಗಳ ಪ್ರಕಾರ ಹ್ಯುಂಡೈ ವರ್ನಾ ಸೆಡಾನ್ ಕಾರು ಕೆಲವೊಂದು ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಮುಂಬರುವ ಹಬ್ಬದ ಆವೃತ್ತಿ ವೇಳೆ ಬಿಡುಗಡೆಯಾಗಲಿದೆ. ಇದರಿಂದ ಕಳೆಗುಂದಿರುವ ಮಾರುಕಟ್ಟೆಯನ್ನು ಉತ್ತೇಜಿಸುವ ಹಾಗೂ ತನ್ನ ನಿಕಟ ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸಲು ಕಂಪನಿಗೆ ನೆರವಾಗಲಿದೆ.
ಗ್ರಾಂಡ್ ಐ20 ಹ್ಯಾಚ್‌ಬ್ಯಾಕ್ ಕಾರಿನ ಬೆನ್ನಲ್ಲೇ ಹ್ಯುಂಡೈ ಫೇಸ್‌ಲಿಫ್ಟ್ ವರ್ಷನ್ ಮಾರುಕಟ್ಟೆಗೆ ಅಪ್ಪಳಿಸಿದೆ. ಅಷ್ಟಕ್ಕೂ ಹ್ಯುಂಡೈ ವರ್ನಾ ಫೇಸ್‌ಲಿಫ್ಟ್ ವರ್ಷನ್ ಏನೆಲ್ಲ ಹೊಸ ಫೀಚರ್ ಪಡೆದುಕೊಳ್ಳಲಿದೆ ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ವೈಶಿಷ್ಟ್ಯಗಳು
ಬ್ಯಾಕ್ ಲಿಟ್ ಪವರ್ ವಿಂಡೋ ಸ್ವಿಚ್
ಟಾಪ್ ವೆರಿಯಂಟ್‌ಗಳಲ್ಲಿ ಬ್ಯಾಕ್ ಲಿಟ್ ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್

ವೈಶಿಷ್ಟ್ಯಗಳು
ಪರಿಷ್ಕೃತ ಅಲಾಯ್ ವೀಲ್
ಸ್ಪೇರ್ ವೀಲ್
ರಿಯರ್ ಸೀಟುಗಳಲ್ಲಿ ಎರಡು ಹೆಡ್ ರೆಸ್ಟ್

ವೈಶಿಷ್ಟ್ಯ
ಐ20 ಆವೃತ್ತಿಗಳಲ್ಲಿರುವಂತೆಯೇ ಡೇ ಟೈಮ್ ಎಲ್‌ಇಡಿ ಹೆಡ್ ಲೈಟ್ ಆಳವಡಿಸಲಾಗುವುದು.

ಫೇಸ್‌ಲಿಫ್ಟ್ ವರ್ಷನ್
ಫೇಸ್‌ಲಿಫ್ಟ್ ವರ್ಷನ್ ಪಡೆದುಕೊಳ್ಳಲಿರುವ ಹ್ಯುಂಡೈ ವರ್ನಾ ಸದ್ಯದಲ್ಲೇ ಮಾರುಕಟ್ಟೆಗೆ ಅಪ್ಪಳಿಸುವ ನಿರೀಕ್ಷೆಯಿದೆ.

ಪ್ರಕಟಣೆ
ಈ ಎಲ್ಲದರ ಬಗ್ಗೆ ಕಂಪನಿಯಿಂದ ಸದ್ಯದಲ್ಲೇ ಅಧಿಕೃತ ಪ್ರಕಟಣೆ ಘೋಷಣೆಯಾಗುವ ನಿರೀಕ್ಷೆಯಿದೆ.


Click it and Unblock the Notifications








