ಅಮೇಜ್, ಡೀಜೈರ್ ಮೀರಿಸಿತೇ ಹ್ಯುಂಡೈ ಎಕ್ಸ್‌ಸೆಂಟ್?
ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು, ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಹಾಗೂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಹೋಂಡಾ ಅಮೇಜ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.
ಹಾಗಿರಬೇಕೆಂದರೆ ನೀವೇಕೆ ಹ್ಯುಂಡೈ ಎಕ್ಸ್‌ಸೆಂಟ್ ಪರಿಗಣಿಸಬೇಕು ಎಂಬುದರ ಕುರಿತಾಗಿ ಐದು ಮುಖ್ಯಾಂಶಗಳ ಬಗ್ಗೆ ಈ ಲೇಖನದ ಮುಖಾಂತರ ತಿಳುವಳಿಕೆ ಮಾಡುವ ಪ್ರಯತ್ನ ಮಾಡಲಿದ್ದೇವೆ. ನಿಮ್ಮ ಮಾಹಿತಿಗಾಗಿ, ಗ್ರಾಂಡ್ ಐ10 ತಲಹದಿಯಲ್ಲಿ ರೂಪುಗೊಂಡಿರುವ ಎಕ್ಸ್‌ಸೆಂಟ್ ಸ್ಟೈಲಿಷ್, ತಾಜಾ ವಿನ್ಯಾಸವನ್ನು ಕಾಪಾಡಿಕೊಂಡಿದೆ.

ಬ್ರಾಂಡ್ ಹೆಸರು
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಎಕ್ಸ್‌ಸೆಂಟ್ ಮುಖಾಂತರ ಹ್ಯುಂಡೈ ತನ್ನ ಐಕಾನಿಕ್ ಆಸೆಂಟ್ ಬ್ರಾಂಡ್ ಅನ್ನು ಜೀವಂತವಾಗಿರಿಕೊಳ್ಳುವ ಪ್ರಯತ್ನ ಮಾಡಿದೆ. ಅಲ್ಲದೆ ಐ10, ಐ20, ವರ್ನಾ ಹಾಗೂ ಇತ್ತೀಚೆಗಿನ ಗ್ರಾಂಡ್ ಐ10 ಯಶಸ್ಸಿನ ಬಳಿಕ ನಾಲ್ಕು ಮೀಟರ್ ಒಳಗಿನ ಎಕ್ಸ್‌ಸೆಂಟ್ ಸಹ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳುವ ನಂಬಿಕೆಯನ್ನು ಸಂಸ್ಥೆ ಹೊಂದಿದೆ.

ವಿನ್ಯಾಸ
ಸಾಮಾನ್ಯವಾಗಿ ಹ್ಯುಂಡೈ ಕಾರುಗಳನ್ನು ಖರೀದಿಸುವಾಗ ಗ್ರಾಹಕರು, ಬೆಲೆಗಿಂತಲೂ ಮಿಗಿಲಾಗಿ ವಿನ್ಯಾಸಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರೆ. ಅಷ್ಟಕ್ಕೂ ಹ್ಯುಂಡೈ ಎಕ್ಸ್‌ಸೆಂಟ್ ಅತ್ಯಾಕರ್ಷಕ ವಿನ್ಯಾಸ ಹೊಂದಿಲದಿದ್ದರೂ, ಮಾರುತಿ ಡಿಜೈರ್ ಹಾಗೂ ಹೋಂಡಾ ಅಮೇಜ್ ಆವೃತ್ತಿಗಳನ್ನು ಮೆಟ್ಟಿ ನಿಲ್ಲುವ ತಾಕತ್ತನ್ನು ಹೊಂದಿದೆ.

ಎಂಜಿನ್ ಆಯ್ಕೆ
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹ್ಯುಂಡೈ ಎಕ್ಸ್‌ಸೆಂಟ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದು 1.2 ಲೀಟರ್ ಕಪ್ಪ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಹಾಗೂ 1.1 ಯು ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಇವೆರಡು ಅನುಕ್ರಮವಾಗಿ ಎಆರ್‌ಎಐ ಮಾನ್ಯತೆ ಪ್ರಕಾರ 19.1 ಹಾಗೂ 24.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಗೇರ್ ಬಾಕ್ಸ್
ಎಂಜಿನ್‌ಗಳಂತೆಯೇ ಎರಡು ಟ್ರಾನ್ಸ್‌ಮಿಷನ್ (ಗೇರ್ ಬಾಕ್ಸ್) ಆಯ್ಕೆಗಳಲ್ಲೂ ಹ್ಯುಂಡೈ ಎಕ್ಸ್‌ಸೆಂಟ್ ಲಭ್ಯವಿರುತ್ತದೆ. ಇಲ್ಲಿ ಪೆಟ್ರೋಲ್ ನಿಯಂತ್ರಿತ ಎಕ್ಸ್‌ಸೆಂಟ್ 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಅಂತೆಯೇ ಡೀಸೆಲ್ ಎಂಜಿನ್ 5 ಸ್ಪೇಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ದರ ಹಾಗೂ ವೆರಿಯಂಟ್
ಅಂತಿಮವಾಗಿ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಿರುವುದು ಸಹ ಹ್ಯುಂಡೈ ಎಕ್ಸ್‌ಸೆಂಟ್‌ಗೆ ಮುನ್ನಡೆಯಾಗಿ ಪರಿಣಮಿಸಿಲಿದೆ.
ಪೆಟ್ರೋಲ್ ವೆರಿಯಂಟ್: (ಲಕ್ಷ ರು.ಗಳಲ್ಲಿ)
ಬೇಸ್ - 4.66
ಎಸ್ - 5.32
ಎಸ್ (ಒ) - 5.57
ಎಸ್‌ಎಕ್ಸ್ - 6.22
ಎಸ್‌ಎಕ್ಸ್ (ಒ) - 6.47
ಎಸ್ (ಒ) ಆಟೋಮ್ಯಾಟಿಕ್ - 6.29
ಎಸ್ಎಕ್ಸ್ (ಒ) ಆಟೋಮ್ಯಾಟಿಕ್ - 7.19
ಡೀಸೆಲ್ ವೆರಿಯಂಟ್: (ಲಕ್ಷ ರು.ಗಳಲ್ಲಿ)
ಬೇಸ್ - 5.56
ಎಸ್ - 6.23
ಎಸ್ (ಒ) - 6.48
ಎಸ್‌ಎಕ್ಸ್ - 7.13
ಎಸ್‌ಎಕ್ಸ್ (ಒ) - 7.38


Click it and Unblock the Notifications








