ಲಂಬೋರ್ಗಿನಿ 50ರ ಸಂಭ್ರಮಕ್ಕೆ ಗ್ರಾಂಡ್ ಟೂರ್ ಮೆರಗು
ಜಗತ್ತಿನ ಮುಂಚೂಣಿಯ ಸೂಪರ್ ಕಾರು ತಯಾರಕಗಳಲ್ಲಿ ಒಂದಾಗಿರುವ ಲಂಬೋರ್ಗನಿ, ತನ್ನ 50ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿಯೇ ಆಚರಿಸಿಕೊಂಡಿದೆ. ತವರೂರಾದ ಇಟಲಿಯಲ್ಲಿ ಗ್ರಾಂಡ್ ಟೂರ್ ಹಮ್ಮಿಕೊಳ್ಳುವ ಮೂಲಕ ಲಂಬೋರ್ಗಿನಿ ತನ್ನ ಸೂಪರ್ ಕಾರುಗಳಿಗೆ ಮೆರಗು ನೀಡಿದೆ.
ಈ ಪ್ರತಿಷ್ಠಿತ ಈವೆಂಟ್‌ನಲ್ಲಿ ಭಾರತವನ್ನು ರೇಮಾಂಡ್ ಲಿಟಿಮಿಡ್ ಇಂಡಿಯಾ ಮುಖ್ಯಸ್ಥರಾಗಿರುವ ಗೌತಮ್ ಸಿಂಘಾನಿಯಾ ಪ್ರತಿನಿಧಿಸುತ್ತಿದ್ದಾರೆ. 29 ದೇಶಗಳ ಪ್ರತಿನಿಧಿಗಳು 350ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಪ್ರದರ್ಶನ ಮಾಡಲಾಗಿದೆ.
ಬ್ರೆಜಿಲ್ ಅತಿ ಹೆಚ್ಚು 71 ಕಾರುಗಳನ್ನು ಪ್ರದರ್ಶಿಸಿವೆ. ಇಟಲಿ ಹಾಗೂ ಸ್ವಿಜರ್ಲೆಂಡ್ ತಲಾ 30ರಷ್ಟು ಲಂಬೋರ್ಗಿನಿ ಸೂಪರ್ ಕಾರುಗಳನ್ನು ಪ್ರದರ್ಶಿಸಿತ್ತು. ಉಳಿದಂತೆ ಇಂಡೋನೇಷ್ಯಾ, ಜಪಾನ್, ಕುವೈಟ್, ಲೆಬಾನನ್, ಸಿಂಗಾಪುರ, ದಕ್ಷಿಣ ಕೊರಿಯಾ, ಟ್ಯೂನಿಷಿಯಾ ಹಾಗೂ ಉಕ್ರೇನ್ ಪ್ರತಿನಿಧಿಗಳು ಭಾಗವಹಿಸಿದ್ದರು.















Click it and Unblock the Notifications








