ಭಾರತದತ್ತ ಹೆಜ್ಜೆಯನ್ನಿಟ್ಟ ಇಟಲಿ ಸುಂದರಿ

Posted By:

ಹೌದು, ನಿಧಾನವಾಗಿ ಇಟಲಿಯ ಸುಂದರಿ ಭಾರತದತ್ತ ಹೆಜ್ಜೆಯನ್ನಿಟ್ಟಿದ್ದಾಳೆ. ಗಾಬರಿಯಾಗಬೇಡಿರಿ, ಇಟಲಿಯ ಅತಿ ದುಬಾರಿ ಕಾರು ತಯಾರಕ ಕಂಪನಿಯಾದ ಲಂಬೋರ್ಗಿನಿಯ ಅವೆಂಟಡೊರ್ ಎಲ್‌ಪಿ 700-4 ಮಾದರಿ ಭಾರತದಲ್ಲಿ ಲಾಂಚ್ ಆಗಿದೆ. ಆದರೆ ನಿರೀಕ್ಷಿಸಿದಂತೆ ಲಂಬೋರ್ಗಿನಿ ಸುಂದರಿ ತಂಬಾನೇ ದುಬಾರಿಯಾಗಿದ್ದು, ಇದರ ದೆಹಲಿ ಎಕ್ಸ್ ಶೋ ರೂಂ ದರ 4.77 ಕೋಟಿ ರೂಪಾಯಿಗಳಾಗಿವೆ.

ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯನ್ನು ಪ್ರಮುಖವಾಗಿ ಗುರಿಯಾಗಿರಿಸಿಕೊಂಡಿರುವ ಇಟಲಿಯ ಲಗ್ಷುರಿ ಹಾಗೂ ಸೂಪರ್ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾದ ಲಂಬೋರ್ಗಿನಿ ಈ ಮೂಲಕ ಹೆಚ್ಚಿನ ಪ್ರಗತಿಯನ್ನು ನಿರೀಕ್ಷಿಸುತ್ತಿದೆ.

ಅಂದ ಹಾಗೆ 2012ನೇ ಸಾಲಿನಲ್ಲಿ ಲಂಬೋರ್ಗಿನಿ ಅವೆಂಟಡೊರ್ ದೇಶದ ಮಾರಾಟದಲ್ಲಿ ಶೇಕಡಾ 21ರಷ್ಟು ಭರ್ಜರಿ ಪ್ರಗತಿ ಸಾಧಿಸಿದೆ. ಇದೀಗ ಜಗತ್ತಿನಾದ್ಯಂತ ಭಾರಿ ಬೇಡಿಕೆ ಕಂಡುಬರುತ್ತಿರುವ ಅವೆಂಟಡೊರ್ ಎಲ್‌ಪಿ 700-4 ರೋಡ್‌ಸ್ಟರ್ ಬಿಡುಗಡೆಗೊಳಿಸಿದೆ.

Lamborghini Aventador LP 700-4

ಲಂಬೋರ್ಗಿನಿ ಅವೆಂಟಡೊರ್‌ನಲ್ಲಿ ವೇಗತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನೀವು ಸ್ಪೀಡ್ ಅಭಿಮಾನಿಯಾಗಿದ್ದರೆ ಖಂಡಿತವಾಗಿಯೂ ಇದರ ನಯವಾದ ಗೇರ್ ಬದಲಾವಣೆಗಳು ಗಮನ ಸೆಳೆಯಲಿದೆ.

Lamborghini Aventador LP 700-4

ಲಂಬೋರ್ಗಿನಿ ಅವೆಂಟಡೊರ್ ಎಲ್‌ಪಿ 700-4 ಸೂಪರ್ ಕಾರು 12 ಸಿಲಿಂಡರ್ 6.5 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

Lamborghini Aventador LP 700-4

ಈ ಬಹುನಿರೀಕ್ಷಿತ ಕಾರು ಪ್ರತಿ ಗಂಟೆಗೆ ಗರಿಷ್ಠ 350ಕ್ಕೂ ಹೆಚ್ಚು ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

Lamborghini Aventador LP 700-4

ಹಾಗೆಯೇ ಕೇವಲ ಮೂರು ಸೆಕೆಂಡುಗಳಲ್ಲಿ 0ರಿಂದ 100 ಕೀ.ಮೀ ತನಕ ವೇಗ ವರ್ಧಿಸುವ ಶಕ್ತಿ ಹೊಂದಿದೆ.

Lamborghini Aventador LP 700-4

ಹಾಗಿದ್ದರೂ ಈ ಇಟಲಿಯ ಸುಂದರಿ ದರ ಮಾತ್ರ ಕೊಂಚ ದುಬಾರಿಯಾಗಿದ್ದು, ಭಾರತೀಯ ರುಪಾಯಿ ಪ್ರಕಾರ ಐದು ಕೋಟಿ ಅಸುಪಾಸಿನಲ್ಲಿರಲಿದೆ.

Lamborghini Aventador LP 700-4

ಲಂಬೋರ್ಗಿನಿ ಅವೆಂಟಡೊರ್

Lamborghini Aventador LP 700-4

ಲಂಬೋರ್ಗಿನಿ ಅವೆಂಟಡೊರ್

Lamborghini Aventador LP 700-4

ಲಂಬೋರ್ಗಿನಿ ಅವೆಂಟಡೊರ್

Lamborghini Aventador LP 700-4

ಲಂಬೋರ್ಗಿನಿ ಅವೆಂಟಡೊರ್

Lamborghini Aventador LP 700-4

ಲಂಬೋರ್ಗಿನಿ ಅವೆಂಟಡೊರ್

Lamborghini Aventador LP 700-4

ಲಂಬೋರ್ಗಿನಿ ಅವೆಂಟಡೊರ್

Lamborghini Aventador LP 700-4

ಲಂಬೋರ್ಗಿನಿ ಅವೆಂಟಡೊರ್

English summary
Lamborghini has launched the Aventador LP 700-4 Roadster in India. Is it affordable? Definitely if you are one who doesn't mind having huge pot-holes in your trousers, the new Aventador roadster will cost you a staggering INR 4.77 crores (ex-showroom, New delhi).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark