ಲಂಬೋ ಹ್ಯುರಕೇನ್ ಸೆಪ್ಟೆಂಬರ್ ಲಾಂಚ್; ಬೆಂಗ್ಳೂರಲ್ಲಿ ಶೋ ರೂಂ

By Nagaraja

ಇಟಲಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೋರ್ಗಿನಿ, ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಬಹುನಿರೀಕ್ಷಿತ ಹ್ಯುರಕೇನ್ ಸೂಪರ್ ಕಾರನ್ನು ಭಾರತದಲ್ಲಿ ಲಾಂಚ್ ಮಾಡಲಿದೆ. ನಿಮ್ಮ ಮಾಹಿತಿಗಾಗಿ, ಪ್ರಸ್ತುತ ಕಾರು ಲಂಬೋರ್ಗಿನಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಗಲರ್ಡೊಗೆ ಉತ್ತರಾಧಿಕಾರಿಯಾಗಲಿದೆ.

ವಿಶ್ವದ್ಯಾಂತ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಗಲರ್ಡೊ ಮಾರಾಟವನ್ನು ನಿಲುಗಡೆಗೊಳಿಸಿದ್ದ ಲಂಬೋರ್ಗಿನಿ ಈ ಸ್ಥಾನಕ್ಕೆ ಹ್ಯುರಕೇನ್‌ವೆಂಬ ನೂತನ ಮಾದರಿಯನ್ನು ಪರಿಚಯಿಸಿತ್ತು. ಇಲ್ಲಿ ಇನ್ನೂ ವಿಶೇಷ ಸಂಗತಿಯೆಂದರೆ ಲಂಬೋರ್ಗಿನಿ ತನ್ನ ಮೂರನೇ ಶೋ ರೂಂ ಅನ್ನು ಬೆಂಗಳೂರಿನಲ್ಲಿ ತೆರೆದುಕೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಲಂಬೋ ಹ್ಯುರಕೇನ್ ಸೆಪ್ಟೆಂಬರ್ ಲಾಂಚ್; ಬೆಂಗ್ಳೂರಲ್ಲಿ ಶೋ ರೂಂ

ಈಗಾಗಲೇ ದೆಹಲಿ ಹಾಗೂ ಮುಂಬೈ ಮಹಾನಗರಗಳಲ್ಲಿ ಶೋ ರೂಂ ಹೊಂದಿರುವ ಲಂಬೋರ್ಗಿನಿ ತನ್ನ ಮೂರನೇ ಘಟಕವನ್ನು ಬೆಂಗಳೂರಿನಲ್ಲಿ ತೆರೆದುಕೊಳ್ಳಲಿದೆ. ಇದು ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ತೆರೆದುಕೊಳ್ಳಲಿದೆ.

ಲಂಬೋ ಹ್ಯುರಕೇನ್ ಸೆಪ್ಟೆಂಬರ್ ಲಾಂಚ್; ಬೆಂಗ್ಳೂರಲ್ಲಿ ಶೋ ರೂಂ

ವರದಿಗಳ ಪ್ರಕಾರ 3.4 ಕೋಟಿ ರು.ಗಳಷ್ಟು ದುಬಾರಿಯ ಹ್ಯುರಕೇನ್ ಸೂಪರ್ ಕಾರು, ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗಲಿದ್ದು ಈಗಾಗಲೇ 1,000ದಷ್ಟು ಬುಕ್ಕಿಂಗ್ ದಾಖಲಾಗಿದೆ.

ಲಂಬೋ ಹ್ಯುರಕೇನ್ ಸೆಪ್ಟೆಂಬರ್ ಲಾಂಚ್; ಬೆಂಗ್ಳೂರಲ್ಲಿ ಶೋ ರೂಂ

ಈ ಬಗ್ಗೆ ಮಾತನಾಡಿರುವ ಲಂಬೋರ್ಗಿನಿ ಇಂಡಿಯಾ ಕಾರ್ಯಾಚರಣೆಯ ಮುಖ್ಯಸ್ಥ ಪವನ್ ಶೆಟ್ಟಿ, ಭಾರತದಿಂದಲೂ ಬುಕ್ಕಿಂಗ್ ದಾಖಲಾಗಿದೆ ಎಂದಿದ್ದಾರೆ. ಅಲ್ಲದೆ ಬುಕ್ಕಿಂಗ್‌ ಮಾಡುತ್ತಿರುವವರ ಪೈಕಿ ಬಹುತೇಕರು ಉದ್ಯಮಿಗಳಾಗಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.

ಲಂಬೋ ಹ್ಯುರಕೇನ್ ಸೆಪ್ಟೆಂಬರ್ ಲಾಂಚ್; ಬೆಂಗ್ಳೂರಲ್ಲಿ ಶೋ ರೂಂ

ಇತರ ಐಷಾರಾಮಿ ಕಾರು ತಯಾರಕ ಸಂಸ್ಥೆಗಳಿಗೆ ಹೋಲಿಸಿದರೆ ಲಂಬೋರ್ಗಿನಿಗೆ ಭಾರತದಲ್ಲಿ ಬಿಗುವಾದ ಸಾನಿಧ್ಯವಿಲ್ಲ. ಇದು ಜಾಗತಿಕ ಮಾರಾಟದ ಶೇಕಡಾ 1ರಷ್ಟು ಮಾರಾಟವನ್ನು ಭಾರತದಿಂದ ಹೊಂದಿದೆ. ಹಾಗಿದ್ದರೂ ಬೆಳೆಯುತ್ತಿರುವ ಭಾರತ ಮಾರುಕಟ್ಟೆ ಬಗ್ಗೆ ಅತೀವ ಕಾಳಜಿ ವಹಿಸುತ್ತಿರುವ ಲಂಬೋರ್ಗಿನಿ ಟಾಪ್ 10 ಮಾರುಕಟ್ಟೆಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನಿರಿಸಿಕೊಂಡಿದೆ.

ಲಂಬೋ ಹ್ಯುರಕೇನ್ ಸೆಪ್ಟೆಂಬರ್ ಲಾಂಚ್; ಬೆಂಗ್ಳೂರಲ್ಲಿ ಶೋ ರೂಂ

ಸಂಸ್ಥೆಯು 2013ನೇ ಸಾಲಿನಲ್ಲಿ 22 ಯುನಿಟ್‌ಗಳಷ್ಟೇ ದೇಶದಲ್ಲಿ ಮಾರಾಟ ಮಾಡಿದ್ದರೂ ಸಹ ಹಿಂದಿನ ಸಾಲಿಗೆ ಹೋಲಿಸಿದರೆ ಶೇಕಡಾ 29ರಷ್ಟು ವೃದ್ಧಿ ದಾಖಲಿಸಿದೆ.

ಲಂಬೋ ಹ್ಯುರಕೇನ್ ಸೆಪ್ಟೆಂಬರ್ ಲಾಂಚ್; ಬೆಂಗ್ಳೂರಲ್ಲಿ ಶೋ ರೂಂ

ಅಂದ ಹಾಗೆ ಲಂಬೊರ್ಗಿನಿ ಹ್ಯುರಕೇನ್ 5.2 ಲೀಟರ್ ವಿ10 ಫೋರ್ ಸಿಲಿಂಡರ್‌ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 610 ಪಿಎಸ್ ಪವರ್ (560 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Wednesday, May 14, 2014, 10:25 [IST]
English summary
Lamborghini, like all luxury car manufacturers in India, has a small presence in India. However, unlike its competitors, this Italian supercar brand shown strong growth in the recent past.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+