ಯುದ್ಧ ನೌಕೆಯಲ್ಲಿ ಲಂಬೊರ್ಗಿನಿ ಸೂಪರ್ ಕಾರಿನ ಬಲ ಪ್ರದರ್ಶನ
ಇಟಲಿ ಮೂಲದ ಸೂಪರ್ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಲಂಬೊರ್ಗಿನಿ, ತನ್ನ ಅತಿ ನೂತನ ವೆನನೊ ರೋಡಸ್ಟರ್ ಸೂಪರ್ ಕಾರನ್ನು ಲೋಕರ್ಪಣೆ ಮಾಡಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಅಬುದಾಬಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಲಂಬೊರ್ಗಿನಿ ಬಲ ಪ್ರದರ್ಶನ ನಡೆಸಲಾಯಿತು. ವಿಶೇಷವೆಂದರೆ ವಿಮಾನ ವಾಹಕ ಯುದ್ಧ ನೌಕೆಯಲ್ಲಿ ಲಂಬೊರ್ಗಿನಿ ಕಾರನ್ನು ಬಿಡುಗಡೆಗೊಳಿಸಲಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ ಹೊಸದಾಗಿ ಪರಿಚಯಗೊಂಡಿರುವ ಲಂಬೊರ್ಗಿನಿ ವೆನನೊ ರೊಡ್‌ಸ್ಟರ್ ಸೂಪರ್ ಕಾರು ಸಹ ಯುದ್ಧ ವಿಮಾನಗಳಿಂದಲೇ ಸ್ಫೂರ್ತಿ ಪಡೆದು ರಚಿಸಲಾಗಿದೆ.

ಗಾಯಕಿ ಹಾಗೂ ನಟಿ ಎಲೆನಾ ಬೊನೆಲ್ಲಿ ಈ ಅತ್ಯಾಕರ್ಷಕ ಕಾರನ್ನು ಬಿಡುಗಡೆ ಮಾಡಿದ್ದಾರೆ. 2006ರಲ್ಲಿ ಇಟಲಿ ಫುಟ್ಭಾಲ್ ತಂಡದ ನಾಯಕರಾಗಿದ್ದ ವಿಶ್ವ ಚಾಂಪಿಯನ್ ಫ್ಯಾಬಿಯೊ ಕ್ಯಾನವೆರೊ ಕೂಡಾ ಉಪಸ್ಥಿತರಿದ್ದರು.

ಲಂಬೊರ್ಗಿನಿ ವೆನನೊ ರೊಡ್‌ಸ್ಟರ್‌ನ ಒಂಬತ್ತು ಯುನಿಟ್‌ಗಳ ಮಾತ್ರ ಉತ್ಪಾದನೆಯಾಗಲಿದೆ. ಅಲ್ಲದೆ ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಈ ಸೂಪರ್ ಕಾರುಗಳಿಗೆ ಅತಿ ಹೆಚ್ಚು ಬೇಡಿಕೆಯಿರುವುದರಿಂದಲೇ ಲೋಕರ್ಪಣೆಗಾಗಿ ಇದೇ ಪ್ರದೇಶವನ್ನು ಆಯ್ಕೆ ಮಾಡಲಿದೆ.

ಇಟಲಿಯ ಈ ಕಾರು ಸಂಸ್ಥೆಯ ಪ್ರಕಾರ ಪ್ರಸ್ತುತ ಕಾರು ಲಂಬೊರ್ಗಿನಿಗಳ ಪೈಕಿ ಹೆಚ್ಚು ಶಕ್ತಿಯುತವಾಗಿರಲಿದೆ. ಪ್ರಸ್ತುತ ಇಟಲಿ ಕಾರು ಕೈಗಾರಿಕೆಯನ್ನು ಪ್ರತಿನಿಧಿಸಲು ಸಾಧ್ಯವಾಗಿರುವುದು ಹೆಮ್ಮೆ ತಂದಿದೆ ಎಂದಿದೆ.

ಜಗತ್ತಿನ ಅಸಾಧಾರಣ ನಿರ್ವಹಣೆಯ ಕಾರುಗಳ ಪೈಕಿ ಲಂಬೊರ್ಗಿನಿ ವೆನನೊ ರೊಡ್‌ಸ್ಟರ್ ಎಕ್ಸ್‌ಕ್ಲೂಸಿವ್ ಆವೃತ್ತಿಯಾಗಿರಲಿದೆ. ಇದು 6.5 ಲೀಟರ್ ವಿ12 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 740 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸೆಮಿ-ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜತೆ ಐದು ಶಿಫ್ಟ್ ವಿಧಗಳನ್ನು ಪಡೆದಿದೆ.

ಪ್ರಸ್ತುತ ಸೂಪರ್ ಕಾರು ಕೇವಲ 2.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 354 ಕೀ.ಮೀ. ವೇಗದಲ್ಲಿ ಚಲಿಸಲಿದೆ.

ಬರೋಬ್ಬರಿ 4.47 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 33 ಕೋಟಿಗಿಂತಲೂ ದುಬಾರಿಯಾಗಿರುವ ಈ ಸೂಪರ್ ಕಾರು ಸಾಮಾನ್ಯ ಲಂಬೊರ್ಗಿನಿ ಅವೆಂಟಡೊರ್ ಆವೃತ್ತಿಗಿಂತಲೂ ಹತ್ತು ಪಟ್ಟು ದುಬಾರಿಯಾಗಿರಲಿದೆ.

ಲಂಬೊರ್ಗಿನಿ 50ನೇ ವರ್ಷಾರಣೆಯ ಅಂಗವಾಗಿ ಪ್ರಸ್ತುತ ಕಾರಿನ ಸೀಮಿತ ಆವೃತ್ತಿ ಬಿಡುಗಡೆಯಾಗಿದೆ.


Click it and Unblock the Notifications








