9 ಸೀಟುಗಳ ನ್ಯೂ ಮಹೀಂದ್ರ ಕ್ಸೈಲೋ ಲಾಂಚ್

By Nagaraja

ಹೆಚ್ಚಿನ ಸದಸ್ಯರಿರುವ ಕುಟುಂಬಗಳಿಗೆ ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ, ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ನೂತನ ಒಂಬತ್ತು ಸೀಟುಗಳ ಕ್ಸೈಲೋ ಲಾಂಚ್ ಮಾಡಿದೆ.

ನೂತನ ಕ್ಸೈಲೋ ಮುಂಭಾಗದಲ್ಲಿ ಹೊಸತಾಗಿರುವ ವಿನ್ಯಾಸ ಪಡೆದುಕೊಂಡಿದೆ. ಈ ಮೂಲಕ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನು ಮಹೀಂದ್ರ ಹೊಂದಿದೆ.

ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಸೆಗ್ಮೆಂಟ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಕ್ಸೈಲೋದ ಈ ನೂತನ ವೆರಿಯಂಟ್ ಡಿ2 ಮ್ಯಾಕ್ಸ್ (D2 MAXX) ಎಂದು ಅರಿಯಲ್ಪಡಲಿದೆ.

9 ಸೀಟುಗಳ ನ್ಯೂ ಮಹೀಂದ್ರ ಕ್ಸೈಲೋ ಲಾಂಚ್

9 ಸೀಟುಗಳ ಮಹೀಂದ್ರ ಕ್ಸೈಲೋ ಡಿ2 ಮ್ಯಾಕ್ಸ್ ಬಿಎಸ್III ವೆರಿಯಂಟ್ ಮುಂಬೈ ಎಕ್ಸ್ ಶೋ ರೂಂ ದರ 7.12 ಲಕ್ಷ ರು.ಗಳಾಗಿವೆ. ಇದೇ ಮೊದಲ ಬಾರಿಗೆ ಕ್ಸೈಲೋ ಒಂಬತ್ತು ಸೀಟುಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

9 ಸೀಟುಗಳ ನ್ಯೂ ಮಹೀಂದ್ರ ಕ್ಸೈಲೋ ಲಾಂಚ್

ಅಂತೆಯೇ ಫ್ರಂಟ್ ಗ್ರಿಲ್‌ ಹೆಚ್ಚು ಆಕರ್ಷಕವಾಗಿದೆ. ಇದು ಇತರ ಕ್ಸೈಲೋ ಆವೃತ್ತಿಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸ ಪಡೆದುಕೊಂಡಿದೆ.

9 ಸೀಟುಗಳ ನ್ಯೂ ಮಹೀಂದ್ರ ಕ್ಸೈಲೋ ಲಾಂಚ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 2.5 ಲೀಟರ್ mDI CRDe ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 95 ಪಿಎಸ್ ಪವರ್ (220 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

9 ಸೀಟುಗಳ ನ್ಯೂ ಮಹೀಂದ್ರ ಕ್ಸೈಲೋ ಲಾಂಚ್

ಇನ್ನು ಭಾರತ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಪ್ರಕಾರ ಕ್ಸೈಲೋ ಪ್ರತಿ ಲೀಟರ್‌ಗೆ 14.95 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಪ್ರಸ್ತುತ ಬಿಎಸ್IV ಎಂಜಿನ್ ಆಯ್ಕೆ ಲಭ್ಯವಿಲ್ಲದಿದ್ದರೂ ನಿಕಟ ಭವಿಷ್ಯದಲ್ಲೇ ಲಭ್ಯವಾಗಲಿದೆ.

9 ಸೀಟುಗಳ ನ್ಯೂ ಮಹೀಂದ್ರ ಕ್ಸೈಲೋ ಲಾಂಚ್

ದೂರ ಪ್ರಯಾಣ ಅಥವಾ ಪ್ರವಾಸ ಕೇಂದ್ರಗಳಿಗೆ ತೆರಳಲು ಕ್ಸೈಲೋ ಉತ್ತಮ ಆಯ್ಕೆಯಾಗಿರಲಿದೆ. ಹಾಗೆಯೇ ಹೆಚ್ಚಿನ ಲಗ್ಗೇಜ್ ಹೊತ್ತೊಯ್ಯುವ ಸಾಮರ್ಥ್ಯ ಕೂಡಾಹೊಂದಿದೆ.

More from DriveSpark

Article Published On: Wednesday, October 16, 2013, 10:56 [IST]
English summary
Mahindra has announced the launch of the Xylo D2 MAXX with 9 seats option priced at Rs.7.12 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+