ಇಕೊಸ್ಪೋರ್ಟ್‌ಗೆ ಟಕ್ಕರ್ ನೀಡಲು ಮಹೀಂದ್ರ ಎಸ್‌ಯುವಿ ಕಣಕ್ಕೆ

By Nagaraja

ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಆದರೆ ಸೂಕ್ತ ಯೋಜನೆಯ ಕೊರತೆಯಿಂದಾಗಿ ಇತ್ತೀಚೆಗಿನ ದಿನಗಳಲ್ಲಿ ಫೋರ್ಡ್ ಇಕೊಸ್ಪೋರ್ಟ್ ಹಿನ್ನಡೆ ಅನುಭವಿಸುವಂತಾಗಿದೆ.

ಪ್ರಸಕ್ತ ಸಾಲಿನಲ್ಲಿ ಮಹೀಂದ್ರದಿಂದ ಕಾರುಗಳ ಹಬ್ಬ

ಈ ಎಲ್ಲ ಮಾರುಕಟ್ಟೆ ಸ್ಥಿತಿಗತಿಗಳನ್ನು ಸ್ಪಷ್ಟವಾಗಿ ಅವಲೋಕಿಸಿರುವ ದೇಶದ ಎಸ್‌ಯುವಿ ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ (ಎಂ ಆಂಡ್ ಎಂ), ಕಾಂಪಾಕ್ಟ್ ಎಸ್‌ಯುವಿ ಕಾರೊಂದನ್ನು ರಸ್ತೆಗಿಳಿಸುವ ಮಹತ್ತರ ಯೋಜನೆಯೊಂದನ್ನು ಹೊಂದಿದೆ.

ಫೋರ್ಡ್ ಇಕೊಸ್ಪೋರ್ಟ್ ಪ್ರತಿಸ್ಪರ್ಧಿ

ಫೋರ್ಡ್ ಇಕೊಸ್ಪೋರ್ಟ್ ಪ್ರತಿಸ್ಪರ್ಧಿ

ಇದು ಪ್ರಮುಖವಾಗಿಯೂ ಫೋರ್ಡ್‌ನ ಇಕೊಸ್ಪೋರ್ಟ್ ಕಾರಿಗೆ ನೇರ ಸ್ಪರ್ಧಾಳುವಾಗಿರಲಿದೆ. ಸ್ಯಾಂಗ್ಯೂಂಗ್ ಜತೆ ಪಾಲುದಾರಿಕೆ ಹೊಂದಿರುವ ಮಹೀಂದ್ರ 2015ರ ವೇಳೆಯಾಗುವ ನೂತನ ಕಾಂಪಾಕ್ಟ್ ಕಾರನ್ನು ಮಾರುಕಟ್ಟೆಗಿಳಿಸಲಿದೆ.

ಎಸ್102

ಎಸ್102

ಎಸ್102 ಕೋಡ್ ಪಡೆದುಕೊಂಡಿರುವ ನೂತನ ಕಾರು ಮಹೀಂದ್ರ-ಸ್ಯಾಂಗ್ಯೊಂಗ್ ಜಂಟಿ ತಲಹದಿಯಲ್ಲಿ ರೂಪುಗೊಳ್ಳಲಿದೆ. ಸ್ಯಾಂಗ್ಯೊಂಗ್‌ನ ಎಕ್ಸ್100 ಸ್ಫೂರ್ತಿ ಪಡೆದುಕೊಂಡು ಎಸ್102 ರೂಪಿಸಲಾಗುತ್ತಿದೆ.

2015ರ ವೇಳೆಗೆ ಮಾರುಕಟ್ಟೆಗೆ

2015ರ ವೇಳೆಗೆ ಮಾರುಕಟ್ಟೆಗೆ

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ 2015ರ ವೇಳೆಯಾಗುವಾಗುವಾಗ ನೂತನ ಕಾರು ಜಾಗತಿಕ ಲಾಂಚ್ ಕಾಣಲಿದೆ. ಇದು ಮಹೀಂದ್ರದ ನಾಶಿಕ್ ಘಟಕದಲ್ಲಿ ಉತ್ಪಾದನೆಯಾಗಲಿದೆ.

ಎಂಜಿನ್ ಅಭಿವೃದ್ಧಿ
 

ಎಂಜಿನ್ ಅಭಿವೃದ್ಧಿ

ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಮಹೀಂದ್ರ-ಸ್ಯಾಂಗ್ಯೊಂಗ್ 1 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿದ್ದು, ಇದು ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ಸಕ್ಷಮವಾಗಿರಲಿದೆ. ಇದು ಫೋರ್ಡ್‌ನ ಇಕೊಬೂಸ್ಟ್ ಎಂಜಿನ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ.

ಗರಿಷ್ಠ ತಂತ್ರಗಾರಿಕೆ

ಗರಿಷ್ಠ ತಂತ್ರಗಾರಿಕೆ

ಎಂಜಿನ್ ಅಭಿವೃದ್ಧಿ ಕಾರ್ಯವು ದಕ್ಷಿಣ ಕೊರಿಯಾದಲ್ಲಿ ಆಗಲಿದೆ. ಈ ಮೂಲಕ ಎಂಜಿನ್‌ ತಂತ್ರಗಾರಿಕೆಯ ಸರಣಿಯನ್ನು ಬಿಡುಗಡೆ ಮಾಡಲು ಸಂಸ್ಥೆ ಯೋಜನೆ ಹೊಂದಿದೆ.

ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಸಂಸ್ಥೆಯು ಈಗಾಗಲೇ ಹೊಸತಾದ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅಭಿವೃದ್ಧಿಪಡಿಸಿದ್ದು, ಮಹೀಂದ್ರ ಹಾಗೂ ಸ್ಯಾಂಗ್ಯೊಂಗ್ ಉತ್ಪನ್ನಗಳಲ್ಲಿ ಬಳಕೆಯಾಗುತ್ತಿದೆ.

Most Read Articles
 
English summary
India's largest utility vehicle maker, Mahindra & Mahindra (M&M) is working on a compact sports utility vehicle to take on the Ford EcoSport.
Please Wait while comments are loading...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X