ಮುಂದಿನ ವರ್ಷ ಬರಲಿದೆ ಆಟೋಮ್ಯಾಟಿಕ್ ಎಕ್ಸ್‌ಯುವಿ500
ದೇಶದ ಬಹಳಷ್ಟು ಕಾರು ಪ್ರೇಮಿಗಳು ಮಹೀಂದ್ರ ಎಕ್ಸ್‌ಯುವಿ500 ಕಾರಲ್ಲೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ತಂತ್ರಜ್ಞಾನವನ್ನು ನಿರೀಕ್ಷಿಸುತ್ತಿದ್ದಾರೆ.
2014 ಆಟೋ ಎಕ್ಸ್ ಪೋ
ಅಂತವರ ಕನಸು ಸದ್ಯದಲ್ಲೇ ನನಸಾಗಲಿದ್ದು, ಹೌದು, ಮುಂದಿನ ವರ್ಷ ಅಂದರೆ 2015ರಲ್ಲಿ ಮಹೀಂದ್ರ ಎಕ್ಸ್‌ಯುವಿ500 ಆಟೋಮ್ಯಾಟಿಕ್ ಕಾರು ಆಗಮನವಾಗುವುದು ಬಹುತೇಕ ಖಚಿತವಾಗಿದೆ.

ದೇಶದಲ್ಲಿ ಎಸ್‌ಯುವಿ ಕಾರು ಉತ್ಪಾದನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಹೀಂದ್ರ, ಎಕ್ಸ್‌ಯುವಿ500 ಅತಿ ಹೆಚ್ಚು ಬೇಡಿಕೆಯನ್ನು ಗಿಟ್ಟಿಸಿಕೊಂಡಿದೆ. ಆದರೆ ಇಷ್ಟೊಂದು ಜನಪ್ರಿಯವಾಗಿರುವ ಹೊರತಾಗಿಯೂ ಇದುವರೆಗೂ ಆಟೋಮ್ಯಾಟಿಕ್ ತಂತ್ರಗಾರಿಕೆ ಲಭ್ಯವಾಗಿರಲಿಲ್ಲ. ಇದು ಕಾರು ಪ್ರೇಮಿಗಳಲ್ಲಿ ನಿರಾಸೆಗೆ ಕಾರಣವಾಗಿತ್ತು.

ವರದಿಗಳ ಪ್ರಕಾರ 2015ರ ವೇಳೆಗೆ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ, 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಇದೇ ಗೇರ್ ಬಾಕ್ಸ್ ಎಕ್ಸ್‌ಯುವಿ500 ಕಾರಿನಲ್ಲೂ ಬಳಕೆಯಾಗಲಿದೆ.

ಹೌದು, 2015ರ ಸಾಲಿನಲ್ಲಿ ಎಕ್ಸ್‌ಯುವಿ500 ಕಾರಿನಲ್ಲಿ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಳವಡಿಸಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.

2011ನೇ ಇಸವಿಯಲ್ಲಿ ಸ್ಯಾಂಗ್ಯೊಂಗ್ ಖರೀದಿಸಿದ್ದ ಮಹೀಂದ್ರ, ಈ ಐಕಾನಿಕ್ ಸಂಸ್ಥೆ ಜತೆಗೂಡಿ ತಂತ್ರಾಂಶವನ್ನು ಹಂಚಿಕೊಳ್ಳಲಿದೆ.

ಇದಕ್ಕೂ ಮೊದಲು ಮಹೀಂದ್ರ ಕ್ವಾಂಟೊ ಕಾಂಪಾಕ್ಟ್ ಎಸ್‌ಯುವಿ ಕಾರನ್ನು 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇದರಲ್ಲೂ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪ್ರಮುಖ ಆಕರ್ಷಣೆಯಾಗಿದ್ದವು.


Click it and Unblock the Notifications








