ಸೆಲೆರಿಯೊ ಶೈನಿಂಗ್; ಅಗ್ಗವಾಯ್ತು ಮಾರುತಿ ಕಾರುಗಳು

By Nagaraja

ಹಾಗೊಂದು ವೇಳೆ ನೀವು ಕಾರುಗಳನ್ನು ಖರೀದಿಸಲು ಬಯಸುದಾದ್ದಲ್ಲಿ ಇದಕ್ಕಿಂತಲೂ ಸೂಕ್ತವಾದ ಸಮಯ ಬಹುಶ: ಇನ್ನೊಂದಿಗೂ ಸಿಗಲಾರದು. ಹೌದು, ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನೆಲ್ಲ ಆವೃತ್ತಿಗಳಿಗೆ ದರ ಕಡಿತ ಘೋಷಿಸಿದೆ.

2014 ಆಟೋ ಎಕ್ಸ್ ಪೋ

ಕೇಂದ್ರ ಸರಕಾರ ಮಂಡಿಸಿರುವ 2014-15ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ಕಾರುಗಳ ಮೇಲಿನ ಅಬಕಾರಿ ಸುಂಕವನ್ನು ಇಳಿಕೆಗೊಳಿಸಿರುವ ಬೆನ್ನಲ್ಲೇ ಮಾರುತಿಯಿಂದ ಇಂತಹದೊಂದು ನಡೆ ಕಂಡುಬಂದಿದೆ. ಇದು ಮುಂದಿನ ದಿನಗಳಲ್ಲಿ ಮಾರುತಿಗೆ ಇನ್ನಷ್ಟು ವರದಾನವಾಗಿ ಪರಿಣಮಿಸಲಿದ್ದು, ಮಾರಾಟ ಪ್ರಕ್ರಿಯೆಯನ್ನು ಉತ್ತೇಜಿಸಲಿದೆ.

ಸೆಲೆರಿಯೊ ಶೈನಿಂಗ್; ಅಗ್ಗವಾಯ್ತು ಮಾರುತಿ ಕಾರುಗಳು

ಈ ನಡುವೆ ಈಗಷ್ಟೇ ಬಿಡುಗಡೆಗೊಂಡಿರುವ ಮಾರುತಿ ಸೆಲೆರಿಯೊ ಮಿಂಚಿನ ವೇಗದಲ್ಲಿ ಬುಕ್ಕಿಂಗ್ ಗಿಟ್ಟಿಸಿಕೊಳ್ಳುತ್ತಿದ್ದು, ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

ಸೆಲೆರಿಯೊ ಶೈನಿಂಗ್; ಅಗ್ಗವಾಯ್ತು ಮಾರುತಿ ಕಾರುಗಳು

ಮಾರುತಿ ಸೆಲೆರಿಯೊದಲ್ಲಿರುವ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಇದು ನಗರ ಪ್ರದೇಶದ ವಾಹನ ದಟ್ಟಣೆಯಲ್ಲಿ ಆರಾಮದಾಯಕ ಚಾಲನೆ ಪ್ರದಾನ ಮಾಡಲಿದೆ.

ಸೆಲೆರಿಯೊ ಶೈನಿಂಗ್; ಅಗ್ಗವಾಯ್ತು ಮಾರುತಿ ಕಾರುಗಳು

ಗರಿಷ್ಠ ಇಂಧನ ಕ್ಷಮತೆಯು ಮಾರುತಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿನ ಬೇಡಿಕೆಗೆ ಕಾರಣವಾಗಿದೆ. ಹಾಗೊಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದ್ದಲ್ಲಿ ಮಾರುತಿಯ ಐಕಾನಿಕ್ ಸ್ವಿಫ್ಟ್ ಕಾರು ದಾಖಲೆಯನ್ನು ಸೆಲೆರಿಯೊ ಹಿಮ್ಮೆಟ್ಟಿಸುವ ಸಾಧ್ಯತೆಯಿದೆ.

ಸೆಲೆರಿಯೊ ಶೈನಿಂಗ್; ಅಗ್ಗವಾಯ್ತು ಮಾರುತಿ ಕಾರುಗಳು

ಮಾರುತಿಯ ನೂತನ ದರ ನೀತಿಯಂತೆ 3.90 ಲಕ್ಷ ರು.ಗಳಷ್ಟು ದುಬಾರಿಯಾಗಿದ್ದ ಸೆಲೆರಿಯೊ ಇದೀಗ 3.76 ಎಕ್ಸ್ ಶೋ ರೂಂ ದರಗಳಲ್ಲಿ ಆಗಮನವಾಗಲಿದೆ.

ಸೆಲೆರಿಯೊ ಶೈನಿಂಗ್; ಅಗ್ಗವಾಯ್ತು ಮಾರುತಿ ಕಾರುಗಳು

ಅದೇ ರೀತಿ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಎಲ್‌ಎಕ್ಸ್‌ಐ ಹಾಗೂ ವಿಎಕ್ಸ್‌ಐ ವೆರಿಯಂಟ್‌ಗಳು ಅನುಕ್ರಮವಾಗಿ 4.14 ಹಾಗೂ 4.43 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ. ಬಿಡುಗಡೆಯಾದ ಸಂದರ್ಭದಲ್ಲಿ ಇವೆರಡು ಆವೃತ್ತಿಗಳ ದರ ಅನುಕ್ರಮವಾಗಿ 4.29 ಹಾಗೂ 4.59 ಲಕ್ಷ ರು.ಗಳಿಷ್ಟಿತ್ತು.

ಸೆಲೆರಿಯೊ ಶೈನಿಂಗ್; ಅಗ್ಗವಾಯ್ತು ಮಾರುತಿ ಕಾರುಗಳು

998 ಸಿಸಿ, 3 ಸಿಲಿಂಡರ್ ಕೆ10ಬಿ ಎಂಜಿನ್ ಹೊಂದಿರುವ ಮಾರುತಿ ಸೆಲೆರಿಯೊ, ಪ್ರತಿ ಲೀಟರ್‌ಗೆ 23.1 ಕೀ.ಮೀ.ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಸೆಲೆರಿಯೊ ಶೈನಿಂಗ್; ಅಗ್ಗವಾಯ್ತು ಮಾರುತಿ ಕಾರುಗಳು

ಕೇವಲ ಸೆಲೆರಿಯೊ ಮಾತ್ರವಲ್ಲ. ಮಾರುತಿಯ ಜನಪ್ರಿಯ ಆವೃತ್ತಿಗಳಾದ ಆಲ್ಟೊ, ಸ್ವಿಫ್ಟ್, ಸ್ವಿಫ್ಟ್ ಡಿಜೈರ್, ವ್ಯಾಗನಾರ್, ರಿಟ್ಜ್, ಎರ್ಟಿಗಾ ಮತ್ತು ಆಲ್ಟೊ ಕೆ1 ದರಗಳಲ್ಲೂ ಭಾರಿ ಇಳಿಕೆಯುಂಟಾಗಿದ್ದು, 8,197 ರು.ಗಳಿಂದ 30,984 ರು.ಗಳ ವರೆಗೆ ಕಡಿತವುಂಟಾಗಿದೆ.

More from DriveSpark

Article Published On: Friday, February 21, 2014, 17:17 [IST]
English summary
Maruti Celerio, India's first production Automatic Manual Transmission hatchback, was launched earlier this month at the Auto Expo 2014 and from the very start it was evident the new hatchback would do extremely well for Maruti.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+