ಇತ್ತೀಚೆಗಷ್ಟೇ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅತಿ ನೂತನ ಸೆಲೆರಿಯೊ ಕಾರು ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಕುರಿತಾಗಿ ನಾವು ಈ ಹಿಂದೆಯೇ ವರದಿ ಮಾಡಿದ್ದೆವು.
ಮಾರುತಿ ಎ ಸ್ಟಾರ್ ಬದಲಿ ಕಾರಿನ ಹೆಸರು ಏನು ಗೊತ್ತೇ?
ಇದಕ್ಕೆ ಸೇರ್ಪಡೆಯೆಂಬಂತೆ ಸೆಲೆರಿಯೊ ಕಾರು ಕ್ಲಚ್ ರಹಿತ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ ಅಥವಾ ಸೆಮಿ ಆಟೋಮ್ಯಾಟಿಕ್) ಕಾರನ್ನು ಮಾರುತಿ ಅವಿಷ್ಕರಿಸಲಿದೆ. ಇದು ಇನ್ನಷ್ಟು ಆರಾಮದಾಯಕ ಚಾಲನಾ ಅನುಭವ ನೀಡಲಿದೆ. ಎ ಸ್ಟಾರ್ ಬದಲಿ ಕಾರಾಗಿ ಗುರುತಿಸಿಕೊಂಡಿರುವ ಸೆಲೆರಿಯೊ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವುದು ಬಹುತೇಕ ಖಚಿತವಾಗಿದೆ.
ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್
ಇದೇ ಮೊದಲ ಬಾರಿಯೆಂಬಂತೆ ದೇಶದ ಕಾರು ಇತಿಹಾಸದಲ್ಲಿ ಕ್ಲಚ್ ರಹಿತ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಅಥವಾ ಸೆಮಿ ಆಟೋಮ್ಯಾಟಿಕ್ ತಂತ್ರಜ್ಞಾನ ಕಂಡುಬರಲಿದೆ.
ಕ್ಲಚ್ ರಹಿತ ಕಾರು
ಈ ಹೊಸ ತಂತ್ರಗಾರಿಕೆಯಲ್ಲಿ ಚಾಲಕ ಕ್ಲಚ್ ಓಪರೇಟ್ ಮಾಡುವ ಅಗತ್ಯವಿರುವುದಿಲ್ಲ. ಇದು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಷ್ಟೇ ಆರಾಮ ಹಾಗೂ ಅನುಕೂಲಕರವಾಗಿದೆ.
ಮೈಲೇಜ್ ಸೂಪರ್
ಅಷ್ಟೇ ಯಾಕೆ ಇಂತಹ ಎಎಂಟಿ ಕಾರುಗಳು ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೆ ಸಮಾನವಾದ ಮೈಲೇಜ್ ನೀಡುವಲ್ಲಿ ಸಕ್ಷಮವಾಗಲಿದೆ. ಈ ಮೂಲಕ ಆಟೋಮ್ಯಾಟಿಕ್ ಕಾರುಗಳು ಕಡಿಮೆ ಮೈಲೇಜ್ ನೀಡುತ್ತಿದೆ ಎಂಬ ಅಪವಾದವನ್ನು ದೂರ ಮಾಡಲಿದೆ.
ಸ್ಮರ್ಧಾತ್ಮಕ ದರ
ಸಾಧಾರಣವಾಗಿ ನಮ್ಮ ಗಮನಕ್ಕೆ ಬಂದಿರುವಂತೆಯೇ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳ ಪ್ರಮುಖ ಹಿನ್ನಡೆ ಏನೆಂದರೆ ಕಡಿಮೆ ಇಂಧನ ಕ್ಷಮತೆ ಹಾಗೂ ಬೆಲೆ ವಿಚಾರದಲ್ಲಿ ಮ್ಯಾನುವಲ್ ಕಾರಿಗಿಂತಲೂ ಹೆಚ್ಚು ದುಬಾರಿಯಾಗಿರುವುದು. ಆದರೆ ನೂತನ ಎಎಂಟಿ ತಂತ್ರಜ್ಞಾನದ ಮುಖಾಂತರ ಹೆಚ್ಚು ಇಂಧನ ಕ್ಷಮತೆ ನೀಡುವುದಲ್ಲದೆ ಸ್ಮರ್ಧಾತ್ಮಕ ದರಗಳಲ್ಲೇ ಆಗಮಿಸಲಿದೆ.
ಗೇರ್ ಬಾಕ್ಸ್
ಹಾಗಿದ್ದರೂ ಇಂತಹ ಎಎಂಟಿ ಕಾರುಗಳು, ಮ್ಯಾನುವಲ್‌ನಂತೆ ಐದು ಸ್ಪೀಡ್ ಅಥವಾ ಆಟೋಮ್ಯಾಟಿಕ್‌ಗಳಂತೆ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವುದೇ ಎಂಬುದು ಇನ್ನೂ ತಿಳಿದು ಬಂದಿಲ್ಲ.


Click it and Unblock the Notifications