ಡಿಸೆಂಬರ್ ಸೇಲ್ಸ್; ಮುಂದುವರಿದ ಮಾರುತಿ ಪಾರುಪತ್ಯ

Written By:

2013 ಡಿಸೆಂಬರ್ ತಿಂಗಳ ಮಾರಾಟದಲ್ಲೂ ಉತ್ತಮ ಸೇಲ್ಸ್ ಕಾಯ್ದುಕೊಂಡಿರುವ ಮಾರುತಿ ಸುಜುಕಿ, ತಾವ್ಯಾಕೆ ದೇಶದ ಅತಿದೊಡ್ಡ ಕಾರು ಕಂಪನಿ ಎಂಬುದನ್ನು ಮಗದೊಮ್ಮೆ ನಿರೂಪಿಸಿದೆ. ಐಕಾನಿಕ್ ಕಾರುಗಳಾದ ಆಲ್ಟೊ, ಸ್ವಿಫ್ಟ್, ಸ್ವಿಫ್ಟ್ ಡಿಜೈರ್, ವ್ಯಾಗನಾರ್ ಮತ್ತು ಓಮ್ನಿ ಕಾರುಗಳು ಮಾರುತಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಉಳಿದಂತೆ ಟಾಪ್ 10 ಪಟ್ಟಿಯಲ್ಲಿ ಹ್ಯುಂಡೈ, ಮಹೀಂದ್ರ ಮತ್ತು ಇನ್ನೋವಾ ಕಾರುಗಳು ಕಾಣಿಸಿಕೊಂಡಿವೆ. ಆದರೆ ಮಾರುತಿ ಸೇಲ್ಸ್ ಮುಂದುಗಡೆ ಇವೆಲ್ಲವೂ ಮಂಕಾಗಿವೆ.

ಅಚ್ಚರಿ...
ಈ ನಡುವೆ ಹೋಂಡಾ ಅಮೇಜ್, ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್‌ಗಳಂತಹ ಪ್ರಖ್ಯಾತ ಕಾರುಗಳು ಟಾಪ್ 10ರ ಪಟ್ಟಿಯಿಂದ ಹೊರದಬ್ಬಲ್ಪಟ್ಟಿರುವುದು ಅಚ್ಚರಿ ಮೂಡಿಸಿದೆ.

ಆಲ್ಟೊ ನಂ.1
  

ಆಲ್ಟೊ ನಂ.1

ಎಂದಿನಂತೆ ಡಿಸೆಂಬರ್ ತಿಂಗಳ ಮಾರಾಟದಲ್ಲೂ ಅಗ್ರಸ್ಥಾನ ಕಾಪಾಡಿಕೊಳ್ಳುವಲ್ಲಿ ಮಾರುತಿ ಆಲ್ಟೊ (ಎ ಸೆಗ್ಮೆಂಟ್ ಕಾರು) ಯಶಸ್ವಿಯಾಗಿದೆ. ಹಾಗಿದ್ದರೂ ಕಳೆದ ಬಾರಿಗೆ ಹೋಲಿಸಿದರೆ ಶೇಕಡಾ 9.2ರಷ್ಟು (23,823 ಯುನಿಟ್ ಮಾರಾಟ) ಕುಸಿತ ಅನುಭವಿಸಿದೆ.

ಸ್ವಿಫ್ಟ್ ದ್ವಿತೀಯ
  

ಸ್ವಿಫ್ಟ್ ದ್ವಿತೀಯ

ಮಾರುತಿ ಆಲ್ಟೊ ತರಹನೇ ಸ್ವಿಫ್ಟ್ (ಬಿ2 ಸೆಗ್ಮೆಂಟ್) ದ್ವಿತೀಯ ಸ್ಥಾನ ಆಲಂಕರಿಸಿದ್ದರೂ ಕಳೆದ ಬಾರಿಗಿಂತಲೂ ಶೇಕಡಾ 3.7ರಷ್ಟು (16788 ಯುನಿಟ್ ಮಾರಾಟ) ಕುಸಿತ ಕಂಡಿದೆ.

ಡಿಜೈರ್ ಅಬ್ಬರ
  

ಡಿಜೈರ್ ಅಬ್ಬರ

ಆದರೆ ಸಿ1 ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಂಡಿರುವ ಸ್ವಿಫ್ಟ್ ಡಿಜೈರ್ ಶೇಕಡಾ 18ರಷ್ಟು ಭರ್ಜರಿ ಏರಿಕೆ ದಾಖಲಿಸುವ ಮೂಲಕ ಒಟ್ಟು 15427 ಯುನಿಟ್ ಮಾರಾಟ ಕಂಡುಕೊಂಡಿದೆ.

ವ್ಯಾಗನಾರ್ ಸೂಪರ್
  

ವ್ಯಾಗನಾರ್ ಸೂಪರ್

ಮಾರುತಿಯ ಇನ್ನೊಂದು ಜನಪ್ರಿಯ ಕಾರಾಗಿರುವ ಮಾರುತಿ ವ್ಯಾಗನಾರ್ (ಬಿ1 ಸೆಗ್ಮೆಂಟ್) ಬರೋಬ್ಬರಿ ಶೇಕಡಾ 181.6ರಷ್ಟು ವರ್ಧನೆ ದಾಖಲಿಸಿದ್ದು, ಡಿಸೆಂಬರ್‌ನಲ್ಲಿ ಒಟ್ಟು 12154 ಯುನಿಟ್ ಮಾರಾಟ ಕಂಡಿದೆ.

ಹ್ಯುಂಡೈ ಎಂಟ್ರಿ
  

ಹ್ಯುಂಡೈ ಎಂಟ್ರಿ

ಕೊನೆಗೂ ಐದನೇ ಸ್ಥಾನದಲ್ಲಾದರೂ ಮಾರುತಿ ಕೋಟೆಯನ್ನು ಭೇಡಿಸಿರುವ ಹ್ಯುಂಡೈನ ಹೊಸ ಐ10 ಗ್ರಾಂಡ್ (ಬಿ2 ಸೆಗ್ಮೆಂಟ್) 9077 ಯುನಿಟ್ ಸಂಖ್ಯೆ ಮಾರಾಟ ಸಾಧಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

ಬೊಲೆರೊ ನೊ ಕಾಮೆಂಟ್ಸ್
  

ಬೊಲೆರೊ ನೊ ಕಾಮೆಂಟ್ಸ್

ಅಚ್ಚರಿಯೆಂಬಂತೆ ದಶಕದ ಬಳಿಕವೂ ಮಾರಾಟದಲ್ಲಿ ಟಾಪ್ 10ರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಲ್ಲಿ ಮಹೀಂದ್ರ ಬೊಲೆರೊ (ಯುಟಿಲಿಟಿ) ಯಶಸ್ಸನ್ನು ಕಂಡಿದೆ. ಹಾಗಿದ್ದರೂ ಮಾರಾಟದಲ್ಲಿ ಕಳೆದ ಬಾರಿಗಿಂತಲೂ ಶೇಕಡಾ 8.8ರಷ್ಟು (8465 ಯುನಿಟ್) ಇಳಿಕೆ ಕಂಡಿದೆ

ಐಕಾನಿಕ್ ಓಮ್ನಿ
  

ಐಕಾನಿಕ್ ಓಮ್ನಿ

ಇನ್ನು ಮಾರುತಿಯ ಸರ್ವಕಾಲಿಕ ಕಾರಲ್ಲಿ ಒಂದಾಗಿರುವ ಮಾರುತಿ ಓಮ್ನಿ (ಯುಟಿಲಿಟಿ) ಮತ್ತೆ ಸದ್ದು ಮಾಡುವಲ್ಲಿ ಯಶಸ್ವಿಯಾಗಿದೆ. ಇದು ಕಳೆದ ಬಾರಿಗಿಂತಲೂ ಶೇಕಡಾ 17.9 (5590 ಯುನಿಟ್ ಮಾರಾಟ) ವರ್ಧನೆ ದಾಖಲಿಸಿದೆ.

ಇಯಾನ್ ಎಂಟ್ರಿ
  

ಇಯಾನ್ ಎಂಟ್ರಿ

ಈ ನಡುವೆ ಕಳೆದ ವರ್ಷಕ್ಕಿಂತ ಶೇಕಡಾ 30.8ರಷ್ಟು (5428 ಯುನಿಟ್ ಸೇಲ್ಸ್) ಕುಸಿತ ಅನುಭವಿಸಿದ ಹೊರತಾಗಿಯು ಹ್ಯುಂಡೈ ಇಯಾನ್ (ಎ ಸೆಗ್ಮೆಂಟ್) ಎಂಟನೇ ಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

 ಎರ್ಟಿಗಾ ಶೈನಿಂಗ್
  

ಎರ್ಟಿಗಾ ಶೈನಿಂಗ್

ಅದೇ ರೀತಿ ಶೇಕಡಾ 5.5ರಷ್ಟು (4924 ಯುನಿಟ್ ಮಾರಾಟ) ಕುಸಿತದ ನಡುವೆಯೂ ಒಂಬತ್ತನೇ ಸ್ಥಾನ ಆಲಂಕರಿಸಲು ಎರ್ಟಿಗಾ ಯಶಸ್ವಿಯಾಗಿದೆ. ಈ ಮೂಲಕ ಟಾಪ್ 10 ಸೇಲ್ಸ್ ಪಟ್ಟಿಯಲ್ಲಿ ಮಾರುತಿ ಆರು ಕಾರುಗಳು ಗುರುತಿಸಿಕೊಂಡಿವೆ.

ಅಚ್ಚುಮೆಚ್ಚಿನ ಇನ್ನೋವಾ
  

ಅಚ್ಚುಮೆಚ್ಚಿನ ಇನ್ನೋವಾ

ಅಂತಿಮವಾಗಿ ಟೊಯೊಟಾದ ಜನ ಮೆಚ್ಚುಗೆಯ ಕಾರಾಗಿರುವ ಇನ್ನೋವಾ (ಯುಟಿಲಿಟಿ) ಟಾಪ್ 10 ಪಟ್ಟಿಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೂ ಕಳೆದ ಬಾರಿಗಿಂತಲೂ ಶೇಕಡಾ 23.8ರಷ್ಟು (4918 ಯುನಿಟ್ ಮಾರಾಟ) ಕುಸಿತ ಅನುಭವಿಸಿದೆ.

Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark