ಮಾರುತಿ ಎ ಸ್ಟಾರ್ ಬದಲಿ ಕಾರಿನ ಹೆಸರು ಏನು ಗೊತ್ತೇ?

By Nagaraja

ಭಾರತ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ಮಾರುತಿ ಎ ಸ್ಟಾರ್ ವಿಫಲವಾಗಿರಬಹುದು. ಸಣ್ಣ ಕಾರು ಮಾರುಕಟ್ಟೆಯಲ್ಲಿ ಆಲ್ಟೊ ಅಲೆ ದೇಶದ ಅತಿ ದೊಡ್ಡ ಕಾರು ಸಂಸ್ಥೆಯ ಇನ್ನೊಂದು ಆವೃತ್ತಿಗೆ ಆಘಾತ ನೀಡಿರಬಹುದು. ಇದೇ ಕಾರಣಕ್ಕೆ ಎ ಸ್ಟಾರ್ ಮಾರಾಟವನ್ನು ಸ್ಥಗಿತಗೊಳಿಸಲು ಮಾರುತಿ ನಿರ್ಧಾರ ಕೈಗೊಂಡಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಎ ಸ್ಟಾರ್ ಸ್ಥಾನಕ್ಕೆ ಹೊಸ ಕಾರಿನ ಆಗಮನ ಸಂಸ್ಥೆಯ ನಿರೀಕ್ಷೆಗಳಿಗೆ ಹೊಸ ಹುರುಪನ್ನು ತಂದಿದೆ.

ದೆಹಲಿ ಆಟೋ ಎಕ್ಸ್ ಪೋ ಸುದ್ದಿ ಮಿಸ್ ಮಾಡಿದ್ರಾ? ಇಲ್ಲಿದೆ ಓದಿ

ಈಗಾಗಲೇ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಾಧಾನ್ಯ ಗಿಟ್ಟಿಸಿಕೊಂಡಿರುವ ಸುಜುಕಿಯ ವೈಎಲ್7 ಕೋಡ್ ಪಡೆದುಕೊಂಡಿರುವ ಮುಂಬರುವ ಎ ವಿಂಡ್ ಕಾಂಪಾಕ್ಟ್ ಕಾರು 2013 ನವೆಂಬರ್‌ನಲ್ಲಿ ನಡೆದ ಥಾಯ್ಲೆಂಡ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿತ್ತು. ಅಷ್ಟಕ್ಕೂ ಈ ಹೊಸ ಕಾರಿನ ಹೆಸರು ಏನೆಂಬುದು ನಿಮಗೆ ಗೊತ್ತೇ? ಕುತೂಹಲಕಾರಿ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಮಾರುತಿ ಎ ಸ್ಟಾರ್ ಬದಲಿ ಕಾರು ಸೆಲೆರಿಯೊ

ಹೌದು, ಎ ಸ್ಟಾರ್ ಬದಲಿಯಾಗಲಿರುವ ಮಾರುತಿಯ ಹೊಸ ಕಾಂಪಾಕ್ಟ್ ಕಾರು ಸೆಲೆರಿಯೊ (Celerio) ಎಂಬ ಹೆಸರು ಪಡೆದುಕೊಳ್ಳಲಿದೆ.

ಮಾರುತಿ ಎ ಸ್ಟಾರ್ ಬದಲಿ ಕಾರು ಸೆಲೆರಿಯೊ

ಇದು ಕೇವಲ ಎ ಸ್ಟಾರ್‌ಗೆ ಮಾತ್ರ ಬದಲಿ ಕಾರಲ್ಲ. ಮಾರಾಟ ಸ್ಥಗಿತಗೊಂಡಿರುವ ಜೆನ್ ಎಸ್ಟಿಲೊ ಕಾರಿಗೂ ಉತ್ತರಾಧಿಕಾರಿ ಎನಿಸಿಕೊಳ್ಳಲಿದೆ.

ಮಾರುತಿ ಎ ಸ್ಟಾರ್ ಬದಲಿ ಕಾರು ಸೆಲೆರಿಯೊ

ನಿಮ್ಮ ಮಾಹಿತಿಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಸೆಲೆರಿಯೊ ಮುಂದಿನ ತಲೆಮಾರಿನ ಆಲ್ಟೊ (ಭಾರತದಲ್ಲಿ ಎ ಸ್ಟಾರ್) ಎನಿಸಿಕೊಳ್ಳಲಿದೆ. ಈ ಮೂಲಕ ಆಲ್ಟೊ ಬ್ಯಾಡ್ಜ್ ವಿದೇಶದಲ್ಲಿ ಕೊನೆಗೊಳ್ಳಲಿದೆ.

ಮಾರುತಿ ಎ ಸ್ಟಾರ್ ಬದಲಿ ಕಾರು ಸೆಲೆರಿಯೊ

ಇನ್ನು ಭಾರತದ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಬರುವ ಫೆಬ್ರವರಿ ತಿಂಗಳಲ್ಲಿ ನೆಡಯಲಿರುವ ಆಟೋ ಎಕ್ಸ್ ಪೋದಲ್ಲಿ ಸೆಲೆರಿಯೊ ಪ್ರದರ್ಶನ ಕಾಣಲಿದೆ. ಇದು ಸೆಲೆರಿಯೊದ ಜಾಗತಿಕ ಆಗಮನ ಕೂಡಾ ಆಗಿರಲಿದೆ.

ಮಾರುತಿ ಎ ಸ್ಟಾರ್ ಬದಲಿ ಕಾರು ಸೆಲೆರಿಯೊ

ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಕ್ರಣಮಣಕಾರಿ ಫ್ರಂಟ್ ಲುಕ್ ಪಡೆದುಕೊಂಡಿದೆ. ಹಾಗೆಯೇ ಎ ಸ್ಟಾರ್‌ಗಿಂತಲೂ ಹೆಚ್ಚು ಸ್ಥಳಾವಕಾಶವನ್ನು ಹೊಂದಿರಲಿದೆ.

ಮಾರುತಿ ಎ ಸ್ಟಾರ್ ಬದಲಿ ಕಾರು ಸೆಲೆರಿಯೊ

ಎಂಜಿನ್ ಬಗ್ಗೆ ಮಾತನಾಡುವುದಾದರೆ ಕೆ10 ಪೆಟ್ರೋಲ್ ಎಂಜಿನ್ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇದು ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಲ್ಲಿ ಸಮಾನವಾಗಿರಲಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಡೀಸೆಲ್ ಎಂಜಿನ್ ಆಗಮನವಾದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

Article Published On: Friday, January 3, 2014, 9:57 [IST]
English summary
The much talked about upcoming compact car from Suzuki, known until now by its codename YL7 and previewed by the A-Wind Concept at the Thailand International Motor Show in November 2013, now has a name. Celerio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+