ಎಸ್ಟಿಲೊ ಉತ್ಪಾದನೆಗೆ ಮಾರುತಿಯಿಂದ ಶಾಶ್ವತ ಬ್ರೇಕ್

By Nagaraja

ಕಳಪೆ ಮಾರಾಟದ ಹಿನ್ನಲೆಯಲ್ಲಿ ಎಸ್ಟಿಲೊ ಮಾಡೆಲ್ ಉತ್ಪಾದನೆಯನ್ನು ಶಾಶ್ವತವಾಗಿ ನಿಲುಗಡೆಗೊಳಿಸಲು ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಿರ್ಧರಿಸಿದೆ.

ಜೆನ್ ಬದಲಿ ಕಾರಾಗಿ 2007ನೇ ಇಸವಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ್ದ ಎಸ್ಟಿಲೊ ನಿರೀಕ್ಷಿದಷ್ಟು ಯಶ ಸಾಧಿಸಲು ಸಾಧ್ಯವಾಗಲಿಲ್ಲ. ಆ ಬಳಿಕ ಮಾರುಕಟ್ಟೆಗೆ ಉತ್ತೇಜನ ನೀಡಲು 2009ನೇ ಇಸವಿಯಲ್ಲಿ ಪರಿಷ್ಕೃತ ಆವೃತಿ ಬಿಡುಗಡೆಗೊಳಿಸಿದರೂ ಇದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ.

ಮಾರಾಟ ಕುಂಠಿತ

ಮಾರಾಟ ಕುಂಠಿತ

1.1 ಲೀಟರ್ ಎಂಜಿನ್ ಬದಲು 1.0 ಲೀಟರ್ ಕೆ10 ಎಂಜಿನ್ ಆಳವಡಿಸಿದರೂ ಗ್ರಾಹಕರನ್ನು ಆಕರ್ಷಿಸುವಲ್ಲಿ ಎಸ್ಟಿಲೊ ವಿಫಲವಾಗಿತ್ತು.

ವೈಫಲ್ಯ

ವೈಫಲ್ಯ

ದೇಶದ ಕಾರು ಮಾರುಕಟ್ಟೆಯಲ್ಲಿ ಅರ್ಧದಷ್ಟು ಮಾರಾಟ ಶೇರುಗಳನ್ನು ಹೊಂದಿರುವ ಹೊರತಾಗಿಯೂ ಎಸ್ಟಿಲೊವನ್ನು ಉತ್ತೇಜಿಸುವಲ್ಲಿ ಕಂಪನಿ ವಿಫಲವಾಗಿತ್ತು.

ರಿಯಾಯಿತಿ ದರ

ರಿಯಾಯಿತಿ ದರ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಸ್ಟಿಲೊಗೆ 35ರಿಂದ 50 ಸಾವಿರ ರು.ಗಳ ವರೆಗೆ ವಿಶೇಷ ರಿಯಾಯಿತಿ ದರಗಳನ್ನು ನೀಡಲಾಗುತ್ತಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಆದಷ್ಟು ಬೇಗನೇ ಸರಕುಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ರಿಯಾಯಿತಿ ದರಗಳನ್ನು ಘೋಷಿಸುವ ಸಂಭವವಿದೆ.

ಹ್ಯಾಚ್‌ಬ್ಯಾಕ್

ಹ್ಯಾಚ್‌ಬ್ಯಾಕ್

ಒಟ್ಟಾರೆಯಾಗಿ ಎಸ್ಟಿಲೊ ಪ್ರಸಕ್ತ ಸಾಲಿನಲ್ಲಿ ಕತ್ತರಿ ಪ್ರಯೋಗ ಕಂಡಿರುವ ಮೂರನೇ ಹ್ಯಾಚ್‌ಬ್ಯಾಕ್ ಕಾರಾಗಿದೆ. ಈ ಹಿಂದೆ ಕಳಪೆ ಮಾರಾಟದಿಂದಾಗಿಯೇ ಸ್ಕೋಡಾ ಫ್ಯಾಬಿಯಾ ಹಾಗೂ ಹೋಂಡಾ ಜಾಝ್ ಕಾರುಗಳ ಉತ್ಪಾದನೆಯನ್ನು ನಿಲುಗಡೆಗೊಳಿಸಲಾಗಿತ್ತು.

ಮಾರುತಿ ಸ್ಟಿಂಗ್ರೇ

ಮಾರುತಿ ಸ್ಟಿಂಗ್ರೇ

ಪ್ರಸ್ತುತ ಎಸ್ಟಿಲೊ ಸ್ಥಾನವನ್ನು ಇದೀಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ವ್ಯಾಗನಾರ್ ಸ್ಟಿಂಗ್ರೇ ಆಕ್ರಮಿಸಿಕೊಳ್ಳಲಿದೆ.

More from DriveSpark

Article Published On: Saturday, August 24, 2013, 10:29 [IST]
English summary
The production of Maruti Estilo might be stopped due to poor sales. Read more about Maruti Estilo in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+