ಸದ್ಯದಲ್ಲೇ ಮಾರುತಿ ಎ-ಸ್ಟಾರ್ ಓಡಾಟ ನಿಲುಗಡೆ
ದೇಶದ ನಂ. 1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಸದ್ಯದಲ್ಲಿ ಹ್ಯಾಚ್‌ಬ್ಯಾಕ್ ಕಾರಾದ ಎ-ಸ್ಟಾರ್ ಉತ್ಪಾದನೆಯನ್ನು ನಿಲುಗಡೆಗೊಳಿಸಲಿದೆ. ಇದರೊಂದಿಗೆ ಮಾರುತಿ ಎಸ್ಟಿಲೊಗೆ ಬ್ರೇಕ್ ಬಿದ್ದ ಬೆನ್ನಲ್ಲೇ ಎ-ಸ್ಟಾರ್ ಕೂಡಾ ಓಡಾಟ ನಿಲ್ಲಿಸಲಿದೆ ಎಂದು ವಾಹನ ಮೂಲಗಳು ತಿಳಿಸಿವೆ.
ಭಾರತೀಯ ರಸ್ತೆಗಳಲ್ಲಿ ಜನರ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗಿರುವುದೇ ಮಾರುತಿ ಎ ಸ್ಟಾರ್ ವೈಫಲ್ಯಕ್ಕೆ ಕಾರಣವಾಗಿದೆ. ಇದೇ ಕಾರಿನ ಹಿಂಪಡೆತಕ್ಕೆ ಪ್ರಮುಖ ಕಾರಣವೆನ್ನಲಾಗುತ್ತಿದೆ. ಹಾಗಿದ್ದರೂ ಮುಂದಿನ ದಿನಗಳಲ್ಲಿ ಎ ಸ್ಟಾರ್ ಜಾಗದಲ್ಲಿ ಹೊಸತೊಂದು ಕಾರನ್ನು ನೋಡುವ ಅವಕಾಶ ಪಡೆಯಲಿದ್ದೀರಿ. ಅದ್ಯಾವ ಕಾರು? ಹೆಚ್ಚಿನ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

ಹಲವಾರು ವಿದೇಶ ರಾಷ್ಟ್ರಗಳಲ್ಲಿ ಆಲ್ಟೊ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿರುವ ಮಾರುತಿ ಸುಜುಕಿ ಹ್ಯಾಚ್‌ಬ್ಯಾಕ್ ಕಾರು ಭಾರತದಲ್ಲಿ ಎ ಸ್ಟಾರ್ ಎಂಬ ಹೆಸರಿನಿಂದ ಮಾರಾಟವಾಗುತ್ತಿತ್ತು.

ಕಳೆದ ಕೆಲವು ವರ್ಷಗಳಿಂದ ಮಾರುತಿ ಎ ಸ್ಟಾರ್ ಸೇರಿದಂತೆ ಎಸ್ಟಿಲೊ ಮಾರಾಟ ಧರೆಗುರುಳಿದೆ. ಅಲ್ಲದೆ ಕೇವಲ ರಫ್ತು ವಹಿವಾಟನ್ನು ಅವಲಂಬಿಸಿ ಮಾರಾಟ ಮುಂದುವರಿಸಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಮಾರುತಿಯ ಮಾನೇಸರ್ ಘಟಕದಲ್ಲಿ 7,171 ಎ ಸ್ಟಾರ್ ಯುನಿಟ್‌ಗಳನ್ನು ಉತ್ಪಾದಿಸಲಾಗಿತ್ತು. ಈ ಪೈಕಿ 6,500ರಷ್ಟು ಯುನಿಟ್‌ಗಳನ್ನು ಮಾತ್ರ ರಫ್ತು ಮಾಡಲಾಗಿತ್ತು.

ಇನ್ನೊಂದೆಡೆ ನಿಸ್ಸಾನ್ ಯುರೋಪ್ ಸಹ ಮಾರುತಿ ಎ ಸ್ಟಾರ್ ಅಥವಾ ಪಿಕ್ಸೊ ರಫ್ತನ್ನು ಸಹ ನಿಲುಗಡೆಗೊಳಿಸಿದೆ. ಇದು ಸಹ ಆರ್ಥಿಕವಾಗಿ ಮಾರುತಿಗೆ ದೊಡ್ಡ ಪೆಟ್ಟು ನೀಡುವಂತಾಗಿತ್ತು.

ಸದ್ಯ ಎ ಸ್ಟಾರ್ ಜಾಗದಲ್ಲಿ ಯಾವುದೇ ಕಾರುಗಳು ಕಾಣಿಸಿಕೊಂಡಿಲ್ಲ. ಆದರೆ ನಿಕಟ ಭವಿಷ್ಯದಲ್ಲಿ ಇದನ್ನು 'ವೈಎಲ್7' ಕೋಡ್ ಪಡೆದುಕೊಂಡಿರುವ ನೂತನ ಹ್ಯಾಚ್‌ಬ್ಯಾಕ್ ಕಾರು ಆವರಿಸಲಿದೆ.

ನೆಕ್ಸ್ಟ್ ಜನರೇಷನ್ ಆಲ್ಟೊ ಎಂದೇ ಬಿಂಬಿಸಲ್ಪಟ್ಟಿರುವ ನೂತನ ಹ್ಯಾಚ್‌ಬ್ಯಾಕ್ ಕಾರು, ಕೇವಲ ಎ ಕ್ಲಾಸ್‌ಗೆ ಮಾತ್ರವಲ್ಲದೆ ಎಸ್ಟಿಲೊ ಕಾರಿಗೂ ಬದಲಿ ವ್ಯವಸ್ಥೆಯಾಗಿರಲಿದೆ.

ಎ ಸ್ಟಾರ್ ಕಾರಿನಲ್ಲಿರುವ ಕೊರತೆಗಳನ್ನು ನೀಗಿಸಲು ವೈಎಲ್7 ಮೂಲಕ ಪ್ರಯತ್ನಿಸಲಾಗಿದೆ. ಇದು ಹಿಂಭಾಗದ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತಿದೆ. ಈಗಾಗಲೇ ಪರೀಕ್ಷಾರ್ಥ ಹಂತದಲ್ಲಿರುವ ವೈಎಲ್7, 2014 ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿದೆ.


Click it and Unblock the Notifications








